More

    ಒಂದು ವರ್ಷ ಮುಂದಕ್ಕೆ ಹೋಯ್ತು ಅಜಯ್​ ದೇವಗನ್​ ಅಭಿನಯದ ಈ ಸಿನಿಮಾ!

    ಈಗಾಗಲೇ ಅರ್ಧ ಚಿತ್ರೀಕರಣವಾದ ಚಿತ್ರಗಳ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಕನ್ನಡದಲ್ಲಿ ದರ್ಶನ್​ ಅಭಿನಯದ ‘ರಾಬರ್ಟ್​’, ಪುನೀತ್​ ಅಭಿನಯದ ‘ಯುವರತ್ನ’, ಸುದೀಪ್​ ಅಭಿನಯದ ‘ಕೋಟಿಗೊಬ್ಬ 3’, ಯಶ್​ ಅಭಿನಯದ ‘ಕೆಜಿಎಫ್​ 2’ ಇವೆಲ್ಲಾ ಚಿತ್ರಗಳು, ಈ ವರ್ಷದ ಕೊನೆಗೆ ಹೋಗಿವೆ. ಕರೊನಾ ಹಾವಳಿ ಇನ್ನೂ ಹೆಚ್ಚಾದರೆ, ಮುಂದಿನ ವರ್ಷ ಬಿಡುಗಡೆಯಾದರೆ ಆಶ್ಚರ್ಯವೇನಿಲ್ಲ.

    ಇದು ಬರೀ ಕನ್ನಡ ಚಿತ್ರಗಳ ವಿಷಯ ಮಾತ್ರವಲ್ಲ. ಹಿಂದಿ ಸೇರಿದಂತೆ ಬೇರೆ ಭಾಷೆಗಳಲ್ಲೂ ಹಲವು ಚಿತ್ರಗಳು ಮುಂದೆ ಮುಂದೆ ಹೋಗುವ ಸಾಧ್ಯತೆ ಇದೆ. ಅದರಲ್ಲೂ ಅಜಯ್​ ದೇವಗನ್​ ಅಭಿನಯದ ‘ಮೈದಾನ್​’ ಚಿತ್ರವನ್ನು ಅಮೋಘವಾಗಿ ಒಂದು ವರ್ಷ ಮುಂದೂಡಲಾಗಿದೆ.

    ಇದನ್ನೂ ಓದಿ: ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾ ಗರ್ಭಿಣಿಯಾಗಿದ್ರಾ?

    ಹೌದು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅಜಯ್​ ದೇವಗನ್​ ಮತ್ತು ಪ್ರಿಯಾ ಮಣಿ ಅಭಿನಯದ ‘ಮೈದಾನ್​’ ಚಿತ್ರವು ಈ ವರ್ಷದ ಆಗಸ್ಟ್​ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಚಿತ್ರೀಕರಣ ಮುಂದೂಡಲಾಯಿತು. ಲಾಕ್​ಡೌನ್​ನಿಂದ ಬರೀ ಚಿತ್ರೀಕರಣ ಮುಂದೂಡಲಾಗಿದ್ದಷ್ಟೇ ಅಲ್ಲ, ಚಿತ್ರತಂಡ ಸಾಕಷ್ಟು ನಷ್ಟವನ್ನೂ ಅನುಭವಿಸಿತು.

    ಏಕೆಂದರೆ, ಚಿತ್ರಕ್ಕಾಗಿ ಒಂದು ಫುಟ್ಬಾಲ್ ಸ್ಟೇಡಿಯಂ ಸೆಟ್​ ಹಾಕಲಾಗಿತ್ತು. ಯಾವಾಗ ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ಬಂದ್​ ಆಯಿತೋ, ಈ ಸೆಟ್​ ಉಪಯೋಗಿಸದೆ ಶಿಥಿಲವಾಯಿತು. ಕೆಲವು ದಿನಗಳ ಹಿಂದೆಯೇ, ಇಂಥ ಶಿಥಿಲ ಸೆಟ್​ನಲ್ಲಿ ಚಿತ್ರೀಕರಣ ಮಾಡುವುದು ಕಷ್ಟ ಎಂಬ ಅಭಿಪ್ರಾಯ ಚಿತ್ರತಂಡದಲ್ಲಿತ್ತು.

    ಇದನ್ನೂ ಓದಿ: ಸುಶಾಂತ್​ ಒಪ್ಪಿದ್ದ ಚಿತ್ರಗಳಿಗಿಂತ ಒಪ್ಪದಿದ್ದ ಚಿತ್ರಗಳೇ ಹೆಚ್ಚು!

    ಈಗ ಲಾಕ್​ಡೌನ್​ ಏನೋ ಮುಗಿದಿದೆ. ಆದರೆ, ಕರೊನಾ ಹಾವಳಿ ಹೆಚ್ಚುತ್ತಿರುವುದರಿಂದ ಚಿತ್ರೀಕರಣ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಅಷ್ಟೇ ಅಲ್ಲ, ಚಿತ್ರೀಕರಣ ಮತ್ತೆ ಯಾವಾಗಿನಿಂದ ಪ್ರಾರಂಭ ಮಾಡಬಹುದು ಎಂಬ ವಿಷಯದಲ್ಲಿ ಯಾರಲ್ಲೂ ಸ್ಪಷ್ಟತೆ ಇಲ್ಲ. ಹಾಗಾಗಿ ಒಂದು ದಿನಾಂಕ ಘೋಷಿಸಿ, ಅಷ್ಟರಲ್ಲಿ ಚಿತ್ರ ಬಿಡುಗಡೆಯಾಗದಿದ್ದರೆ ಚೆನ್ನಾಗಿರುವುದಿಲ್ಲ ಎಂದು ಮನಗಂಡಿರುವ ‘ಮೈದಾನ್​’ ಚಿತ್ರತಂಡದವರು, ಅಮೋಘ ಒಂದು ವರ್ಷ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ.

    ಅಂದರೆ, 2020ರ ಆಗಸ್ಟ್​ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಇದೀಗ 2021ರ 13ರಂದು ಬಿಡುಗಡೆಯಾಗಲಿದೆಯಂತೆ. ಈ ಕುರಿತು ಅಜಯ್​ ದೇವಗನ್​ ಮತ್ತು ತಂಡದವರು ಸೋಷಿಯಲ್​ ಮೀಡಿಯಾದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ, ಈ ವರ್ಷ ಅಜಯ್​ ದೇವಗನ್​ ಹೇಳಹೊರಟಿರುವ ಫುಟ್ಬಾಲ್​ ಕಥೆಯನ್ನು ಕೇಳಬೇಕು, ನೋಡಬೇಕು ಎಂದು ಕಾಯುತ್ತಿದ್ದವರು, ಮುಂದಿನ ವರ್ಷದವರೆಗೂ ಕಾಯದೆಯೇ ಬೇರೆ ವಿಧಿಯಿಲ್ಲ.

    ನಾನು ಏನೇ ಮಾಡಿದ್ರೂ ಬಾಕ್ಸ್​​-ಆಫೀಸ್​ ಹಿಟ್​ ಆಗಲ್ಲ … ಆರ್ಶದ್​ ವಾರ್ಸಿ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts