More

    ಶಾಂತಿಯುತವಾಗಿ ಹಬ್ಬ ಆಚರಣೆಗೆ ಸಹಕರಿಸಿ

    ಮಳವಳ್ಳಿ: ಪಟ್ಟಣದಲ್ಲಿ ಫೆ.4ರಿಂದ ನಡೆಯುವ ದಂಡಿನ ಮಾರಮ್ಮ ಹಾಗೂ ಸಿಡಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದು ಡಿವೈಎಸ್‌ಪಿ ಪೃಥ್ವಿ ತಿಳಿಸಿದರು.

    ಹಬ್ಬದ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬದ ದಿನಗಳಲ್ಲಿ ಜನದಟ್ಟಣೆ ಹೆಚ್ಚಿರುವ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಮುಖ್ಯರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು. ಸಿಡಿ ಹಬ್ಬದಂದು ಘಟಗಳ ಮೆರವಣಿಗೆ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್‌ಗಾಗಿ ಆಯಾ ಕೋಮಿನ ಮುಖಂಡರು ತಲಾ 10 ಜನರ ಸ್ವಯಂ ಸೇವಕರ ಪಟ್ಟಿಯನ್ನು ನೀಡಿದರೆ ಅವರಿಗೆ ಇಲಾಖೆ ಕಡೆಯಿಂದ ಗುರುತಿನ ಚೀಟಿ ನೀಡಿ ಪೊಲೀಸರಿಗೆ ಸಹಕರಿಸಲು ನಿಯೋಜಿಸಲಾಗುವುದು ಎಂದು ತಿಳಿಸಿದರು.

    ಸಿಡಿ ಬಂಡಿ ತೆರಳುವ ಮಾರ್ಗದಲ್ಲಿ ರಸ್ತೆ ದಿಬ್ಬ, ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಬಧಿತ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗುವುದು. ಹಬ್ಬ ಶುಭಾಶಯದ ಕೋರಲು ಪ್ಲೆಕ್ಸ್‌ಗಳನ್ನು ಅಳವಡಿಸುವುದರಿಂದ ರಾಜಕೀಯ ಪ್ರೇರಿತಗೊಂಡು ಗಲಾಟೆಗಳಿಗೆ ಕಾರಣವಾದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

    ಎಲ್ಲ ಸಮುದಾಯದ ಮುಖಂಡರು ಹಾಗೂ ಪುರಸಭೆ ಸದಸ್ಯರಿಂದ ಹಬ್ಬದ ಸಿದ್ಧತೆಗಳಿಗೆ ಇರುವ ಕುಂದುಕೊರತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಗ್ರಾಮಾಂತರ ಸಿಪಿಐ ಧರ್ಮೇಂದ್ರ, ಪಿಎಸ್‌ಐ ಮಂಜು, ಪುರಸಭೆ ಸದಸ್ಯರಾದ ಸಿದ್ದರಾಜು, ಕುಮಾರ್, ಕೃಷ್ಣ, ಮುಖಂಡರಾದ ಎಂ.ಎಚ್.ಕೆಂಪಯ್ಯ, ಚಿಕ್ಕ ಮೊಗಣ್ಣ, ನಂಜುಡಯ್ಯ, ಅಪ್ಪಾಜಿಗೌಡ, ದೊಡ್ಡಯ್ಯ, ನಾರಾಯಣ, ಚಿಕ್ಕರಾಜು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts