ಸಿನಿಮಾ

ಗಂಡು ಮೆಟ್ಟಿನ ನಾಡಿನಲ್ಲಿ ಮೋದಿ ಮೋಡಿ

ಬೆಳಗಾವಿ(ಬೈಲಹೊಂಗಲ): ಅಭಿವೃದ್ಧಿಯಲ್ಲಿ ರಾಜ್ಯವನ್ನು ನಂ.೧ ಸ್ಥಾನದಲ್ಲಿ ತರುವುದಕ್ಕಾಗಿ ತಮ್ಮ ಉತ್ಸಾಹ, ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ.ಬಿಜೆಪಿ ಬಹುಮತದ ಸರ್ಕಾರವನ್ನು ತರುವುದಕ್ಕಾಗಿ ಇಲ್ಲಿಯ ಜನತೆ, ರೈತರು, ಕೂಲಿಕಾರ್ಮಿಕರು ಹಾಗೂ ಸಮಸ್ತ ಜನತೆ ನಿರ್ಧರಿಸಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಮೋದಿ ಪುನರುಚ್ಚರಿಸಿದರು.

ಬೈಲಹೊಂಗಲ ಸಮೀಪದ ಬೈಲವಾಡ ಕ್ರಾಸ್‌ ಬಳಿ ನವಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಂದಿನ ಬುಧವಾರ ಕರ್ನಾಟಕದ ಭವಿಷ್ಯವನ್ನು ಡಬಲ್‌ ಎಂಜಿನ್‌ ಸರ್ಕಾರಕ್ಕೆ ನೀಡಲು ಜನತೆ ಈಗಾಗಲೇ ತಿರ್ಮಾನಿಸಿದ್ದಾರೆ. ಯುವಕರು, ಮಹಿಳೆಯರು, ನಿರ್ಗತಿಕರು, ದಲಿತರು, ಲಂಬಾಣಿ ಜನತೆ ತುಂಬಾ ವಿಶ್ವಾಸವಿಟ್ಟಿದ್ದಾರೆ.

ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳು ಅತ್ಯಂತ ವೇಗವಾಗಿ ನಡೆಯುತ್ತೀವೆ ಎಂದರು. ವಿಮಾನ ನಿಲ್ದಾಣ, ಆಧುನಿಕ ರೈಲು ನಿಲ್ದಾಣ ಅಭಿವೃದ್ಧಿ ಕಾರ್ಯ ಚುರುಕಾಗಿ ನಡೆಯುತ್ತೀವೆ.ಶೂರ ಸಂಗೊಳ್ಳಿ ರಾಯಣ್ಣನನ ತವರೂರಾದ ಸಂಗೊಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ್‌ ಶಾಲೆ ಸಿದ್ಧವಾಗಿದೆ ಎಂದು ಮೋದಿ ಹೇಳಿದರು. ಕರ್ನಾಟಕವನ್ನು ನಂ.೧ ಸ್ಥಾನದಲ್ಲಿ ತರಲು ಯಾರಿಂದ ಸಾಧ್ಯವಿದೆ ಎಂದು ಪ್ರಶ್ನಿಸಿದರು.

ಬಿಜೆಪಿಗೆ ಮತ ನೀಡಿದರೇ ಕರ್ನಾಟಕವನ್ನು ನಂ.೧ ಸ್ಥಾನದಲ್ಲಿ ತರುವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಮತಬ್ಯಾಂಕ್‌ ರಾಜಕಾರಣ ಮಾಡುತ್ತಿರುವ ಸಮಾಜವನ್ನು ಛಿದ್ರಗೊಳಿಸುತ್ತಿದ್ದು,ಜಾತಿಜಾತಿಗಳ ನಡುವೆ ವಿಷ ಬೀಜವನ್ನು ಕಾಂಗ್ರೆಸ್‌ ಪಕ್ಷ ಬಿತ್ತುತಿದ್ದು.

ಕಾಂಗ್ರೆಸ್-ಜೆಡಿಎಸ್‌ ವಿರುದ್ಧ ವಾಗ್ದಾಳಿ: ಇದು ಅಭಿವೃದ್ಧಿ ಮಾಡುವ ದಾರಿಯಲ್ಲ. ಯುವಕರು ಸಂಕ್ಷಿಪ್ತದಾರಿಯಲ್ಲಿ ಅಧಿಕಾರಿ ಪಡೆಯುವುದಕ್ಕೆ ಹವಣಿಸುವವರಿಗೆ(ಕಾಂಗ್ರೆಸ್‌-ಜೆಡಿಎಸ್‌ ನವರಿಗೆ)ಅಧಿಕಾರ ನೀಡಬಾರದು ಎಂದು ಮೋದಿ ಮನವಿ ಮಾಡಿದರು. ಬಿಜೆಪಿ ಸರ್ಕಾರವು ತಮ್ಮ ಸೇವಕನಂತೆ ಕೆಲಸ ಮಾಡುತ್ತಿದೆ. ಜೆಡಿಎಸ್‌ವೊಂದು ಖಾಸಗಿ ಕಂಪನಿಯಾಗಿದೆ.ಕಾಂಗ್ರೆಸ್‌ ತುಷ್ಟೀಕರಣವನ್ನು ದೊಡ್ಡ ಅಸ್ತ್ರವನ್ನಾಗಿಸಿದೆ. ಕಾಂಗ್ರೆಸ್‌ ಪಕ್ಷವೂ ದೆಹಲಿಯಲ್ಲಿರುವ ಪರಿವಾರದ ಸಲುವಾಗಿ ಕೆಲಸ ಮಾಡುತ್ತಿದೆ ಎಂದು ಮೋದಿ ಆರೋಪಿಸಿದರು. ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗದವರು, ನಿಮ್ಮ ಭವಿಷ್ಯವನ್ನು ಏನೂ? ರೂಪಿಸುತ್ತಾರೆ ಎಂದು ಪ್ರಧಾನಿ ಮೋದಿ ಜೆಡಿಎಸ್‌-ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರಿ ಪರೀಕ್ಷೆಗಳು ಕೇವಲ ಹಿಂದಿ-ಇಂಗ್ಲಿಷ್‌ದಲ್ಲಿ ಇರುತ್ತಿದ್ದವು. ಇದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಅದಕ್ಕಾಗಿ ಈಗ ಪ್ರಾದೇಶೀಕ ಭಾಷೆಯಲ್ಲಿ ಅನುಕೂಲತೆ ಕಲ್ಪಿಸಲಾಗಿದೆ ಎಂದು ಮೋದಿ ಹೇಳಿದರು. ಭೂಸೇನೆ, ನೌಕಾಪಡೆ, ವಾಯುಪಡೆಯಲ್ಲಿ ನೇಮಕಾತಿಯನ್ನು ಪ್ರಾರಂಭಿಸಿದ್ದು ನಮ್ಮ ಸರ್ಕಾರ ಎಂದರು. ಕಾಂಗ್ರೆಸ್‌ ಪಕ್ಷದವರು, ವೀರ ಸಾವರ್ಕರ್‌, ಡಾ.ಅಂಬೇಡ್ಕರ್‌, ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಸೇರಿದಂತೆ ಅನೇಕರಿಗೆ ಅವಮಾನ ಮಾಡಿದ್ದು, ಕಾಂಗ್ರೆಸ್‌ನ ಜಾಯಮಾನವಾಗಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ೨೦೦೯ರಲ್ಲಿ ಕೇವಲ ೧೦೦ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ ಬ್ಯಾಂಡ್‌ ಸಂಪರ್ಕ ನೀಡಿತ್ತು. ನಾವು ೨ ಲಕ್ಷ ಗ್ರಾಮಗಳಿಗೆ ಬ್ರಾಡ್‌ ಬ್ಯಾಂಡ್‌ ಸಂಪರ್ಕ ನೀಡಿದ್ದೇವೆ. ಜಗತ್ತಿನಲ್ಲಿಯೇ ಅತಿದೊಡ್ಡ ಪ್ಲಾಟ್‌ ಫಾರ್ಮನ್ನು ಹುಬ್ಬಳ್ಳಿಯಲ್ಲಿ ನಮ್ಮ ಸರ್ಕಾರ ನಿರ್ಮಾಣ ಮಾಡಿದೆ. ಅದಕ್ಕಾಗಿ ಯಾವ ಸರ್ಕಾರವನ್ನು ಗೆಲ್ಲಿಸಬೇಕು ಎಂಬುದನ್ನು ನೀವೆ ತಿರ್ಮಾನಿಸಿರಿ ಎಂದು ಮೋದಿ ಹೇಳಿದರು. ಕಬ್ಬಿನ ಬೆಳೆಗಾರರಿಗೆ ಎಥೆನಾಲ್‌ ಉತ್ಪಾದನೆಯಿಂದ ಹೆಚ್ಚಿನ ದರ ದೊರೆಯಲಿದೆ ಎಂದು ಮೋದಿ ಹೇಳಿದರು. ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಉತ್ತೇಜನ ನೀಡುವುದಕ್ಕಾಗಿ ೧೦ ಸಾವಿರ ಕೋಟಿ ರೂ. ಅನುದಾನವನ್ನು ನಮ್ಮ ಬಿಜೆಪಿ ಸರ್ಕಾರ ನೀಡಿದೆ ಎಂದರು.

ಕಿಸಾನ್‌ ಸಮ್ಮಾನ ಯೋಜನೆ ಮೂಲಕ ಬೆಳಗಾವಿ ಜಿಲ್ಲೆಯ ೧೩೦೦ ಕೋಟಿ ರೂ.ಗಳ ಸಹಾಯಧನವನ್ನು ರೈತರಿಗೆ ನೀಡಲಾಗಿದೆ ಎಂದರು. ಎಲ್ಲ ರಂಗಗಳಲ್ಲಿ ಉದ್ಯೋಗ ಮಾಡುವವರಿಗೆ ಮುದ್ರಾ ಯೋಜನೆ ಮೂಲಕ ಉದ್ಯೋಗವನ್ನುಸೃಷ್ಠಿಸಿಕೊಂಡಿದ್ದಾರೆ ಎಂದು ಮೋದಿ ಹೇಳಿದರು. ಶೀಘ್ರದಲ್ಲಿ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ನಂ.೧ ಮಾಡುವುದಕ್ಕಾಗಿ ತಾವು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿಗೆ ನೆನಪಿನ ಕಾಣಿಕೆ ನೀಡಿ ಗೌರವ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಣಿ ಚನ್ನಮ್ಮಳ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ರಮೇಶ ಜಾರಕಿಹೊಳಿ, ಅಭಯ ಪಾಟೀಲ, ಮಾಜಿ ಶಾಸಕರಾದ ಜಗದೀಶ ಮೆಟಗುಡ್‌, ಸಂಜಯ ಪಾಟೀಲ, ರತ್ಮಾ ಮಾಮನಿ, ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಇದ್ದರು.

Latest Posts

ಲೈಫ್‌ಸ್ಟೈಲ್