More

    ಎಮ್ಮೆ ಹುಟ್ಟುಹಬ್ಬ ಆಚರಿಸಿದವನ ವಿರುದ್ಧ ಪ್ರಕರಣ ದಾಖಲು: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

    ಥಾಣೆ: ಅನೇಕರು ತಮ್ಮ ಸಾಕು ಪ್ರಾಣಿಗಳ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿರುತ್ತಾರೆ. ಎಷ್ಟರ ಮಟ್ಟಿಗೆ ಅಂದರೆ ಪ್ರಾಣಿಗಳ ಹುಟ್ಟುಹಬ್ಬವನ್ನು ಆಚರಿಸುವಷ್ಟು. ಇಂತಹ ಸನ್ನಿವೇಶಗಳನ್ನು ನೋಡಿದಾಗ ಮನಸ್ಸಿಗೆ ಖುಷಿಯಾಗುವುದು ಸತ್ಯ.

    ಇದೇ ರೀತಿಯ ಸನ್ನಿವೇಶ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆಯಾದರೂ ಹುಟ್ಟುಹಬ್ಬದ ಬೆನ್ನಲ್ಲೇ ಸಾಕುಪ್ರಾಣಿಯ ಮಾಲೀಕನಿಗೆ ಆಘಾತವೊಂದು ಎದುರಾಗಿದೆ. ತನ್ನ ಸಾಕುಪ್ರಾಣಿಯ ಹುಟ್ಟುಹಬ್ಬವನ್ನು ಆಚರಿಸಿದ ವ್ಯಕ್ತಿಯ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.

    ಘಟನೆಯ ವಿವರಣೆಗೆ ಬರುವುದಾದರೆ, ಕಿರಣ್​ ಮಾತ್ರೆ (30) ಎಂಬುವರು ತನ್ನ ಮುದ್ದಿನ ಪ್ರಾಣಿ ಎಮ್ಮೆಯ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಥಾಣೆಯ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದರು.

    ಇದನ್ನೂ ಓದಿರಿ: ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತರ ಮುಖಕ್ಕೆ ಹ್ಯಾಂಡ್​ ಸ್ಯಾನಿಟೈಸರ್ ಸಿಂಪಡಿಸಿದ ಪ್ರಧಾನಿ!

    ಅಂದುಕೊಂಡಂತೆ ಹುಟ್ಟುಹಬ್ಬವೂ ನಡೆಯಿತು. ಆದರೆ, ಮಹಾರಾಷ್ಟ್ರದಲ್ಲಿ ಕರೊನಾ ಎರಡನೇ ಅಲೆಯಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಆದರೆ, ನಿಯಮಗಳನ್ನು ಅನುಸರಿಸದೇ ಹುಟ್ಟುಹಬ್ಬ ಆಚರಣೆ ಮಾಡಿರುವ ಆರೋಪ ಕಿರಣ್​ ವಿರುದ್ಧ ಕೇಳಿಬಂದಿದೆ.

    ಸಂಭ್ರಮಾಚರಣೆ ವೇಳೆ ಮಾಸ್ಕ್​ ಧರಿಸಿರಲಿಲ್ಲ. ಯಾರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಹೀಗಾಗಿ ಕಿರಣ್​ ವಿರುದ್ಧ ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

    ವಿದ್ಯಾಪೀಠ ಹಾಸ್ಟೆಲ್‌ನಲ್ಲಿ 8 ವಿದ್ಯಾರ್ಥಿಗಳಿಗೆ ಸೋಂಕು; ಒಂದೇ ತಿಂಗಳಲ್ಲಿ 11ನೇ ಕ್ಲಸ್ಟರ್ ಮಾದರಿ ಕೋವಿಡ್​ ಪ್ರಕರಣ

    ಸೆಕ್ಸ್ ಸಿಡಿ ಪ್ರಕರಣ; ಸಿಕ್ಕಿ ಬಿದ್ದವರ ಪೈಕಿ ಇಬ್ಬರ ತೀವ್ರ ವಿಚಾರಣೆ, ಎಫ್​ಎಸ್ಎಲ್​ ಕೇಂದ್ರದಲ್ಲೇ ಫುಲ್​ ಡ್ರಿಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts