ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರ ವೈಯಕ್ತಿಕ ಫೋಟೋ, ವಿಡಿಯೋ ಹಾಕಿ ಮಾನಸಿಕ ಕಿರುಕುಳ ನೀಡುತ್ತಿದ್ದ ಮಾಜಿ ಪ್ರಿಯಕರನ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಾಯ್ಡುನಗರದ ಮಹಮದ್ ಫೈಜಾನ್ ವಿರುದ್ಧ ನಗರಸ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನಿಮಂಟಪದಲ್ಲಿರುವ ಬಡಾವಣೆಯೊಂದರ ಮಹಿಳೆಯೊಂದಿಗೆ ಆರೋಪಿ ಸಂಬಂಧ ಇರಿಸಿಕೊಂಡಿದ್ದ ಎನ್ನಲಾಗಿದೆ. ಆದರೆ ಆತನ ವರ್ತನೆ ಸರಿ ಇಲ್ಲದ ಕಾರಣ ದೂರವಾಗಿದ್ದಳು. ಬಳಿಕ ಸಂಬಂಧಿಯೊಂದಿಗೆ ಮಹಿಳೆ ಮದುವೆ ಅಗಿದ್ದರೂ ಮಹಮದ್ ಫೈಜಾನ್ ಇನ್ಸ್ಟಾಗ್ರಾಂ ನಲ್ಲಿ ಖಾತೆಯಲ್ಲಿ ಮಹಿಳೆಯ ವೈಯಕ್ತಿಕ ಫೋಟೋಗಳನ್ನ ಅಪ್ ಲೋಡ್ ಮಾಡಿದ್ದ. ಮತ್ತೊಂದು ಖಾತೆ ತೆರೆದು ಮಹಿಳೆಯ ಜತೆಗೆ ಇರುವ ಪೋಟೋ, ವಿಡಿಯೋ ಹಾಕಿದ್ದರಿಂದ ಮನನೊಂದು ಪೊಲೀಸರಿಗೆ ದೂರು ನೀಡಿದ್ದಾರೆ.
TAGGED:Man harassing woman arrested