More

    ಮಾಲಾಧಾರಿಗಳು ವ್ಯಸನಮುಕ್ತರಾಗಲಿ

    ಅಥಣಿ: ಹನುಮ ಮಾಲಾಧಾರಿಗಳು ವ್ಯಸನಮುಕ್ತರಾಗಿ ಧರ್ಮ ಹಾಗೂ ಸಂಸ್ಕೃತಿ ಆಚರಣೆ ಮಾಡಿ ಸನಾತನ ಧರ್ಮದ ಆರಾಧಕರಾಗಬೇಕು ಎಂದು ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ ಹೇಳಿದರು.

    ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಹನುಮಾನ ದೇವಸ್ಥಾನ ದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹನುಮ ಮಾಲಾಧಾರಣೆ, ಪವಮಾನ ಹೋಮ, ಪಲ್ಲಕ್ಕಿ ಉತ್ಸವ ಹಾಗೂ ಶೋಭಾಯಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯುವಕರು ಪಾಶ್ಚಾತ್ಯರ ವೇಷಭೂಷಣಕ್ಕೆ ಮಾರು ಹೋಗಿ ದೇಸಿ ಸಂಸ್ಕೃತಿ ಮರೆಯುತ್ತಿದ್ದಾರೆ. ಹನುಮ ಮಾಲೆ ಧರಿಸುವುದರಿಂದ ಅದ್ಭುತ ಶಕ್ತಿ ಪ್ರಾಪ್ತಿಯಾಗುತ್ತದೆ. ರಾಮನ ಆದರ್ಶ ಗುಣ, ಹನುಮನಂತೆ ಶಕ್ತಿ, ಶೌರ್ಯ, ನಿಷ್ಠೆ ಹಾಗೂ ನಿಸ್ವಾರ್ಥ ಸೇವೆ ಅಳವಡಿಸಿಕೊಳ್ಳಬೇಕು ಎಂದರು.
    ಚಿಕ್ಕೋಡಿ ವಿಶ್ವ ಹಿಂದು ಪರಿಷತ್ ಸಂಚಾಲಕ ವಿಠ್ಠಲಜೀ ಮಾತನಾಡಿ, ಯುವಕರು ಭಾರತೀಯ ಪವಿತ್ರ ಗ್ರಂಥಗಳನ್ನು ಓದಿ ಅಳವಡಿಸಿಕೊಳ್ಳಬೇಕು ಎಂದರು.

    ಸುಮಂಗಲೆಯರ ಆರತಿ ಹಾಗೂ ಸಕಲ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಉತ್ಸವ, ಶೋಭಾಯಾತ್ರೆ ನೆರವೇರಿತು. ಶಂಕರ ನಾಯಿಕ, ಪ್ರವೀಣ ಮಾಳಿ, ಮಹೇಶ ನಾಯಿಕ, ಸುಖದೇವ ಕೋಳಿ, ಮಂಜು ಕನಮಡಿ, ಭರತ ಸೇಗಾಂವಿ, ಸಂಗಮೇಶ ಮಂಡಿಗೇರಿ, ಅಶೋಕ ಜತ್ತಿ, ಕಿರಣ ಕೆಂಚಣ್ಣವರ, ಪವನ ಪೂಜಾರಿ, ಶಿವಗೊಂಡ ಪಾಟೀಲ, ಹಣಮಂತ ಹಾದಿಮನಿ, ಕಾಡೇಶ ಕಟ್ಟಿ, ಮಂಜುನಾಥ ರೂಗಿ, ಪ್ರಜ್ವಲ ದಯಗೊಂಡ, ಬಸವರಾಜ ಉಕ್ಕಲಿ, ಮಂಜು ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts