More

    ಮರ್ಸಿಡಿಸ್​ಗೆ ಸನ್ನಿ ಲಿಯೋನ್​ ಪತಿಯ ಕಾರಿನ ನಂಬರ್​ ಅಳವಡಿಸಿ ಅಲೆದಾಡುತ್ತಿದ್ದವ ಅಂದರ್​!

    ಮುಂಬೈ: ಬಾಲಿವುಡ್​ ನಟಿ ಸನ್ನಿ ಲಿಯೋನ್​ ಪತಿ ಡೇನಿಯಲ್​ ವೆಬರ್ ಕಾರಿನ ನಂಬರ್​ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮುಂಬೈನ ವರ್ಸೋವಾ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಪಿಯುಷ್​ ಸೇನ್​ ಎಂದು ಗುರುತಿಸಲಾಗಿದೆ. ಬುಧವಾರ ಒಂದು ದಿನದವರೆಗೆ ಪೊಲೀಸ್​ ಕಸ್ಟಡಿಯಲ್ಲಿದ್ದ ಪಿಯುಷ್​ರನ್ನು ದಂಡ ಕಟ್ಟಿಸಿಕೊಂಡು ಎಚ್ಚರಿಕೆ ನೀಡಿ ಇಂದು ಬಿಟ್ಟು ಕಳುಹಿಸಿದ್ದಾರೆ.

    ಇನ್ನು 2020ರ ಸೆಪ್ಟೆಂಬರ್​ನಲ್ಲಿ ಸಂಚಾರ ನಿಯಮ ಉಲ್ಲಂಘನೆ ಅಡಿಯಲ್ಲಿ ಸನ್ನಿ ಪತಿ ಡೇನಿಯಲ್​ ಕೆಲವು ರಶೀದಿಗಳನ್ನು ಸ್ವೀಕರಿಸಿದ್ದರಂತೆ. ಆದರೆ, ನಿಯಮ ಉಲ್ಲಂಘನೆ ಮಾಡಿದ್ದು ಇದೇ ಪಿಯುಷ್​ ಸೇನ್​ ಎಂದು ಮುಂಬೈ ಸಂಚಾರಿ ನಿಯಂತ್ರಣ ಡಿಸಿಪಿ ಮಾಹಿತಿ ನೀಡಿದರು.

    ಇದನ್ನೂ ಓದಿರಿ: ಬೈಕ್​ ಕಳ್ಳನ ಸೆರೆ ಹಿಡಿಯಿತು ಸಿಸಿಟಿವಿ ಕ್ಯಾಮರಾ, ವಿಡಿಯೋ ಈಗ ವೈರಲ್…

    ಪಿಯುಷ್​ ಹೇಗೆ ಸಿಕ್ಕಿಬಿದ್ದ?
    ಡೇನಿಯಲ್ ಕಾರು​ ಚಾಲಕ ಅಕ್ಬರ್​ ಖಾನ್​ ಮಂಗಳವಾರ ಸೇಮ್​ ನಂಬರ್​ ಇರುವ ಕಾರನ್ನು ಅಂಧೇರಿಯಲ್ಲಿರುವ ಅಚ್ಯುತ್​ರಾವ್​ ಪಟವರ್ಧನ್​ ಮಾರ್ಗ್​ ಬಳಿ ಪತ್ತೆ ಹಚ್ಚಿದ್ದಾರೆ. ಬಳಿಕ ಕಾರಿನ ನಂಬರ್​ ದುರ್ಬಳಕೆ ಆಗುತ್ತಿರುವುದನ್ನು ಡಿಎನ್​ ನಗರ ಸಂಚಾರಿ ಕಾನ್ಸ್​ಟೇಬಲ್​ಗೆ ಅಕ್ಬರ್​ ದೂರು ನೀಡಿದ್ದಾರೆ. ಈ ವೇಳೆ ಕಾನ್ಸ್​ಟೇಬಲ್​ ಪಿಯುಷ್​​ನನ್ನು ತಡೆದು ದಾಖಲೆಗಳನ್ನು ತೋರಿಸುವಂತೆ ಕೇಳಿದ್ದಾರೆ.

    ಈ ವೇಳೆ ಪಿಯುಷ್​ ಕಾರಿನ ದಾಖಲೆಗಳನ್ನು ತೋರಿದ್ದಾನೆ. ಆದರೆ, ನೋಂದಣಿ ಮತ್ತು ಚಾಸಿಸ್​ ಸಂಖ್ಯೆಯಲ್ಲಿ ವ್ಯತ್ಯಾಸ ಇರುವುದನ್ನು ಕಾನ್ಸ್​ಟೇಬಲ್​ ಗಮನಿಸಿದ್ದಾರೆ. ಇದಾದ ಬಳಿಕ ಡೇನಿಯಲ್​ ಸಹ ಮುಂಬೈ ಠಾಣೆಗೆ ಆಗಮಿಸಿ ಕಾರಿನ ದಾಖಲೆಗಳನ್ನು ನೀಡಿದ್ದಾರೆ. ಆಗಲೇ ಪಿಯುಷ್​ಗೆ ಗೊತ್ತಾಗಿದ್ದು ಇಷ್ಟು ದಿನ ತಾನು ಬಳಸುತ್ತಿದ್ದು ಸನ್ನಿ ಲಿಯೋನ್​ ಪತಿಯ ಕಾರಿನ ನಂಬರ್​ ಎಂದು. ತಕ್ಷಣ ಆತ ಗೊಂದಲಕ್ಕೀಡಾದ.

    ಇದಾದ ಬಳಿಕ ಪಿಯುಷ್​ ವಿರುದ್ಧ ಮುಂಬೈ ಸಂಚಾರಿ ಪೊಲೀಸರು ಮೋಟಾರು ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿ ಕ್ರಮ ಜರುಗಿಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸರ್ಕಾರದ ಹೊಸ ನೀತಿಯಿಂದ ವಾಟ್ಸ್​ಆ್ಯಪ್​ಗೆ ಬ್ರೇಕ್?! ಇನ್ಮೇಲೆ ವಾಟ್ಸ್​ಆ್ಯಪ್​​ ಕಥೆ ಏನು?

    ಕೆಎಸ್​ಆರ್​ಟಿಸಿ ಬಸ್​ ಕಳುವು ಮಾಡಿದವ ಅಂದರ್​: ಖದೀಮ ಕೊಟ್ಟ ಕಾರಣ ಕೇಳಿ ಪೊಲೀಸರೇ ತಬ್ಬಿಬ್ಬು!

    ಪ್ರವಾಸಿ ಆಸ್ಟ್ರೇಲಿಯಾ ಎದುರು ಕಿವೀಸ್ ತಂಡಕ್ಕೆ 4 ರನ್ ರೋಚಕ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts