More

    VIDEO| ಚಪ್ಪಲಿಯಲ್ಲಿಟ್ಟು 1 ಕೆ.ಜಿ ಚಿನ್ನಾಭರಣ ಸಾಗಿಸಲು ಯತ್ನಿಸಿ ಸಿಕ್ಕಿ ಬಿದ್ದ ಬೆಂಗಳೂರಿಗ

    ಬೆಂಗಳೂರು: ಬರೋಬ್ಬರಿ 1.2 ಕೆ.ಜಿ ತೂಕದ ಚಿನ್ನವನ್ನು ಚಪ್ಪಲಿಯಲ್ಲಿ ಅಕ್ರಮವಾಗಿ ತಂದಿದ್ದ ವ್ಯಕ್ತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್​ ಮಾಡಲಾಗಿದೆ.

    ಕಳ್ಳಸಾಗಣೆ ನಡೆಯದಂತೆ ಅಧಿಕಾರಿಗಳು ಇದೀಗ ವಿಮಾನದಲ್ಲಿ ಪ್ರಯಾಣಿಕರನ್ನು ಪರಿಶೀಲನೆ ಮಾಡಲಾಗುತ್ತಿದೆ. ಚಪ್ಪಲಿಯಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

    ಇದನ್ನೂ ಓದಿ: ತಾಯಿಯ ಹೊಟ್ಟೆಯಲ್ಲಿದ್ದ ಮಗುವಿನ ಹೃದಯ ಶಸ್ತ್ರಚಿಕಿತ್ಸೆ; ಏಮ್ಸ್‌ ವೈದ್ಯರಿಂದ ಯಶಸ್ವಿ ಚಿಕಿತ್ಸೆ

    ಮಾರ್ಚ್ 12 ರಂದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ತಡೆದಿದ್ದರು. ಆತ ವೈದ್ಯಕೀಯ ಉದ್ದೇಶಕ್ಕೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದನು. ಆದರೆ ವ್ಯಕ್ತಿ ಯಾವುದೇ ವೈದ್ಯಕೀಯ ದಾಖಲೆಗಳನ್ನು ನೀಡಲು ವಿಫಲನಾಗಿದ್ದಾನೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಆತನನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತನ ಚಪ್ಪಲಿಯಲ್ಲಿ ಗುಳಿಗಳನ್ನು ರಚಿಸಿ, ಚಿನ್ನದ ಗಟ್ಟಿಗಳನ್ನು ಹುದುಗಿಸಿಟ್ಟಿರುವುದು ಕಂಡುಬಂದಿದೆ.

    ಒಂದು ಜೊತೆ ಚಪ್ಪಲಿಯಲ್ಲಿ ಒಟ್ಟು 4 ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ವ್ಯಕ್ತಿಯ ಬಳಿಯಿಂದ ಒಟ್ಟು 69.40 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಶುದ್ಧತೆಯ ಸುಮಾರು 1.2 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts