More

    ಬಿಸಿಯೂಟ ಖಾತೆ ಜಂಟಿ ಮಾಡಿಸಿ

    ಕೋಲಾರ: ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ಜಂಟಿ ಖಾತೆಯನ್ನು ಮುಖ್ಯಶಿಕ್ಷಕರು ಹಾಗೂ ಮುಖ್ಯ ಅಡುಗೆಯವರ ಹೆಸರಿನಲ್ಲಿ ಮುಂದುವರಿಸಲು ಸರ್ಕಾರ ಕ್ರಮವಹಿಸಬೇಕೆಂದು ಒತ್ತಾಯಿಸಿ ಗುರುವಾರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಸುಬ್ರಮಣಿ ಅವರಿಗೆ ಮನವಿ ಸಲ್ಲಿಸಿತು.

    ಸಂಘದ ಅಧ್ಯಕ್ಷ ಅಶ್ವತ್ಥ ನಾರಾಯಣ ಮಾತನಾಡಿ, ಬಿಸಿಯೂಟದ ಬ್ಯಾಂಕ್ ಖಾತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರ ಹೆಸರಿನಲ್ಲಿ ನಡೆಸಲು ಸೂಚಿಸಿದ್ದು, ಇದರಿಂದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು.
    ಬಿಸಿಯೂಟ ಅಡುಗೆಯವರಿಗೆ ಅಗತ್ಯವಾದ ವೇತನ, ಬಿಸಿಯೂಟಕ್ಕೆ ಅಗತ್ಯವಾದ ತರಕಾರಿ ಮತ್ತಿತರ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಚೆಕ್‌ಗಳಿಗೆ ಎಸ್‌ಡಿಎಂಸಿ ಅಧ್ಯಕ್ಷರ ಮನೆಗಳಿಗೆ ಅಲೆಯಬೇಕಾದ ದುಸ್ಥಿತಿ ಇದೆ ಎಂದು ತಿಳಿಸಿದರು.
    ಕೆಲವು ಶಾಲೆಗಳಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಉತ್ತಮ ರೀತಿಯ ಸ್ಪಂದನೆ ನೀಡುತ್ತಾರೆ. ಇನ್ನು ಕೆಲವು ಶಾಲೆಗಳಲ್ಲಿನ ಎಸ್‌ಡಿಎಂಸಿ ಅಧ್ಯಕ್ಷರು ಕೂಲಿ ಕೆಲಸ ಮತ್ತಿತರ ಜೀವನಾಧಾರ ಉದ್ಯೋಗಗಳಿಗೆ ತೆರಳುವುದರಿಂದ ಅವರು ಚೆಕ್‌ಗಳಿಗೆ ಸಹಿ ಹಾಕಲು ಶಾಲೆಗಳಿಗೆ ಬರುವುದಿಲ್ಲ, ಇದರಿಂದ ತಿಂಗಳಿಗೆ ಅಗತ್ಯವಾದ ವಸ್ತುಗಳ ಖರೀದಿ, ಅಡುಗೆ ಸಿಬ್ಬಂದಿ ವೇತನ ಬಟವಾಡೆಗೆ ಸಮಸ್ಯೆಯಾಗಿದೆ ಎಂದು ತಿಳಿಸಿದರು.
    ಆದ್ದರಿಂದ ಈ ಸಮಸ್ಯೆಗೆ ಕಡಿವಾಣ ಹಾಕಲು ಸರ್ಕಾರ ಈ ಮೊದಲು ಇರುವಂತೆ ಬಿಸಿಯೂಟದ ಜಂಟಿ ಖÁತೆಯನ್ನು ಮುಖ್ಯಶಿಕ್ಷಕರು ಹಾಗೂ ಮುಖ್ಯ ಅಡುಗೆಯವರ ಹೆಸರಿನಲ್ಲೇ ಮುಂದುವರಿಸಬೇಕು ಎಂದು ಮನವಿ ಮಾಡಿದರು.
    ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ, ಖಜಾಂಚಿ, ಟಿ ಎನ್ ಅಶ್ವಥ್ಥಪ್ಪ, ಉಪಾಧ್ಯಕ್ಷರು, ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ ಬಿ.ಮುನಿರಾಜು, ಸದಸ್ಯರಾದ ವಿ ಸೋಮಶೇಖರ್, ಎನ್ ನಾಗರಾಜ್, ಎನ್. ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts