More

    ಯುವತಿಯರೇ ಹುಷಾರ್​ ಇಂಥವರು ಇರ್ತಾರೆ: ಈತನ ಖತರ್ನಾಕ್​ ಬುದ್ಧಿ ಗೊತ್ತಾದ್ರೆ ಬೆರಗಾಗ್ತೀರಾ…!

    ಬೆಂಗಳೂರು: ಉದ್ಯಮಿ ಅಂತ ಹೇಳಿ 10ಕ್ಕೂ ಹೆಚ್ಚು ಯುವತಿಯರ ಸ್ನೇಹ ಬೆಳೆಸಿ ವಂಚಿಸುತ್ತಿದ್ದ ಖತರ್ನಾಕ್ ಅಸಾಮಿಯನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    ಕೇರಳ ಮೂಲದ ಜೋ‌ ಅಬ್ರಾಹಂ ಮ್ಯಾಥೀವ್ಸ್ ಎಂಬಾತನನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಡೇಟಿಂಗ್ ಆಪ್ ಮೂಲಕ ಯುವತಿಯರ ಪರಿಚಯ ಮಾಡಿಕೊಳ್ಳುತ್ತಿದ್ದ ಮ್ಯಾಥೀವ್ಸ್, ತುಂಬಾ ಪರಿಚಯವಾಗಿ ಕೆಲ ದಿನಗಳು ಕಳೆದ ನಂತರ ಬ್ಯುಸಿನೆಸ್ ಲಾಸ್ ಆಗುತ್ತದೆ ಹಣ ಸಾಲ ನೀಡಿ ಎಂದು ಹೇಳಿ ಲಕ್ಷಾಂತರ ಹಣ ಹಾಗೂ ಚಿನ್ನಾಭರಣ ಪಡೆಯುತ್ತಿದ್ದ. ಬಳಿಕ ವಾಪಸ್​ ನೀಡದೆ ಮೊಬೈಲ್​ ನಂಬರ್​ ಬದಲಿಸಿ ವಿಲಾಸಿ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇನ್ನಿಲ್ಲ ಪಿಂಚಣಿ ಚಿಂತೆ: ಹೊಸ ಹುದ್ದೆಗೇರಿದ ಎನ್​ಪಿಎಸ್ ಸಿಬ್ಬಂದಿಗೆ ಹಳೇ ಪೆನ್ಶನ್

    ಬಾಡಿಗೆಗೆ ಐಶಾರಾಮಿ ಕಾರು ಪಡೆದು ಉದ್ಯಮಿ ಎಂದು ಬಿಲ್ಡಪ್ ಕೊಡ್ತಿದ್ದ ಆರೋಪಿ, ಕೋರಮಂಗಲದ ಯುವತಿಯೋರ್ವಳಿಗೆ ಮದುವೆಯಾಗುವುದಾಗಿ ಹೇಳಿ 34 ಲಕ್ಷ ರೂ.ಹಣ ಪಡೆದು ವಂಚಿಸಿದ್ದಾನೆ. ಸಂತ್ರಸ್ತೆ ನೀಡಿದ್ದ ದೂರಿನ ಹಿನ್ನಲೆ ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದ ವಿವೇಕನಗರ ಪೊಲೀಸರು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳ 8 ಪ್ರಕರಣಗಳು, ಕೇರಳದಲ್ಲಿ 2 ವಂಚನೆ ಪ್ರಕರಣಗಳು ಮೊದಲೇ ದಾಖಲಾಗಿತ್ತು. (ದಿಗ್ವಿಜಯ ನ್ಯೂಸ್​)

    ಕರೊನಾ ವಿರುದ್ಧ ಹೋರಾಡಲು ಯೋಗ ಪ್ರಮುಖ ಅಸ್ತ್ರ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts