More

    ದೀದಿ ಡಿಸ್ಚಾರ್ಜ್​: ವೀಲ್​ಚೇರ್​ನಲ್ಲಿ ಆಸ್ಪತ್ರೆಯಿಂದ ಹೊರಬಂದ ಮಮತಾ ಬ್ಯಾನರ್ಜಿ

    ಕೋಲ್ಕತ: ಚುನಾವಣಾ ಪ್ರಚಾರ ಮಾಡುವ ವೇಳೆ ಕಾಲಿಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸತತ 48 ಗಂಟೆಗಳ ಚಿಕಿತ್ಸೆಯ ನಂತರ ಇದೀಗ ದೀದಿ ಅವರ ನಿವಾಸಕ್ಕೆ ವಾಪಾಸಾಗಿದ್ದಾರೆ.

    ಮಮತಾ ಅವರು ಬುಧವಾರದಂದು ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಗಾಯಾಳುವಾದರು. ನಾಲ್ಕೈದು ಜನರು ತಮ್ಮ ಮೇಲೆ ದಾಳಿ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಘಟನೆಯ ಸ್ಥಳದಲ್ಲಿದ್ದ ಸಾರ್ವಜನಿಕರು ಅದನ್ನು ಆಕಸ್ಮಿಕ ಘಟನೆ ಎಂದು ವಿವರಿಸಿದ್ದಾರೆ. ಕಾರಿನ ಬಾಗಿಲ ಹೊಡೆತದಿಂದಲೇ ಅವರ ಕಾಲು ಮುರಿದಿದ್ದಾಗಿ ಜನರು ತಿಳಿಸಿದ್ದಾರೆ.

    ಬುಧವಾರ ಸಂಜೆಯೇ ಮಮತಾ ಅವರನ್ನು ಕೋಲ್ಕತದ ಎಸ್​ಎಸ್​ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿದ್ದುಕೊಂಡೇ ದೀದಿ ತಮ್ಮ ಕಾರ್ಯಕರ್ತರಿಗೆ ಶಾಂತವಾಗಿರಲು ವಿಡಿಯೋ ಸಂದೇಶ ಹರಿಬಿಟ್ಟಿದ್ದರು. ಮಮತಾ ಅವರ ಆರೋಗ್ಯ ಸ್ಥಿರವಾಗಿದೆ, 48 ತಾಸುಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇಟ್ಟುಕೊಳ್ಳಲಿದ್ದೇವೆ ಎಂದು ವೈದ್ಯರು ತಿಳಿಸಿದ್ದರು. ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಇನ್ನು ಒಂದು ವಾರದಲ್ಲಿ ಅವರ ಆರೋಗ್ಯ ಇನ್ನಷ್ಟು ಸುಧಾರಿಸುವುದಾಗಿ ವೈದ್ಯರು ತಿಳಿಸಿದ್ದಾರೆ. ವೀಲ್​ ಚೇರ್​ನಲ್ಲಿ ಕುಳಿತೇ ಪ್ರಚಾರ ಮಾಡುವ ಪಣವನ್ನು ದೀದಿ ತೊಟ್ಟಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    5ನೇ ವಯಸ್ಸಿಗೇ ಲೈಂಗಿಕ ಕಿರುಕುಳ, 9ಕ್ಕೆ ರೇಪ್​ಗೆ ಒಳಗಾಗಿದ್ದರಂತೆ ಸಲ್ಮಾನ್​ ಖಾನ್​ರ ಎಕ್ಸ್​ ಗರ್ಲ್​ಫ್ರೆಂಡ್​!

    ಬಿ.ಎಸ್ಸಿ ನರ್ಸಿಂಗ್ ಪರೀಕ್ಷೆ ಮುಗಿದ 24 ಗಂಟೆಗಳಲ್ಲೇ ಫಲಿತಾಂಶ; ಪಾಸಾದವರಿಗಿಂತ ಫೇಲಾದವರೇ ಹೆಚ್ಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts