More

    ದಿನ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ

    ಸವಣೂರ: ಮಹಿಳೆಯರೊಂದಿಗೆ ಮಕ್ಕಳಿಗೂ ಸಹ ‘ವಿಜಯವಾಣಿ’ ದಿನ ಪತ್ರಿಕೆ ಸಾಮಾನ್ಯ ಜ್ಞಾನದ ಕುರಿತು ಸ್ಪರ್ಧಾತ್ಮಕ ಕಾರ್ಯಕ್ರಮ ರೂಪಿಸಿರುವುದು ಸಂತಸ ಸಂಗತಿಯಾಗಿದೆ ಎಂದು ಸಿಡಿಪಿಒ ಸುಮಾ ಕೆ.ಎಸ್. ಹೇಳಿದರು.

    ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್​ನಲ್ಲಿ ‘ವಿಜಯವಾಣಿ’ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಶಿಗ್ಗಾಂವಿ-ಸವಣೂರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ನಿತ್ಯ ಒತ್ತಡದ ಬದುಕು ಸಾಗಿಸುತ್ತಿರುವ ಮಹಿಳೆಯರು, ಮಕ್ಕಳು ದಿನ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಗೃಹಣಿಯರಿಗಾಗಿ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಎಂದರು.

    ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎನ್. ದ್ಯಾಮನಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ವಿವೇಕ ಜಾಗೃತ ಬಳಗದ ಸಂಚಾಲಕಿ ಡಾ. ಸವಿತಾ ಮುರಡಿ, ಜ್ಯೋತಿ ಮಹಿಳಾ ಮಂಡಳ ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ ಬೆಣ್ಣಿ, ಪದಾಧಿಕಾರಿ ದಿವ್ಯಾ ಹಾವಣಗಿ, ಮಹಿಳಾ ಸಮಾಖ್ಯ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸುನಂದಾ ಚಿನ್ನಾಪುರ ಅವರು ಐವರು ಅದೃಷ್ಟವಂತರನ್ನು ಆಯ್ಕೆ ಮಾಡಿದರು.

    ರಾಷ್ಟ್ರೀಯ ಪೋಷಣ ಅಭಿಯಾನ ತಾಲೂಕು ಮೇಲ್ವಿಚಾರಕಿ ರೇಷ್ಮಾ ನೀರಲಗಿ, ಲಕ್ಷ್ಮೀ ಕಾಳಶೆಟ್ಟಿ, ಅಕ್ಷತಾ ದುರ್ಗದಮಠ, ಉಪನ್ಯಾಸಕರು, ವಿದ್ಯಾರ್ಥಿಗಳು, ಇತರರು ಪಾಲ್ಗೊಂಡಿದ್ದರು. ಪತ್ರಕರ್ತ ಆನಂದ ಮತ್ತಿಗಟ್ಟಿ, ಈಶ್ವರಗೌಡ ಕರಿಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.

    ಆಯ್ಕೆಗೊಂಡವರಿವರು

    • ಗೀತಾ ಬಿಕ್ಕಣ್ಣನವರ, ದಂಡಿನಪೇಟೆ, ಸವಣೂರ
    • ತನುಶ್ರೀ ರಾಮಪ್ಪನವರ, ತಡಸ, ತಾ. ಶಿಗ್ಗಾಂವಿ
    • ರಚನಾ ಕುಲಕರ್ಣಿ ಸಾ. ಮನ್ನಂಗಿ, ತಾ. ಸವಣೂರ
    • ರೇಣುಕಾ ಹಣಗಿ, ಬುಧವಾರ ಪೇಟೆ, ಸವಣೂರ
    • ನಿವೇದಿತಾ ಅಂಗಡಿ, ಮಂಗಳವಾರಪೇಟೆ, ಸವಣೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts