More

    ಮೆಕ್ಕೆಜೋಳ ಬೆಳೆಗೆ ಕಾಡುಪ್ರಾಣಿಗಳ ಕಾಟ

    ಸಂಡೂರು: ತಾಲೂಕಿನಲ್ಲಿ ಮಳೆ ಕೊರತೆ ಇದ್ದರು ಮೆಕ್ಕೆಜೋಳ ಬೆಳೆದಿರುವ ರೈತರು ಕಾಡುಹಂದಿ, ಕರಡಿಗಳ ಕಾಟದಿಂದ ಆತಂಕಕ್ಕೀಡಾಗಿದ್ದಾರೆ.

    ಇದನ್ನೂ ಓದಿ: 12 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ನಷ್ಟ

    ತಾಲೂಕಿನ ಲಕ್ಷ್ಮೀಪುರ, ಭುಜಂಗನಗರ, ನರಸಿಂಗಾಪುರ, ದರ್ಮಾಪುರ, ಜೋಗ, ಎಸ್.ಓಬಳಾಪುರ ಮುಂತಾದೆಡೆಗಳಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಳವಾಗಿದೆ. ಅರಣ್ಯ ಇಲಾಖೆ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.

    ಮೋದಲ16,000 ರೂ. ಖರ್ಚು ಮಾಡಿ ಮೆಕ್ಕೆಜೋಳ ಬೀಜಗಳನ್ನು ಬಿತ್ತಲಾಗಿತ್ತು. ಬೀಜವನ್ನು ಕಾಡುಹಂದಿಗಳು ಹೆಕ್ಕಿ ತಿಂದಿದ್ದವು. ಮತ್ತೆ ಎರಡನೇ ಸಲ ಬೀಜಗಳನ್ನು ತಂದು ಬಿತ್ತಿದ್ದೇವೆ ಎನ್ನುತ್ತಾರೆ ಎಸ್.ಓಬಳಾಪುರದ ಯುವರೈತ ಅಂಜಿನಪ್ಪ.

    ರಾತ್ರಿ ಸಮಯದಲ್ಲಿ ಹೊಲ ಕಾಯಲು ಹೋದರೂ ಪ್ರಯೋಜನವಾಗಿಲ್ಲ ನಿದ್ರೆಗೆ ಜಾರಿದ ಮೇಲೆ ರಾತ್ರಿ 2ಗಂಟೆ ನಂತರ ಕಾಡುಹಂದಿ, ಕರಡಿಗಳು ಮೆಕ್ಕೆಜೋಳ ಬೆಳೆನಾಶ ಮಾಡಿವೆ.

    ರಾತ್ರಿ ಸಮುಯದಲ್ಲಿ ಟೈಯರ್‌ಗೆ ಬೆಂಕಿ ಹಚ್ಚುವುದು, ಪಟಾಕಿ ಸಿಡಿಸುವುದು ಮಾಡಿದರೂ ಉಪಯೋಗವಾಗಿಲ್ಲ ಎನ್ನುತ್ತಾರೆ ಲಕ್ಷ್ಮೀಪುರದ ಷಣ್ಮುಖಗೌಡ, ದರ್ಮಾಪುರ ಶಿವಮ್ಮ ಕೆಂಚಪ್ಪ, ಸತೀಶ್, ಟಿ.ಶಿವಣ್ಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts