More

    ಅಂತೂ ನಂದಿಗ್ರಾಮದಲ್ಲಿ ಗೆದ್ದು ಬೀಗಿದ ದೀದಿ: ಬಿಜೆಪಿಗೆ ತೀವ್ರ ಮುಖಭಂಗ!

    ನಂದಿಗ್ರಾಮ್: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಂತೂ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಪ್ರಯಾಸದ ಗೆಲುವು ಕಂಡಿದ್ದಾರೆ.

    ಕೇವಲ 1200 ಮತಗಳ ಅಂತರದಿಂದ ದೀದಿ ಗೆಲುವು ದಾಖಲಿಸುವ ಮೂಲಕ ತಾವು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲು ಹಾದಿ ಸುಗಮ ಮಾಡಿಕೊಂಡಿದ್ದಾರೆ.

    ಮತ ಎಣಿಕೆಯ ಆರಂಭದಿಂದಲೂ ಸುವೇಂದು ಅಧಿಕಾರಿ ಹಾಗೂ ಮಮತಾ ಬ್ಯಾನರ್ಜಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ವಿಜಯ ಮಾಲೆ ತೂಗೂಯ್ಯಾಲೆಯಲ್ಲಿತ್ತು. ಒಮ್ಮೆ ಸುವೇಂದು ಮುನ್ನಡೆ ದಾಖಲಿಸಿದರೇ ಮತ್ತೊಮ್ಮೆ ಮಮತಾ ಮುನ್ನಡೆ ದಾಖಲಿಸುತ್ತಿದ್ದರು. ಅಂತಿಮ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಮಮತಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಪಶ್ಚಿಮ ಬಂಗಾಳದದ ಒಟ್ಟು 292 ವಿಧಾನಸಭಾ ಕ್ಷೇತ್ರಗಳ ಪೈಕಿ ಟಿಎಂಸಿ 210 ಸ್ಥಾನಗಳನ್ನು ಗೆಲ್ಲುವತ್ತ ದಾಪುಗಾಲು ಹಾಕಿದೆ. ಬಿಜೆಪಿಗೆ ಹಿನ್ನಡೆಯಾಗಿದ್ದು 80 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಕಂಡು ಕೊಂಡಿದ್ದಾರೆ. ಈ ಮೂಲಕ ಮಮತಾ ಬ್ಯಾನರ್ಜಿ ಅವರು ಸತತವಾಗಿ ಮೂರನೇ ಬಾರಿಗೆ ಪಶ್ಚಿಮ ಬಂಗಾಳದ ಗದ್ದುಗೆ ಏರಿದಂತಾಗುತ್ತದೆ. ಬಹುಮತಕ್ಕೆ 148 ಸ್ಥಾನಗಳು ಬೇಕು.

    ಮಮತಾಗೆ ಅಭಿನಂದನೆಗಳ ಮಹಾಪೂರ: ದೀದೀ ಓ ದೀದೀ ಅಂದೋರೆಲ್ಲಿ ಹೋದ್ರು ಎಂದು ಅಖಿಲೇಶ್‌ ವ್ಯಂಗ್ಯ

    ಕೇರಳದಲ್ಲಿ ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದ ಫಲಿತಾಂಶ- ಸೋಲಿನ ಅಂಚಿನಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts