More

    ಅಪ್ಪ ಮಗ ಇಬ್ಬರಿಗೂ ಒಬ್ಬಳೇ ಹೆಂಡತಿ! ಆರ್​ಟಿಐ ವರದಿ ನೋಡಿ ಬೆಚ್ಚಿಬಿದ್ದ ಯುವಕ

    ಲಖನೌ: ಮದುವೆಯಾಗಿದ್ದ ಹೆಂಡತಿ ದೂರವಾದ ಮೇಲೆ ಅಕೆಯನ್ನು ಮತ್ತೆ ಎಲ್ಲೇ ನೋಡಿದರೂ ತಮ್ಮ ಹಳೆ ನೆನಪುಗಳು ಕಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕನ ಕಥೆ ಕೇಳಿದರೆ ಅಯ್ಯೋ ಪಾಪ ಎನಿಸದಿರದು. ಮದುವೆಯಾಗಿದ್ದ ಹೆಂಡತಿಯೇ ತನ್ನಿಂದ ದೂರಾಗಿ ತನ್ನ ತಂದೆಯನ್ನೇ ವರಿಸಿದ್ದಾಳೆ ಎನ್ನುತ್ತಾನೆ ಉತ್ತರ ಪ್ರದೇಶದ ಯುವಕ.

    ಯುವಕನೊಬ್ಬ 2016ರಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದನಂತೆ. ಆ ವೇಳೆಗೆ ಇಬ್ಬರೂ ಅಪ್ರಾಪ್ತರಾಗಿದ್ದರಾದರೂ ಅವರು ಆರು ತಿಂಗಳ ಕಾಲ ಸಂಸಾರ ನಡೆಸಿದ್ದರು. ಅದಾದ ಮೇಲೆ ಗಂಡ ಮದ್ಯಪಾನ ಮಾಡುತ್ತಾನೆ ಎನ್ನುವ ಕಾರಣ ಕೊಟ್ಟು ಯುವತಿ ಆತನಿಂದ ದೂರವಾಗಿದ್ದಳು. ಆತ ಅದೆಷ್ಟೇ ಬೇಡಿಕೊಂಡಿದ್ದರೂ ಅವಳು ಸಂಸಾರ ಮುಂದುವರಿಸಲು ಒಪ್ಪಿರಲಿಲ್ಲ.

    ಮದುವೆಯ ವಿಚಾರವನ್ನೇ ಮರೆತು 48 ವರ್ಷದ ಆತನ ಅಪ್ಪನೊಂದಿಗೇ ಜೀವನ ಮುಂದುವರಿಸಿದ್ದ. ಆತನ ಖರ್ಚಿಗೂ ಅಪ್ಪನೇ ಹಣ ಕೊಡುತ್ತಿದ್ದನಂತೆ. ಕೆಲ ತಿಂಗಳ ಹಿಂದೆ ಅಪ್ಪ ಮನೆ ಬಿಟ್ಟು ಹೋಗಿದ್ದು, ಮಗನಿಗೆ ಹಣ ಕೊಡುವುದನ್ನೂ ನಿಲ್ಲಿಸಿದ್ದಾನೆ. ಇದರಿಂದಾಗಿ ಬೇಸರಗೊಂಡ ಯುವಕ ಅಪ್ಪನ ಬಗ್ಗೆ ಮಾಹಿತಿ ಕೋರಿ ಆರ್​ಟಿಐ ಅರ್ಜಿ ಸಲ್ಲಿಸಿದ್ದಾನೆ. ಅದರಲ್ಲಿ ಆತ ಎರಡನೇ ಮದುವೆಯಾಗಿರುವುದು ಗೊತ್ತಾಗಿದೆ. ಯುವಕನನ್ನು ಮದುವೆಯಾಗಿ ಕೈ ಕೊಟ್ಟಿದ್ದ ಯುವತಿಯನ್ನೇ ಅಪ್ಪ ಮದುವೆಯಾಗಿರುವುದಾಗಿ ವರದಿಯಲ್ಲಿ ತಿಳಿದುಬಂದಿದೆ.

    ಇದನ್ನು ನೋಡಿ ಶಾಕ್ ಆದ ಯುವಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಎರಡೂ ಕಡೆಯವರನ್ನು ಕರೆಸಿ ಪೊಲೀಸರು ಮಾತನಾಡಿದ್ದಾರೆ. ಆದರೆ ನಾನು ಮೊದಲ ಮದುವೆಯಾಗುವಾಗ ಅಪ್ರಾಪ್ತಳಾಗಿದ್ದರಿಂದಾಗಿ ಆ ಮದುವೆ ಅಸಿಂಧು ಆಗಿದ್ದು, ಈಗ ಎರಡನೇ ಗಂಡನೊಂದಿಗೆ ಸಂತೋಷದಿಂದ ಇದ್ದೇನೆ. ಮತ್ತೆ ಮೊದಲನೇ ಗಂಡನ ಬಳಿ ಹೋಗುವ ಮಾತಿಲ್ಲ ಎಂದು ಯುವತಿ ಹೇಳಿದ್ದಾಳೆ. (ಏಜೆನ್ಸೀಸ್)

    ಐ ಹೇಟ್ ಮೈ ಲೈಫ್ ಎಂದು ನೋಟ್ ಬುಕ್ ತುಂಬ ಬರೆದಿಟ್ಟು ನೇಣಿಗೆ ಶರಣಾದ 9ನೇ ಕ್ಲಾಸ್ ಬಾಲಕಿ!

    ‘ರಫೇಲ್​ ಡೀಲ್​ನಲ್ಲಿ ಮಧ್ಯವರ್ತಿಗಳಿಗೆ ಕೊಟ್ಟಿದ್ದು ಕೋಟಿ ಕೋಟಿ ರೂಪಾಯಿ’ ಕಾಂಗ್ರೆಸ್ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts