More

    ಈ ಚಿತ್ರದಲ್ಲಿ ಮೊದಲ ಬಾರಿಗೆ ಕೇಳಿಬರಲಿದೆ ಟ್ರಾನ್ಸ್‌ಜೆಂಡರ್ ಧ್ವನಿ; ಅವಕಾಶ ಸಿಕ್ಕಿದ್ಹೇಗೆ ಗೊತ್ತಾ?

    ಕೇರಳ: ಮಲಯಾಳಂ ಚಿತ್ರವೊಂದರಲ್ಲಿ ಇದೇ ಮೊದಲ ಬಾರಿಗೆ ಟ್ರಾನ್ಸ್‌ಜೆಂಡರ್​​​ರೊಬ್ಬರು ಧ್ವನಿ ನೀಡಿರುವ ಹಾಡುಗಳು ಕೇಳಿ ಬರಲಿವೆ. ಹೌದು, ಡ್ಯಾನ್ಸರ್ ಹಾಗೂ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಆಗಿರುವ ತಿರುವನಂತಪುರಂ ಮೂಲದ ಆರ್‌ಎಲ್‌ವಿ ಚಾರುಲತಾಗೆ ಇದ್ದಕ್ಕಿದ್ದಂತೆ ಈ ಅವಕಾಶ ಸಿಕ್ಕಿದೆ. ಇದೀಗ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

    ನೀತಿ ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡುವ ಅವಕಾಶ ಚಾರುಲತಾ ಅವರಿಗೆ ಸಿಕ್ಕಿದ್ದು, ಅದರಲ್ಲಿ ಒಂದು ಸೋಲೋ ಹಾಡು ಮತ್ತು ಇನ್ನೊಂದು ಜಲ್ಸಾ ಹಾಡು. ಯಾರಾದರೂ ತಮ್ಮ ಲಿಂಗವನ್ನು ಬದಲಾಯಿಸಿದಾಗ ಸಮುದಾಯದ ಸದಸ್ಯರು ಹಾಡುವ ಹಾಡು. ಚಾರುಲತಾ ಹೇಳುವಂತೆ ಡ್ಯಾನ್ಸರ್ ಆಗಿದ್ದೇನೆ. ಆದರೆ ಹಾಡುಗಾರಿಕೆಯ ವಿಷಯಕ್ಕೆ ಬಂದರೆ ನಾನು ಆಕಸ್ಮಿಕ ಗಾಯಕಿ ಮಾತ್ರ ಎಂದು ಪಿಟಿಐ ಜೊತೆ ಮಾತನಾಡಿರುವ ಚಾರುಲತಾ, ಹಿನ್ನಲೆ ಗಾಯನದ ಜಾಹೀರಾತನ್ನು ನೋಡಿ ಯೋಚಿಸದೆ ಅರ್ಜಿ ಸಲ್ಲಿಸಿದ್ದೇನೆ. ಇದಕ್ಕಾಗಿ 18 ಟ್ರಾನ್ಸ್‌ಜೆಂಡರ್ ಗಾಯಕರು ಶಾರ್ಟ್‌ಲಿಸ್ಟ್ ಆಗಿದ್ದರು ಎಂದು ತಿಳಿಸಿದ್ದಾರೆ. ಆದರೆ ಚಾರುಲತಾ ಅವರಿಗೆ ಮಾತ್ರ ಅವಕಾಶ ಸಿಕ್ಕಿದೆ.

    ಈ ಸಮುದಾಯದ ಮೇಲೆ ಸಿನಿಮಾ ನಿರ್ಮಾಣವಾಗುತ್ತಿದೆ
    ‘ನೀತಿ’ ಚಿತ್ರ ನಿರ್ದೇಶನ ಮಾಡುತ್ತಿರುವ ಡಾ. ಜೆಸ್ಸಿ ಕುತನೂರ, ಚಿತ್ರವು ಬುಡಕಟ್ಟು ಜನಾಂಗದವರು, ಸಲಿಂಗಕಾಮಿ ಸಮುದಾಯ ಮತ್ತು ತೃತೀಯಲಿಂಗಿಗಳ ಸುತ್ತ ಸುತ್ತುತ್ತದೆ ಮತ್ತು ಅವರ ಹಕ್ಕುಗಳ ಬಗ್ಗೆಯಿದೆ. ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಕೂಡ ಟ್ರಾನ್ಸ್‌ಪರ್ಸನ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಚಾರುಲತಾ ಅವರನ್ನು ಶ್ಲಾಘಿಸಿದ ನಿರ್ದೇಶಕ ಕುತನೂರ್ ಅವರು ನಿರೀಕ್ಷೆಗಿಂತ ಉತ್ತಮವಾಗಿ ನಟಿಸಿದ್ದಾರೆ ಎಂದರು. ಚಾರುಲತಾ ಹಾಡಿರುವ ಹಾಡು ತಾಯಿ ಮತ್ತು ಮಗುವಿನ ಮೇಲೆ ಚಿತ್ರೀಕರಿಸಲಾದ ಲಾಲಿ. ಇದರಲ್ಲಿ ಚಾರುಲತಾ ತನ್ನೆಲ್ಲಾ ನೋವನ್ನು ತೋಡಿಕೊಂಡರು. ನೀತಿ ಚಿತ್ರ ಸೆಪ್ಟೆಂಬರ್ 28 ರಂದು ಪ್ರೀಮಿಯರ್ ಆಗಲಿದೆ. ಈ ಹಂತವನ್ನು ತಲುಪಲು ಚಾರುಲತಾ ಸಾಕಷ್ಟು ಕಷ್ಟಪಟ್ಟಿದ್ದಾರೆ. ಕುಟುಂಬದವರ ಅಸಮಾಧಾನವನ್ನೂ ಎದುರಿಸಿದ್ದಾರೆ. ಬಳಿಕ ಕಷ್ಟಪಟ್ಟು ದುಡಿದ ಹಣದಲ್ಲಿ ಪ್ರತ್ಯೇಕ ಮನೆ ಕಟ್ಟಿಕೊಂಡಿದ್ದಾರೆ. ಪ್ರತಿ ಕ್ಷಣವೂ ಅವರನ್ನು ಬೆಂಬಲಿಸುವ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ.

    Sports Authority of India Recruitment 2023: 64 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts