More

    ಹಾಸನದಲ್ಲಿ ಕರೊನಾ ಭೀತಿ ಹುಟ್ಟಿಸಿದ ಕೇರಳ ಚಿತ್ರತಂಡ!

    ಹಾಸನ: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿ ತೇಲುವ ಟೈಟಾನಿಕ್ ಎಂದು ಖ್ಯಾತಿಯಾಗಿರುವ ತಾಲೂಕಿನ ಶೆಟ್ಟಿಹಳ್ಳಿಯ ಐತಿಹಾಸಿಕ ಸಂತರೋಜರಿ ಚರ್ಚ್‌ನಲ್ಲಿ ಚಿತ್ರೀಕರಣ ನಡೆಸುತ್ತಿರುವ ಮಾಲಿವುಡ್ ಚಿತ್ರತಂಡವೊಂದು ನಗರದಲ್ಲಿ ವಾಸ್ತವ್ಯ ಹೂಡಿರುವುದು ಕೋವಿಡ್ 19 ಹರಡುವ ಭೀತಿ ಹುಟ್ಟಿಸಿದೆ.

    ಮಿನ್ನಲ್ ಮುರಲಿ ಎಂಬ ಮಲೆಯಾಳಂ ಸಿನಿಮಾ ಚಿತ್ರೀಕರಣಕ್ಕಾಗಿ ಸುಮಾರು 150 ಜನರ ತಂಡವೊಂದು ನಗರಕ್ಕೆ ಆಗಮಿಸಿದ್ದು, ಮೂರು ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಿದ್ದು, ಅವರು ಕೋವಿಡ್ 19 ಪರೀಕ್ಷೆಗೆ ಒಳಪಟ್ಟ ವರದಿಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೆ ನೀಡಿಲ್ಲ.
    ಕೇರಳದಲ್ಲಿ ಕರೊನಾ 2ನೇ ಅಲೆ ಕಾಣಿಸಿಕೊಂಡಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಅಲ್ಲಿಂದ ಆಗಮಿಸಿರುವ ಚಿತ್ರತಂಡದಿಂದ ನಗರ ಹಾಗೂ ಚಿತ್ರೀಕರಣ ನಡೆಯುವ ಶೆಟ್ಟಿಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕರೊನಾ ಹರಡುವ ಸಾಧ್ಯತೆಗಳು ಆತಂಕ ಮೂಡಿಸಿದೆ. ಇದನ್ನೂ ಓದಿರಿ ಇನ್ನೂ 19 ಜನರ ಸೆಕ್ಸ್​ ಸಿಡಿ ಇದೆ, ಒಬ್ಬ ಮಾಜಿ ಸಿಎಂ ಅದಕ್ಕಾಗಿಯೇ ರೆಸಾರ್ಟ್​ಗೆ ಹೋಗ್ತಾರೆ..!

    ಡಿಎಚ್‌ಒ ಭೇಟಿ: ಕೇರಳದಿಂದ ನೂರೈವತ್ತು ಜನರು ಆಗಮಿಸಿರುವ ಸುದ್ದಿ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ. ಸತೀಶ್‌ಕುಮಾರ್, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚಿತ್ರೀಕರಣ ಸ್ಥಳಕ್ಕೆ ತೆರಳಿ ಅಲ್ಲಿನ ವ್ಯವಸ್ಥಾಪಕರಿಂದ ಕೋವಿಡ್ 19 ತಡೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದರು.

    ಚಿತ್ರತಂಡದ ಸದಸ್ಯರು ನಗರದ ಕೈಗಾರಿಕಾ ಪ್ರದೇಶದ ಮೂರು ಹೋಟೆಲ್‌ಗಳಲ್ಲಿ ತಂಗಿದ್ದು, ಮೂರು ದಿನಗಳ ಹಿಂದೆ ರ‌್ಯಾಪಿಡ್ ಟೆಸ್ಟ್ ವರದಿ ನೀಡಿದ್ದೇವೆ ಎಂದು ತಂಡದ ವ್ಯವಸ್ಥಾಪಕ ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಡಿಎಚ್‌ಒ, ಕೇರಳದಲ್ಲಿ ಪ್ರಕರಣಗಳು ಹೆಚ್ಚಿದ್ದು, 150 ಜನರಲ್ಲಿ ಯಾರಿಗಾದರೂ ಸೋಂಕು ಇದ್ದರೆ ತಂಡದವರೆಲ್ಲ ಪಾಸಿಟಿವ್ ಆಗುವ ಸಾಧ್ಯತೆ ಇದೆ. ಅಲ್ಲದೆ ಅವರು ಓಡಾಡುವ ಸ್ಥಳ ಹಾಗೂ ಕೆಲಸ ಮಾಡುವ ಜಾಗಗಳಲ್ಲಿಯೂ ಸೋಂಕು ಹರಡುತ್ತದೆ. ಆದ್ದರಿಂದ ಎಲ್ಲರೂ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಬರುವವರೆಗೂ ಕಾಯಬೇಕು ಎಂದು ಸೂಚಿಸಿದರು.

    ಇದಕ್ಕೆ ಒಪ್ಪಿದ ಚಿತ್ರತಂಡದ ವ್ಯವಸ್ಥಾಪಕರು ನಮ್ಮ ಕಲಾವಿದರು, ತಂತ್ರಜ್ಞರು ವಾಸ್ತವ್ಯ ಹೂಡಿರುವ ವಸತಿ ಗೃಹಗಳಿಂದಲೇ ಸ್ಯಾಂಪಲ್ ಪಡೆದುಕೊಂಡರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸತೀಶ್, ಇಂದೇ ಎಲ್ಲರಿಂದಲೂ ಗಂಟಲು ದ್ರವದ ಸ್ಯಾಂಪಲ್ ಸಂಗ್ರಹಿಸಿ ಹಿಮ್ಸ್ ಪ್ರಯೋಗಾಲಯಕ್ಕೆ ರವಾನಿಸಲಾಗುವುದು. ಚಿತ್ರೀಕರಣ ತಂಡದ ಎಲ್ಲರೂ ಕೋವಿಡ್ ಹರಡುವಿಕೆ ತಡೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕಾಂತರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮುಂತಾದವರಿದ್ದರು.

    ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

    ಇನ್ನೂ 19 ಜನರ ಸೆಕ್ಸ್​ ಸಿಡಿ ಇದೆ, ಒಬ್ಬ ಮಾಜಿ ಸಿಎಂ ಅದಕ್ಕಾಗಿಯೇ ರೆಸಾರ್ಟ್​ಗೆ ಹೋಗ್ತಾರೆ..!

    ರಮೇಶಣ್ಣನ ಮರ್ಯಾದೆ ತೆಗೆಯಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ, ದಿನೇಶ್ ಕಲ್ಲಹಳ್ಳಿ ಕೇವಲ ದಾಳ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts