More

    ವಿಭೀಷಣ ಪಾತ್ರಕ್ಕೆ ನೀವೇ ಬೇಕು ಎಂದ ನಿರ್ದೇಶಕರು! ಅಷ್ಟಕ್ಕೂ ಆ ಸ್ಟಾರ್​ ನಟ ಯಾರು?

    ಬೆಂಗಳೂರು: ದಂಗಲ್ ಖ್ಯಾತಿಯ ನಿತೇಶ್ ತಿವಾರಿ ರಾಮಾಯಣ ಸಿನಿಮಾ ಮಾಡುತ್ತಿರುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಕೇಳಿಬಂದ ಬೆನ್ನಲ್ಲೇ ಸಿನಿಪ್ರಿಯರು ಸಿಕ್ಕಾಪಟ್ಟೆ ಥ್ರಿಲ್​ ಆಗಿದ್ದರು. ಈ ಸಿನಿಮಾ ಯಾವ ರೀತಿ ಮೂಡಿಬರಲಿದೆ? ಯಾವ ಸ್ಟಾರ್​ ನಟರು ನಟಿಸಲಿದ್ದಾರೆ? ಎಂಬ ಹತ್ತು ಹಲವು ಪ್ರಶ್ನೆಗಳು ಭಾರೀ ಚರ್ಚೆಯಾಗುತ್ತಿದೆ. ಅದಕ್ಕೆ ತಕ್ಕಂತೆ ಚಿತ್ರದ ಪಾತ್ರಧಾರಿಗಳ ಹೆಸರು ಕೂಡ ವೈರಲ್ ಆಗಿದ್ದು, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ-ಸೀತೆಯಾಗಿ ಕಾಣಿಸಿಕೊಂಡರೆ, ರಾಕಿಂಗ್​ ಸ್ಟಾರ್ ಯಶ್​ ರಾವಣನ ಪಾತ್ರದಲ್ಲಿದ್ದಾರೆ.

    ಇದನ್ನೂ ಓದಿ: ಏಳು ಎಎಪಿ ಶಾಸಕರು ಬಿಜೆಪಿಯ ಟಾರ್ಗೆಟ್​! 25 ಕೋಟಿ ರೂ. ಆಮಿಷ: ಅರವಿಂದ್​ ಕೇಜ್ರಿವಾಲ್

    ಸದ್ಯ ಈ ಚಿತ್ರದ ಬಗ್ಗೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಘೋಷಣೆಯಿಲ್ಲ. ಆದರೆ, ಈ ಮೂವರು ಸ್ಟಾರ್​ ನಟರ ಪಾತ್ರಗಳು ಅನಾವರಣಗೊಂಡಿದ್ದು, ನೆಟ್ಟಿಗರ ಗಮನವನ್ನು ಸೆಳೆದಿದೆ. ಸದ್ಯ ಬಾಲಿವುಡ್ ಮಾಧ್ಯಮದ ವರದಿ ಪ್ರಕಾರ, ಬಹುಭಾಷಾ ನಟ ವಿಜಯ್ ಸೇತುಪತಿ ಅವರನ್ನು ವಿಭೀಷಣ ಪಾತ್ರಕ್ಕಾಗಿ ಕೇಳಲಾಗಿದೆ. ಈ ಅದ್ಭುತ ಕೃತಿಯಲ್ಲಿ ವಿಭೀಷಣ ಪಾತ್ರ ವಿಜಯ್​ ಅವರೇ ಮಾಡಬೇಕು ಎಂಬುದು ಪಟ್ಟು ಎಂದು ಹೇಳಲಾಗಿದೆ.

    ಚಿತ್ರದಲ್ಲಿ ಹನುಮಂತನ ಪಾತ್ರಕ್ಕಾಗಿ ಸನ್ನಿ ಡಿಯೋಲ್ ಅವರನ್ನು ಆಯ್ಕೆ ಮಾಡಲು ತಯಾರಕರು ಯೋಜಿಸುತ್ತಿದ್ದಾರೆ ಎಂದು ಇದೇ ಮಾಧ್ಯಮ ಸಂಸ್ಥೆ ಈ ಹಿಂದೆ ವರದಿ ಮಾಡಿದೆ.

    ಇದನ್ನೂ ಓದಿ:  ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ; ಇಂದು ಮನೆಯಿಂದ ಹೊರಬರುವ ಸ್ಫರ್ಧಿಗಳು ಯಾರು ಯಾರು ಗೊತ್ತ?

    ಉತ್ತಮವಾಗಿ ನಿರ್ಮಿಸಿದರೆ ಈ ಯೋಜನೆಯು ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆಯುವುದರಲ್ಲಿ ಅನುಮಾನವೇ ಇಲ್ಲ. ರಣಬೀರ್ ಕಪೂರ್ ಮತ್ತು ನಿತೇಶ್ ತಿವಾರಿ ಅವರ ರಾಮಾಯಣ ಮೂರು ಭಾಗಗಳಲ್ಲಿ ತಯಾರಾಗಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

    BBKS10 ಫಿನಾಲೆ: ವಿನ್ನರ್​ ಯಾರು? ಇದು ವೀಕ್ಷಕರದ್ದಲ್ಲ! ಎಲಿಮಿನೇಟ್​ ಆದ ಸ್ಪರ್ಧಿಗಳ ಊಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts