More

    ಜನರಿಗೆ ನಿಯಂತ್ರಣಕ್ಕೆ ಅರಿವು ಮೂಡಿಸಿ

    ಸೊರಬ: ಜನಸಂಖ್ಯೆ ಏರಿಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಾಪಂ ಪ್ರಭಾರ ಇಒ ಡಾ.ಎನ್.ಆರ್.ಪ್ರದೀಪ್ ಹೇಳಿದರು.

    ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಪಂ, ತಾಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಽಕಾರಿಗಳ ಕಚೇರಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ರಾಜ್ಯ ಹಾಗೂ ದೇಶದಲ್ಲಿ ವೇಗವಾಗಿ ಜನಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ೭ ಕೋಟಿ ಜನಸಂಖ್ಯೆಯ ಸನಿಹದಲ್ಲಿ ಇದ್ದು ಗಂಟೆಗೆ ೩೩೨೧ ಮಕ್ಕಳ ಜನನ ವಾಗುತ್ತಿದೆ. ಅನಕ್ಷರತೆ ಮತ್ತು ಮೂಢನಂಬಿಕೆಗಳು ಜನಸಂಖ್ಯೆಯ ಹೆಚ್ಚಳಕ್ಕೆ ಪ್ರಮುಖ ಕಾರಣ. ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಸಹ ಜನಸಂಖ್ಯೆ ಹೆಚ್ಚಳದಿಂದ ಆರೋಗ್ಯ, ಶಿಕ್ಷಣ, ಬಡತನ ಹಾಗೂ ಉದ್ಯೋಗÀ ಸಮಸ್ಯೆಗಳು ಎದುರಾಗುತ್ತಿವೆ. ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನ ಅಗತ್ಯವಿದೆ ಎಂದರು.
    ಅರ್ಥಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ನೇತ್ರಾವತಿ ಜನಸಂಖ್ಯೆ ಕುರಿತು ಮಾತನಾಡಿ, ಪ್ರಪಂಚದ ಜನಸಂಖ್ಯೆಯ ೧೮.೦೯ ಪಾಲನ್ನು ಭಾರತ ಹೊಂದಿದ್ದು ಜಾಗತಿಕ ಸಮಸ್ಯಗಳಿಗೆ ಕಾರಣವಾದ ಜನಸಂಖ್ಯೆ ನಿಯಂತ್ರಣ ಮಾಡುವಲ್ಲಿ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
    ಡಾ. ನಿರಂಜನ್, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್.ಹೇಮಲತಾ, ಆರೋಗ್ಯ ಇಲಾಖೆ ಸಿಬ್ಬಂದಿ ನೇತ್ರಾವತಿ, ಪದ್ಮಾವತಿ, ಗಾಯಿತ್ರಿ, ಶಿಲ್ಪಾ, ಲೀಲಾವತಿ, ಸುಽÃರ್, ಶಶಿಕುಮಾರ್, ಆರ್.ತೇಜು, ಸಂದೇಶ್, ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts