More

    ಬರೋಬ್ಬರಿ 84 ವರ್ಷ ಒಂದೇ ಸಂಸ್ಥೆಯಲ್ಲಿ ದುಡಿದ ಈ ವ್ಯಕ್ತಿಯಿಂದ ವಿಶ್ವ​ ದಾಖಲೆ!

    ಬ್ರೆಜಿಲಿಯಾ: ಒಬ್ಬ ವ್ಯಕ್ತಿ ಒಂದೇ ಸಂಸ್ಥೆಯಲ್ಲಿ ಸರಾಸರಿ ಎಷ್ಟು ವರ್ಷ ದುಡಿಯಬಹುದು. ಗರಿಷ್ಠ 30 ವರ್ಷದವರೆಗೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುವುವವರು ಅತೀ ವಿರಳ. ಆದರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 8 ದಶಕಗಳ ಕಾಲ ಒಂದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

    ಒಂದೇ ಸಂಸ್ಥೆಯಲ್ಲಿ ಸತತ 84 ವರ್ಷ ಕೆಲಸ ಮಾಡುವ ಮೂಲಕ 100 ವರ್ಷದ ವ್ಯಕ್ತಿಯೋರ್ವ ಗಿನ್ನಿಸ್​ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಬ್ರೆಜಿಲ್​ನ ವಾಲ್ಟರ್​ ಆರ್ಥೊಮನ್​​ ಎಂಬ ವ್ಯಕ್ತಿ ಸ್ಯಾಂಟಾ ಕ್ಯಾಟರಿನಾ ನಗರದಲ್ಲಿರುವ ಟೆಕ್ಸ್​ಟೈಲ್ಸ್​ ಕಂಪನಿಗೆ 1938ರಲ್ಲಿ ಸೇರಿಕೊಳ್ಳುತ್ತಾರೆ.ಆಗ ಅವರ ವಯಸ್ಸು ಕೇವಲ 15. ವರ್ಷ. ಅಂದಿನಿಂದ ಇಂದಿನವರೆಗೂ ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರಂತೆ.

    ನೂರರ ಗಡಿ ದಾಟಿದ್ದರೂ ಇವರ ಉತ್ಸಾಹಕ್ಕೇನೂ ಕಮ್ಮಿ ಇಲ್ಲ. 84 ವರ್ಷ ಪೂರೈಸಿದ್ದಕ್ಕಾಗಿ ಸಂಸ್ಥೆಯಿಂದ ಇವರಿಗಾಗಿಯೇ ವಿಶೇಷ ಆಚರಣೆಯನ್ನು ಮಾಡಿತ್ತು.

    ನಾನು ಹೆಚ್ಚು ಪ್ಲಾನಿಂಗ್​ ಮಾಡುವುದಿಲ್ಲ, ನಾಳೆಯ ಬಗ್ಗೆ ಹೆಚ್ಚು ಯೋಜನೆಯನ್ನೂ ಹಾಕಿಕೊಳ್ಳುವುದಿಲ್ಲ. ನಾವು ಸದಾ ಪ್ರಸ್ತುತದಲ್ಲಿ ನಿರತರಾಗಿರಬೇಕು. ಭೂತ ಹಾಗೂ ಭವಿಷ್ಯತ್ತಿನಲ್ಲಲ್ಲ. ಇಲ್ಲಿ ಮತ್ತು ಈಗ ಮುಖ್ಯವಾದುದು ಹಾಗಾಗಿ ದಿನನಿತ್ಯ ಕೆಲಸಕ್ಕೆ ಹೋಗೋಣ ಎಂಬ ಸಂದೇಶವನ್ನು ಸಾರಿದ್ದಾರೆ.

    ಹಿಂದಿರುಗಿ ನೋಡಿದಾಗ ದಾಖಲೆಯನ್ನು ಮುರಿಯುವ ಯೋಚನೆ ಇಲ್ಲದಿದ್ದರೂ. ಮಾಡಿರುವ ಕಾರ್ಯಕ್ಕೆ ಹೆಮ್ಮೆಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

    ನಾಯಿ ತಿನ್ನಲು ಬಂದು ಬೋನಿಗೆ ಬಿತ್ತು ಚಿರತೆ!

    ಮಧ್ಯಪ್ರದೇಶ ವಿಪಕ್ಷ ನಾಯಕ ಸ್ಥಾನಕ್ಕೆ ಕಮಲನಾಥ್​ ಪದತ್ಯಾಗ: ಚುನಾವಣೆಗಾಗಿ ಕಾಂಗ್ರೆಸ್​​ ಪೂರ್ವ ತಯಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts