More

    “ಚುನಾವಣೆ ಮುಗಿಯೋ ಮುನ್ನ ಮಮತಾ ಬ್ಯಾನರ್ಜಿ ಜೈ ಶ್ರೀ ರಾಮ್ ಅಂತಾರೆ”

    ಕೊಲ್ಕತ್ತಾ: ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಮುಗಿಯೋಕೆ ಮುಂಚೆ ಮಮತಾ ಬ್ಯಾನರ್ಜಿ ಜೈ ಶ್ರೀ ರಾಮ್ ಅಂತ ಜಪಿಸೋಕೆ ಶುರು ಮಾಡ್ತಾರೆ ಅಂತ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಷಾ ಹೇಳಿದ್ದಾರೆ. ಉತ್ತರ ಬಂಗಾಳದ ಕೂಚ್​ ಬೆಹಾರ್​ನಲ್ಲಿ ನಡೆದ ರಾಲಿಯಲ್ಲಿ ಗುರುವಾರ ಮಾತನಾಡಿದ ಷಾ, ಈ ಮಾತು ಹೇಳಿದ್ದಾರೆ.

    ಜನವರಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ ಸಾರ್ವಜನಿಕ ಸಮಾರಂಭವೊಂದರಲ್ಲಿ ಜನರು ಜೈ ಶ್ರೀ ರಾಮ್ ಸ್ಲೋಗನ್​ ಕೂಗಿದಾಗ ರಾಜ್ಯದ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಭಾಷಣವನ್ನು ಮುಂದುವರಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಯನ್ನು ಉಲ್ಲೇಖಿಸಿದ ಷಾ, ”ಜೈಶ್ರೀ ರಾಮ್” ಎಂದು ಭಾರತದಲ್ಲಿ ಕೂಗದೆ, ಪಾಕಿಸ್ತಾನದಲ್ಲಿ ಕೂಗುತ್ತಾರಾ?” ಎಂದು ಕೇಳಿದ್ದಾರೆ. “ಮಮತಾ ಅವರು ‘ಜೈಶ್ರೀ ರಾಮ್ ‘ ಘೋಷಣೆ ಬಗ್ಗೆ ಸಿಟ್ಟು ಮಾಡಿಕೊಳ್ಳುತ್ತಾರೆ, ಆದರೆ, ವಿಧಾನಸಭೆ ಚುನಾವಣೆ ಮುಗಿಯುವ ಹೊತ್ತಿಗೆ ಅವರೇ ಅದನ್ನು ಜಪಿಸಲು ಆರಂಭಿಸುತ್ತಾರೆ” ಎಂದಿದ್ದಾರೆ.

    ಇದನ್ನೂ ಓದಿ: ರಾಜ್ಯಸಭೆಯಲ್ಲಿ ದೇವೇಗೌಡರ ಪ್ರಶಂಸಿಸಿದ ಪ್ರಧಾನಿ- ಅವರಿಗೆ ಆಭಾರಿ ಎಂದ ಮೋದಿ

    ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಡೆವಲಪ್​ಮೆಂಟ್​ ಮಾಡೆಲ್’ ಮತ್ತು ಸಿಎಂ ಮಮತಾ ಬ್ಯಾನರ್ಜಿ ಅವರ ‘ಡಿಸ್ಟ್ರಕ್ಷನ್​ ಮಾಡೆಲ್​’ಗಳ ಮಧ್ಯೆ ಹೋರಾಟ ನಡೆಯಲಿದೆ ಎಂದ ಷಾ, ಅಭಿವೃದ್ಧಿಯ ವಿಷಯದಲ್ಲಿ ಬ್ಯಾನರ್ಜಿ ಸರ್ಕಾರವನ್ನು ಖಂಡಿಸಿದ್ದಾರೆ. “ಮೋದಿ ಸರ್ಕಾರ ‘ಜನಕಲ್ಯಾಣ’ಕ್ಕಾಗಿ ಕೆಲಸ ಮಾಡುತ್ತದೆ. ಮಮತಾ ಬ್ಯಾನರ್ಜಿ ‘ಬತೀಜಾ ಕಲ್ಯಾಣ’ಕ್ಕಾಗಿ – ಅವರ ಸೋದರ ಅಳಿಯ ಅಭಿಷೇಕ್ ಬ್ಯಾನರ್ಜಿ ಒಳಿತಿಗಾಗಿ – ದುಡಿಯುತ್ತಾರೆ” ಎಂದು ಟೀಕಿಸಿದ್ದಾರೆ. ಇದೇ ಅಸಮಾಧಾನದ ಮೇಲೆ ಹಲವು ಟಿಎಂಸಿ ನಾಯಕರು ಇತ್ತೀಚೆಗೆ ಬಿಜೆಪಿ ಕಡೆಗೆ ಹೆಜ್ಜೆ ಹಾಕಿದರು ಎನ್ನಲಾಗಿದೆ.

    “ಪಶ್ಚಿಮ ಬಂಗಾಳದಲ್ಲಿ ಅಧಿಕಾರದತ್ತ ಬಿಜೆಪಿಯ ನಡೆಯನ್ನು ಟಿಎಂಸಿಯ ರೌಡಿಗಳು ತಡೆಯಲಾಗುವುದಿಲ್ಲ” ಎಂದ ಷಾ, ಬಿಜೆಪಿ ಭಾರೀ ಸಂಖ್ಯೆಯಲ್ಲಿ ಜಯ ಸಾಧಿಸುವ ಆಶಯ ಹೊಂದಿದ್ದಾರೆ. ಒಟ್ಟು 294 ವಿಧಾನಸಭೆ ಸೀಟುಗಳಲ್ಲಿ 200 ಸೀಟುಗಳನ್ನು ಗೆಲ್ಲುವ ಗುರಿಯನ್ನು ರಾಜ್ಯ ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)

    ಮುಸ್ಲಿಂ ಹೆಣ್ಣುಮಕ್ಕಳಿಗೆ 18 ವರ್ಷ ಆಗದಿದ್ದರೂ ಪ್ರೌಢಾವಸ್ಥೆಗೆ ಬಂದರೆ ಮದುವೆಗೆ ಸ್ವತಂತ್ರರು; ಹೈಕೋರ್ಟ್​

    ರೈತ ಮುಖಂಡರಿಂದ ಜೀವಕ್ಕೆ ಅಪಾಯವಿದೆ- ಹಿಂಸಾಚಾರದ ಕುರಿತು ನಟ ದೀಪ್​ ಸಿಧು ಹೇಳಿರುವ ಮಾಹಿತಿ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts