More

    ಊಟ ಸಿಗದೆ ಸಾವನ್ನಪ್ಪಿದ ವೃದ್ಧ! ಊರಿಗೆ ಹೋಗಲು ಕೆಲ ಗಂಟೆಗಳಿರುವಾಗಲೇ ಕೊನೆಯುಸಿರು

    ಹಗರೆ (ಹಾಸನ): ಕರೊನಾ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ, ನಿಷೇಧಾಜ್ಞೆ ಜಾರಿ ಇತ್ಯಾದಿಗಳಿಂದ ಸಮಯಕ್ಕೆ ಸರಿಯಾಗಿ ಊಟ ಸಿಗದೆ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದ ವೃದ್ಧ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

    25 ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡು ಹಗರೆಯಲ್ಲೇ ವಾಸವಿದ್ದ ಚನ್ನೇಗೌಡ (70) ಊರಿಗೆ ಹೋಗಿರಲಿಲ್ಲ. ಇಬ್ಬರು ಪುತ್ರಿಯರಿದ್ದು ಮದುವೆ ಮಾಡಿಕೊಟ್ಟಿದ್ದೇನೆ ಎಂದು ಹೇಳುತ್ತಿದ್ದರು. ಬಹಳ ವರ್ಷಗಳಿಂದ ಇಲ್ಲಿಯೇ ಇದ್ದ ಚನ್ನೇಗೌಡ, ಕೆಲಸ ಮಾಡುವ ಸ್ಥಳಗಳಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಸ್ಥಳೀಯರು, ಪರಿಚಯಸ್ಥರು ನಿತ್ಯ ಊಟ ಕೊಡುತ್ತಿದ್ದರು. ಆದರೆ ಕರೊನಾ ಎರಡನೇ ಅಲೆಯ ತಡೆಗಾಗಿ ನಿಷೇಧಾಜ್ಞೆ, ವಾರಾಂತ್ಯ ಕರ್ಫ್ಯೂ, ಜನತಾ ಕರ್ಫ್ಯೂ ಇತ್ಯಾದಿ ಜಾರಿಗೊಂಡ ಬಳಿಕ ಊರಿಗೆ ಹೋಗುವಂತೆ ಪರಿಚಯಸ್ಥರು ಸೂಚಿಸಿದ್ದರು.

    ಆದರೆ ತಮ್ಮೂರಿನ ಬಸ್ ಏರಲು ಹಿಂದೇಟು ಹಾಕಿದ್ದ ಚನ್ನೇಗೌಡ, ತನಗಿಷ್ಟ ಬಂದ ಜಾಗದಲ್ಲಿ ಮಲಗುತ್ತಿದ್ದರು. ಆಗ ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಂಡಿದ್ದು, ಹೋಟೆಲ್‌ಗಳೆಲ್ಲ ಬಾಗಿಲು ಹಾಕಿದ್ದರಿಂದ ಊಟ, ಉಪಾಹಾರಕ್ಕೆ ತೊಂದರೆಯಾಗಿತ್ತು. ಬುಧವಾರ ಬೆಳಗ್ಗೆ ಗ್ರಾಪಂ ಸದಸ್ಯ ರಾಜಯ್ಯ ಅವರು ಖರ್ಚಿಗೆಂದು ಹಣ ನೀಡಿ ಬಸ್ ಹತ್ತಿಸಲು ನಿಂತಿದ್ದರು. ಆದರೆ ಕೆಲವೇ ಸಮಯದಲ್ಲಿ ಚನ್ನೇಗೌಡ ಮೃತಪಟ್ಟಿದ್ದಾರೆ. ಹಳೇಬೀಡು ಸಾರ್ವಜನಿಕ ಆಸ್ಪತ್ರೆಗೆ ಶವ ರವಾನಿಸಲಾಗಿದ್ದು, ಕುಟುಂಬಸ್ಥರ ಸಂಪರ್ಕಕ್ಕೆ ಪೊಲೀಸರು ಕ್ರಮ ವಹಿಸಿದ್ದಾರೆ.

    ರಾಜ್ಯದಲ್ಲಿ ಕರೊನಾ ಮಹಾಸ್ಫೋಟ! ಒಂದೇ ದಿನ 39 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆ

    ಲಾಕ್​ಡೌನ್​ 15 ದಿನ ವಿಸ್ತರಣೆಯಾಗುವುದು ಫಿಕ್ಸ್! ಮಾಹಿತಿ ಬಿಚ್ಚಿಟ್ಟ ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts