More

    ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ : ಸಚಿವ ಗೋವಿಂದ ಕಾರಜೋಳ ನಿರ್ದೇಶನ

    ವಿಜಯಪುರ: ವಿಮಾನ ನಿಲ್ದಾಣ ಕಾಮಗಾರಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ನಿಗದಿತ ಸಮಯದಲ್ಲಿ ಗುಣಮಟ್ಟದಿಂದ ಕಾಮಗಾರಿಯನ್ನು ನಿರ್ವಹಿಸಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು.

    ನಗರದ ಹೊರವಲಯ ಬುರಾಣಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಸೋಮವಾರ ಪರಿವೀಕ್ಷಣೆ ನಡೆಸಿ ಮಾತನಾಡಿದರು.

    ಕಾಮಗಾರಿಯನ್ನು ಎರಡು ಹಂತದಲ್ಲಿ ವಿಂಗಡಣೆ ಮಾಡಲಾಗಿದ್ದು, ಮೊದಲನೇ ಹಂತದ ಭೌತಿಕ ಪ್ರಗತಿ ಶೇ.೬೪ ಹಾಗೂ ಆರ್ಥಿಕ ಪ್ರಗತಿ ಶೇ.೬೪.೧೭ ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್೭೨ ವಿಮಾನಗಳ ಹಾರಾಟಕ್ಕಾಗಿ ಒಟ್ಟು ೨೨೦ ಕೋಟಿ ರೂ. ವ್ಯಯಿಸಲಾಗುತ್ತಿದೆ. ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಬೆಂಗಳೂರಿನ ಐಡೇಕ್ ಸಂಸ್ಥೆ ಕಾಮಗಾರಿ ನಿರ್ವಹಣೆ ನೀಡುತ್ತಿದೆ. ಒಟ್ಟು ೨೨೦ ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮೊದಲನೇ ಹಂತದ ಕಾಮಗಾರಿಗಾಗಿ ೯೫ ಕೋಟಿ ರೂ. ಹಾಗೂ ಎರಡನೇಯ ಹಂತದ ಕಾಮಗಾರಿಗೆ ೧೨೫ ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ವಿವರಿಸಿದರು.

    ಮೊದಲನೇ ಹಂತದ ೯೫ ಕೋಟಿ ರೂ.ಗಳನ್ನು ರನ್ ವೇ, ಟ್ಯಾಕ್ಸಿ ವೇ, ಎಫ್ರಾನ್, ಇಸೋಲೇಶನ್ ಬೇ, ಕೂಡುರಸ್ತೆ, ಒಳ ರಸ್ತೆಗಳು, ಪೆರಿಪರಲ್ ರಸ್ತೆಗಳು ಹಾಗೂ ಇತರ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲನೇ ಹಂತದ ಕಾಮಗಾರಿಯನ್ನು ಗುತ್ತಿಗೆದಾರ ಎಸ್.ಎಸ್. ಆಲೂರ ಅವರಿಗೆ ಗುತ್ತಿಗೆ ಆಧಾರದ ಮೇಲೆ ೯೫.೨೦ ಕೋಟಿ ರೂ. ಗೆ ವಹಿಸಿಕೊಡಲಾಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸಲು ೧೧ ತಿಂಗಳು ಕಾಲಾವಽಯನ್ನು ನಿಗದಿಪಡಿಸಲಾಗಿದೆ, ಎರಡನೇ ಹಂತದಲ್ಲಿ ೧೨೫ ಕೋಟಿ ರೂ. ಎರಡು ಉಪ ಕಾಮಗಾರಿಗಳಾಗಿ ವಿಂಗಡಿಸಲಾಗಿದೆ ಎಂದು ತಿಳಿಸಿದರು.

    ಸಿವಿಲ್ ಉಪ ಕಾಮಗಾರಿಗಾಗಿ ೧೦೬ ಕೋಟಿ ರೂ., ವಿವಿಯೋನಿಕ್ಸ್ ಸೆಕ್ಯೂರಿಟಿ ಇಕ್ಯೂಪಮೆಂಟ್ಸ್ ಕಾಮಗಾರಿಗಾಗಿ ೧೯ ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿ.ಎಫ್.ಆರ್. ಕಟ್ಟಡ, ಸುತ್ತಲು ಕಂಪೌAಡ್ ಹಾಗೂ ಇತರ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲು ೭೯ ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

    ಸಿವಿಲ್ ಉಪಕಾಮಗಾರಿಯಲ್ಲಿ ಉಳಿದ ಮೊತ್ತ ೨೭ ಕೋಟಿ ರೂ.ಗಳಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವುದು, ವಿಮಾನ ನಿಲ್ದಾಣಕ್ಕೆ ೨೪*೭ ನೀರು ಸರಬರಾಜು ಮಾಡುವುದು, ವಿಮಾನ ನಿಲ್ದಾಣಕ್ಕೆ ೨ ಸಾವಿರ ಕಿಲೋ ವ್ಯಾಟ್ ನಿರಂತರ ವಿದ್ಯುತ್ ಸರಬರಾಜು ಮಾಡುವುದು ಹಾಗೂ ಇತರ ಕಾಮಗಾರಿಗಳನ್ನು ನಿರ್ವಹಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts