More

    10 ಕ್ಷೇತ್ರಗಳಿಗೆ ಪ್ರೋತ್ಸಾಹಧನ : ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಅನುಮೋದನೆ

    ನವದೆಹಲಿ: ದೇಶೀಯ ಉತ್ಪಾದನೆ ಮತ್ತು ರಫ್ತು ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್​ಐ) ಯೋಜನೆಗೆ ಹೊಸದಾಗಿ 10 ಕ್ಷೇತ್ರಗಳನ್ನು ಸೇರ್ಪಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದರ ಅನ್ವಯ ಮುಂದಿನ 5 ವರ್ಷಗಳಿಗೆ ಈ 10 ಕ್ಷೇತ್ರಗಳ ಉತ್ಪಾದನೆ ಹೆಚ್ಚಳಕ್ಕಾಗಿ 1.45 ಲಕ್ಷ ಕೋಟಿ ರೂ.ಗಳನ್ನು ಕೇಂದ್ರ ವಿನಿಯೋಗಿಸಲಿದೆ.

    ಮೊಬೈಲ್ ಉತ್ಪಾದನೆ ಮತ್ತು ನಿರ್ದಿಷ್ಟ ಪಡಿಸಿದ ಎಲೆಕ್ಟ್ರಾನಿಕ್ ಬಿಡಿಭಾಗಗಳು, ಔಷಧಗಳು ಹಾಗೂ ವೈದ್ಯಕೀಯ ಸಾಧನಾ ತಯಾರಿಕೆ ವಲಯ ಈಗಾಗಲೇ ಪಿಎಲ್​ಐ ಯೋಜನೆಗೆ ಒಳಪಟ್ಟಿವೆ. ಇವುಗಳಿಗೆ ಹೆಚ್ಚುವರಿಯಾಗಿ ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಬ್ಯಾಟರಿ, ಎಲೆಕ್ಟ್ರಾನಿಕ್/ತಂತ್ರಜ್ಞಾನ ಉತ್ಪನ್ನಗಳು, ವಾಹನಗಳು ಮತ್ತು ವಾಹನಗಳ ಬಿಡಿಭಾಗಗಳು, ಔಷಧಗಳು, ದೂರಸಂಪರ್ಕ ಮತ್ತು ನೆಟ್​ವರ್ಕಿಂಗ್ ಉತ್ಪನ್ನಗಳು, ಜವಳಿ ಉತ್ಪನ್ನಗಳು, ಎಂಎಂಎಫ್ ಮತ್ತು ತಾಂತ್ರಿಕ ಜವಳಿ, ಹೆಚ್ಚಿನ ದಕ್ಷತೆಯ ಸೌರ ವಿವಿ ಮಾಡ್ಯೂಲ್​ಗಳು, ಗೃಹ ಬಳಕೆಯ ಎಲೆಕ್ಟ್ರಿಕಲ್ ಸರಕುಗಳು (ಎಸಿ ಮತ್ತು ಎಲ್​ಇಡಿ), ವಿಶೇಷ ಉಕ್ಕು ಹಾಗೂ ಆಹಾರ ಉತ್ಪನ್ನಗಳನ್ನು ಸೇರಿಸಲಾಗಿದೆ. ಪಿಎಲ್​ಐ ಯೋಜನೆಯನ್ನು ಆಯಾ ವಲಯಕ್ಕೆ ಸಂಬಂಧಪಟ್ಟ ಸಚಿವಾಲಯಗಳು/ಇಲಾಖೆಗಳು ಅನುಷ್ಠಾನಗೊಳಿಸುತ್ತವೆ. ಸಚಿವ ಸಂಪುಟದಲ್ಲಿ ಕೈಗೊಳ್ಳಲಾದ ನಿರ್ಧಾರವು ಭಾರತದ ವಿವಿಧ ಕ್ಷೇತ್ರಗಳ ಉತ್ಪನ್ನ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕರನ್ನಾಸುತ್ತದೆ. ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

    ಯಾವ ಕ್ಷೇತ್ರಗಳಿಗೆ ಎಷ್ಟು ಪ್ರೋತ್ಸಾಹಧನ?

    * ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಬ್ಯಾಟರಿ – 18,100 ಕೋಟಿ ರೂಪಾಯಿ
    * ಎಲೆಕ್ಟ್ರಾನಿಕ್/ತಂತ್ರಜ್ಞಾನ ಉತ್ಪನ್ನಗಳು – 5,000 ಕೋಟಿ ರೂಪಾಯಿ
    * ವಾಹನಗಳು ಮತ್ತು ವಾಹನಗಳ ಬಿಡಿಭಾಗಗಳು – 57,042 ಕೋಟಿ ರೂಪಾಯಿ
    * ಔಷಧಗಳು – 15,000 ಕೋಟಿ ರೂಪಾಯಿ
    * ದೂರಸಂಪರ್ಕ ಮತ್ತು ನೆಟ್​ವರ್ಕಿಂಗ್ ಉತ್ಪನ್ನಗಳು – 12,195 ಕೋಟಿ  ರೂಪಾಯಿ
    * ಜವಳಿ ಉತ್ಪನ್ನಗಳು, ಎಂಎಂಎಫ್ ಮತ್ತು ತಾಂತ್ರಿಕ ಜವಳಿ – 10,438 ಕೋಟಿ ರೂಪಾಯಿ
    * ಹೆಚ್ಚಿನ ದಕ್ಷತೆಯ ಸೌರ ವಿವಿ ಮಾಡ್ಯೂಲ್​ಗಳು – 4,500 ಕೋಟಿ ರೂಪಾಯಿ
    * ಗೃಹ ಬಳಕೆಯ ಎಲೆಕ್ಟ್ರಿಕಲ್ ಸರಕುಗಳು (ಎಸಿ ಮತ್ತು ಎಲ್​ಇಡಿ) – 6,238 ಕೋಟಿ  ರೂಪಾಯಿ
    * ವಿಶೇಷ ಉಕ್ಕು – 6,322 ಕೋಟಿ ರೂಪಾಯಿ
    * ಆಹಾರ ಉತ್ಪನ್ನಗಳು -10,900 ಕೋಟಿ ರೂಪಾಯಿ

    * ಎಸಿಸಿ ಬ್ಯಾಟರಿ ಉತ್ಪಾದನೆಯು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ವಾಹನಗಳು ಮತ್ತು ನವೀಕರಿಸಬಹುದಾದ ಇಂಧನದಂತಹ ಹಲವಾರು ಕ್ಷೇತ್ರಗಳ ಬೇಡಿಕೆ ಪೂರೈಸುತ್ತದೆ. ಎಸಿಸಿ ಬ್ಯಾಟರಿ ಘಟಕಗಳ ಸ್ಥಾಪನೆಗೆ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಉತ್ತೇಜಿಸುತ್ತದೆ.
    * ಭಾರತದ ಆರ್ಥಿಕತೆಗೆ ವಾಹನ ಉದ್ಯಮವು ಪ್ರಮುಖ ಕೊಡುಗೆ ನೀಡುತ್ತಿದೆ. ಪಿಎಲ್​ಐ ಯೋಜನೆಯು ಭಾರತೀಯ ವಾಹನ ಉದ್ಯಮವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ.
    * ಭಾರತದ ಔಷಧ ಉದ್ಯಮವು ವಿಶ್ವದ 3ನೇ ಅತಿದೊಡ್ಡ ಕ್ಷೇತ್ರವಾಗಿದೆ. ಇದು ಜಾಗತಿಕ ಔಷಧಗಳ ರಫ್ತಿಗೆ ಶೇ.3.5ರಷ್ಟು ಕೊಡುಗೆ ನೀಡುತ್ತದೆ.
    * ಭಾರತದ ಜವಳಿ ಉದ್ಯಮವು ವಿಶ್ವದಲ್ಲೇ ಅತಿ ದೊಡ್ಡ ಉದ್ಯಮಗಳಲ್ಲೊಂದು. ಜವಳಿ ಮತ್ತು ಉಡುಪುಗಳಲ್ಲಿನ ಜಾಗತಿಕ ರಫ್ತಿನ ಶೇ.5 ರಷ್ಟು ಪಾಲನ್ನು ಇದು ಹೊಂದಿದೆ.
    * ಸಂಸ್ಕರಿಸಿದ ಆಹಾರ ಉದ್ಯಮದ ಬೆಳವಣಿಗೆಯು ರೈತರು ಉತ್ತಮ ಬೆಲೆ ಪಡೆಯಲು ಕಾರಣವಾಗುತ್ತದೆ ಮತ್ತು ನಷ್ಟವನ್ನು ಕಡಿಮೆ ಮಾಡುತ್ತದೆ.

    ವಿದೇಶಿ ದೇಣಿಗೆ ನಿಯಮ ಬಿಗಿ: ಪರಿಷ್ಕೃತ ನಿಬಂಧನೆ ಪಾಲಿಸಬೇಕು ಎನ್​ಜಿಒಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts