More

    ಕೂಸಿನ ಮನೆ ಸದುಪಯೋಗಪಡಿಸಿಕೊಳ್ಳಿರಿ

    ಯಳಂದೂರು : ರಾಜ್ಯ ಸರ್ಕಾರ ನರೇಗಾ ಕೂಲಿ ಕಾರ್ಮಿಕ ಮಹಿಳೆಯರ ಮಕ್ಕಳ ಆರೈಕೆಗಾಗಿ ಕೂಸಿನ ಮನೆ ಎಂಬ ಹೊಸ ಯೋಜನೆ ಜಾರಿಗೆ ತಂದಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.

    ತಾಲೂಕಿನ ಅಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ನಿರ್ಮಾಣಗೊಂಡಿರುವ ಕೂಸಿನ ಮನೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

    ನರೇಗಾ ಯೋಜನೆಯಲ್ಲಿ ಚಿಕ್ಕ ಮಕ್ಕಳಿರುವ ಮಹಿಳಾ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುವ ಸಮಯದಲ್ಲಿ ಮಕ್ಕಳ ಆರೈಕೆ ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ ಕೂಸಿನ ಮನೆ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಇಲ್ಲಿ ಮಕ್ಕಳನ್ನು ಯಾವುದೇ ಚಿಂತೆ ಇಲ್ಲದೆ ಪಾಲಕರು ಬಿಟ್ಟು ಹೋಗಬಹುದು ಕೂಲಿ ಕೆಲಸ ಮುಗಿಯುವವರೆಗೂ ಇಲ್ಲಿರುವ ಮಕ್ಕಳನ್ನು ಆರೈಕೆ ಮಾಡಲು ಸಹಾಯಕಿಯರು ಇರುತ್ತಾರೆ ಎಂದರು.

    ನನ್ನ ಕ್ಷೇತ್ರದಲ್ಲಿ ಒಟ್ಟು 23 ಕೂಸಿನ ಮನೆ ತೆರೆಯಲಾಗಿದ್ದು, ಯಳಂದೂರು ತಾಲೂಕಿನ 7 ಗ್ರಾಪಂಗಳನ್ನು ಆಯ್ಕೆಮಾಡಲಾಗಿದೆ. ಪ್ರತಿ ಕೂಸಿನ ಮನೆಗೆ 1ಲಕ್ಷ ರೂ. ಅನುದಾನ ನೀಡಲಾಗಿದ್ದು, ಇದರಲ್ಲಿ 55 ಸಾವಿರ ರೂ. ಗಳನ್ನು ಮಕ್ಕಳ ಆರೈಕೆಯ ಆಹಾರಕ್ಕೆ ನೀಡಲಾಗಿದೆ. ಈ ಹಣ ಸಾಲದಿದ್ದಲ್ಲಿ ಸ್ಥಳೀಯ ತಾಪಂನ ಅನುದಾನ ಬಳಸಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಇಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಜತೆಗೆ ಆಟಿಕೆ ವಸ್ತುಗಳು, ಪಾಠ ಪ್ರವಚನಕ್ಕೂ ಅವಕಾಶವಿದೆ ಎಂದರು.

    ಗ್ರಾ.ಪಂ. ಅಧ್ಯಕ್ಷ ಮುದ್ದನಾಯಕ, ಉಪಾಧ್ಯಕ್ಷೆ ನಿರ್ಮಲಾ, ಸದಸ್ಯರಾದ ಸುರೇಶ್, ನಳಿನಾಕುಮಾರಿ, ಅನ್ನಪೂರ್ಣ, ಕುಮಾರ, ನಾಗರಾಜು, ಸ್ವಾಮಿ, ಇಒ ಶ್ರೀನಿವಾಸ್, ಸಿಡಿಪಿಒ ಸಕಲೇಶ್ವರ, ಬಿಇಒ ಕೆ. ಕಾಂತರಾಜು, ಪಿಡಿಒ ಮಹದೇವಸ್ವಾಮಿ ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದರಾಜು ತಾ.ಪಂ. ಮಾಜಿ ಅಧ್ಯಕ್ಷ ವೆಂಕಟೇಶ್, ಸುಬ್ಬಣ್ಣ, ಗ್ರಾಪಂ ಮಾಜಿ ಸದಸ್ಯ ಕಿನಕಹಳ್ಳಿ ರಾಚಯ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts