More

    17 ನಿಮಿಷಗಳಲ್ಲೇ ನಡೆಯಿತು ಮದುವೆ; ವರದಕ್ಷಿಣೆಯಾಗಿ ಪಡೆದಿದ್ದು ‘ರಾಮಾಯಣ’

    ಲಖನೌ: ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ವಿಶೇಷ ಸ್ಥಾನಮಾನವಿದೆ. ಅದು ಒಂದು ದಿನದ ಆಚರಣೆಯಲ್ಲ. ಹಲವಾರು ಕಡೆಗಳಲ್ಲಿ ವಾರಗಟ್ಟಲೆ ಸಂಪ್ರದಾಯ ಆಚರಿಸಿ ಮದುವೆ ಸಂಭ್ರಮಿಸಲಾಗುತ್ತದೆ. ಆದರೆ ಈ ಮದುವೆ ಅದೆಲ್ಲದ್ದಕ್ಕೂ ತದ್ವಿರುದ್ಧ. ಮದುವೆ ಹೆಸರಿನಲ್ಲಿ ವ್ಯರ್ಥ ಖರ್ಚು ಮಾಡಬಾರದು ಎಂದು ಭಾವಿಸಿರುವ ಯುವಕನೊಬ್ಬ ಅತ್ಯಂತ ಸರಳವಾಗಿ ದೇವಸ್ಥಾನದಲ್ಲಿ ಕೇವಲ 17 ನಿಮಿಷಗಳಲ್ಲಿ ಮದುವೆ ಸಮಾರಂಭವನ್ನು ಮುಗಿಸಿದ್ದಾನೆ.

    ಉತ್ತರ ಪ್ರದೇಶದ ಶಹಜಹಾನಪುರದಲ್ಲಿ ಇಂತದ್ದೊಂದು ವಿಶೇಷ ಮದುವೆ ನಡೆದಿದೆ. ಪುಷ್ಪೇಂದ್ರ ದುಬೆ ಹೆಸರಿನ ವರ ಪ್ರೀತಿ ತಿವಾರಿ ಹೆಸರಿನ ವಧುವನ್ನು ಮದುವೆಯಾಗಿದ್ದಾನೆ. ಮದುವೆಗೆ ದಿಬ್ಬಣವಾಗಲೀ, ಅಲಂಕಾರವಾಗಲೀ ಯಾವುದೂ ಇರಲಿಲ್ಲ. ಕಾಳಿ ದೇವಿಯ ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆದಿದೆ. ಪರಸ್ಪರ ಹಾರ ಬದಲಾಯಿಸಿಕೊಂಡ ನಂತರ, ವಧುವಿಗೆ ವರ ತಾಳಿ ಕಟ್ಟಿದ್ದಾನೆ. ದೇವಸ್ಥಾನವನ್ನು ಏಳು ಸುತ್ತು ಸುತ್ತಿ, ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ.

    ಅಂದ ಹಾಗೆ ಈ ಮದುವೆಯಲ್ಲಿ ವರ ತೆಗೆದುಕೊಂಡ ವರದಕ್ಷಿಣೆಯೂ ವಿಶೇಷವೇ. ವರದಕ್ಷಿಣೆ ಪಿಡುಗು ನಾಶವಾಗಬೇಕು ಎಂದು ಬಲವಾಗಿ ನಂಬಿರುವ ಪುಷ್ಪೇಂದ್ರ ತನ್ನ ಅತ್ತೆ ಮಾವನ ಬಳಿ ವರದಕ್ಷಿಣೆ ಕೊಡಲೇ ಬೇಕು ಎನ್ನುವುದಾದರೆ ನನಗೆ ರಾಮಾಯಣ ಪುಸ್ತಕ ಕೊಡಿ ಎಂದು ಕೇಳಿದ್ದನಂತೆ.

    ನನ್ನ ಹಾಗೆ ಎಲ್ಲ ಯುವಜನತೆ ಸರಳ ಮದುವೆಯತ್ತ ಮುಖ ಮಾಡಬೇಕು, ವ್ಯರ್ಥ ಖರ್ಚು ಮತ್ತು ವರದಕ್ಷಿಣೆ ಪಿಡುಗು ನಮ್ಮಿಂದ ದೂರಾಗಬೇಕು ಎನ್ನುತ್ತಾರೆ ನವ ವಿವಾಹಿತ ಪುಷ್ಪೇಂದ್ರ. (ಏಜೆನ್ಸೀಸ್)

    ‘₹15 ಲಕ್ಷದ ಡೈಮೆಂಡ್​ ರಿಂಗ್​ ತಂದ್ಕೊಟ್ರೆ, ಅದರ ಬಗ್ಗೆನೇ ಅನುಮಾನ ಪಟ್ಟು ನನ್ನ ಬಿಟ್ಟೋದ್ಲು’

    ಸಾಯುತ್ತಿದ್ದ ಅಮ್ಮನಿಗಾಗಿ ವಿಡಿಯೋ ಕಾಲ್​ನಲ್ಲೇ ಹಾಡು ಹೇಳಿದ ಮಗ! ಕಣ್ಣೀರು ತರಿಸುವ ಕಥೆ ಹಂಚಿಕೊಂಡ ಡಾಕ್ಟರ್

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts