More

    ಮದ್ವೆಗೆ ಬಂದವರ ಮೂಗಿಗೆ ನಿಂಬೆರಸ! ಧಾರವಾಡದಲ್ಲಿ ಗಮನ ಸೆಳೆದ ವಿವಾಹ

    ಧಾರವಾಡ: ಕರೊನಾ ನಿಯಂತ್ರಣಕ್ಕೆ ಮನೆ ಮದ್ದು ಸೂಕ್ತ. ಮೂಗಿಗೆ ನಿಂಬೆ ರಸ ಬಿಡುವುದರಿಂದ ದೇಹ ಆಕ್ಸಿಜನ್​ ಅನ್ನು ನಿಯಂತ್ರಿಸಬಹುದು ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಭಾನುವಾರದಂದು ತಿಳಿಸಿದ್ದರು. ಇದೀಗ ರಾಜ್ಯದ ಜನತೆ ಅದನ್ನು ಪಾಲಿಸಲಾರಂಭಿಸಿದೆ. ವಿಶೇಷವೆಂದರೆ ಇಲ್ಲೊಂದು ಮದುವೆ ಕಾರ್ಯಕ್ರಮದಲ್ಲೇ ಈ ಮನೆ ಮದ್ದನ್ನು ಪಾಲಿಸಿ, ಎಲ್ಲರ ಗಮನ ಸೆಳೆಯಲಾಗಿದೆ.

    ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದಲ್ಲಿ ಸೋಮವಾರ ಮೂರು ಜೋಡಿಗಳ ಮದುವೆ ನಡೆದಿದೆ. ಆತ್ಮಾನಂದ – ಲಕ್ಷ್ಮೀ, ಪರಮೇಶ್ವರ – ಕರೆವ್ವ ಹಾಗೂ ಯಲ್ಲಪ್ಪ – ಲಕ್ಷ್ಮೀ ಹೆಸರಿನ ಜೋಡಿ ದಾಂಪತ್ಯ ಜೀವನ ಆರಂಭಿಸಿದೆ. ಈ ಮದುವೆಗೆ ಬಂದಿದ್ದ ಗ್ರಾಮದ ಮುಖಂಡ ರಮೇಶ ಕುರುಬಗಟ್ಟಿ ಡಾ. ವಿಜಯ ಸಂಕೇಶ್ವರ ಅವರ ಅಭಿಮಾನಿ ಆಗಿದ್ದು, ಇಂದು ಬೆಳಗ್ಗೆ ಪತ್ರಿಕೆಯಲ್ಲಿ ಬಂದಿದ್ದ ಮನೆ ಮದ್ದಿನ ಬಗ್ಗೆ ತಿಳಿದುಕೊಂಡು, ಮದುವೆಯಲ್ಲಿ ಪಾಲ್ಗೊಂಡವರ ಮೂಗಿಗೆ ಲಿಂಬೆರಸ ಹಿಂಡಿದ್ದಾರೆ.

    ಮದುವೆಗೆ ಬಂದಿದ್ದವರು ಹಾಗೂ ವೇದಿಕೆ ಮೇಲಿದ್ದ ವಧು ವರರಿಗೂ ನಿಂಬೆ ರಸವನ್ನು ಮೂಗಿಗೆ ಬಿಡಲಾಗಿದೆ.

    ರಮೇಶ ಕುರುಬಗಟ್ಟಿ ಅವರು ಜಾನಪದ ಹಾಗೂ ಭಜನಾ ಪದ ಗಾಯಕರಾಗಿದ್ದಾರೆ. ನಿಂಬೆ ರಸದಿಂದ ಕಫ, ನೆಗಡಿ ಹಾಗೂ ಉಸಿರಾಟದ ತೊಂದರೆಯಾಗುವುದಿಲ್ಲ ಎಂದು ಓದಿದ್ದೇನೆ. ಆದ್ದರಿಂದ ಮದುವೆಯಲ್ಲಿ ಎಲ್ಲರ ಮೂಗಿಗೆ ನಿಂಬೆ ರಸ ಹಾಕಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

    ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಗಂಡ! ಇಷ್ಟಕ್ಕೆಲ್ಲ ಕಾರಣವಾಗಿದ್ದು ಏನು ಗೊತ್ತಾ?

    ‘ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ​ ದಾಖಲಿಸಬೇಕು’ ಅಸಮಾಧಾನ ಹೊರಹಾಕಿದ ಹೈ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts