More

    ಮಹಿಷ ದಸರಾದಲ್ಲಿ 5 ಸಾವಿರಕ್ಕೂ ಅಧಿಕ ಜನರು ಭಾಗಿ

    ಪಿರಿಯಾಪಟ್ಟಣ: ಮೈಸೂರಿನಲ್ಲಿ ಅ.13ರಂದು ಆಯೋಜಿಸಿರುವ ಮಹಿಷ ದಸರಾ ಕಾರ್ಯಕ್ರಮದಲ್ಲಿ ಪಿರಿಯಾಪಟ್ಟಣ ತಾಲೂಕಿನಿಂದ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಸೇರಿದಂತೆ 5000ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ದಸಂಸ ಮುಖಂಡ ಎಸ್.ರಾಮು ತಿಳಿಸಿದರು.

    ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶನಿವಾರ ಮಹಿಷ ದಸರಾ ಆಚರಣೆ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಹಿಷ ದಸರಾ ಆಚರಣೆ ನಮ್ಮ ಹಕ್ಕು. ಇದನ್ನು ಸರ್ಕಾರಿ ನಿಯಮದಂತೆ ಅನುಮತಿ ಪಡೆದು ಆಚರಿಸುತ್ತಿದ್ದೇವೆ. ಆದರೆ ದಲಿತ ವಿರೋಧಿ ಹಾಗೂ ಮನುವಾದಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಮಹಿಷ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದರು.

    ಮಹಿಷ ಒಬ್ಬ ದೊರೆಯಾಗಿದ್ದರಿಂದ ಮೈಸೂರು ಎಂಬ ಹೆಸರು ಬಂದಿದೆ. ಇದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಆದರೂ ಪಟ್ಟಭದ್ರ ಹಿತಾಸಕ್ತಿಗಳು ಮಹಿಷನನ್ನು ರಾಕ್ಷಸನಂತೆ ಬಿಂಬಿಸಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡದೆ ಅಡ್ಡಿಪಡಿಸುವ ಹೇಳಿಕೆ ನೀಡುತ್ತಿದ್ದಾರೆ. ಆದರೆ ದಲಿತಪರ ಸಂಘಟನೆಯ ಪದಾಧಿಕಾರಿಗಳಾದ ನಾವೆಲ್ಲರೂ ಮಹಿಷ ದಸರಾವನ್ನು ಸಂಘಟಿತರಾಗಿ ಯಶಸ್ವಿಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪುರಾಣದಲ್ಲಿ ಆರ್ಯ ಹಾಗೂ ಬೌದ್ಧ ಧರ್ಮದ ನಡುವೆ ಸಂಘರ್ಷ ನಡೆಯುತ್ತಿದ್ದು, ಪ್ರತಾಪ್ ಸಿಂಹ ಆರ್ಯ ಧರ್ಮದ ಪರ ಇದ್ದಾರೆ. ದ್ರಾವಿಡರೆಲ್ಲರೂ ಒಗ್ಗಟ್ಟಾಗಿ ಬೌದ್ಧ ಧರ್ಮದ ಪರ ಇದ್ದೇವೆ. ನಾವೆಲ್ಲರೂ ಶಾಂತಿಪ್ರಿಯರಾಗಿದ್ದೇವೆ. ಸಂಸದ ಪ್ರತಾಪ್ ಸಿಂಹ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಬಿಡಬೇಕು ಎಂದು ಅಗ್ರಹಿಸಿದರು.

    ಸಭೆಯಲ್ಲಿ ಮುಖಂಡರಾದ ಸಿ.ತಮ್ಮಣ್ಣಯ್ಯ, ಸಿ.ಎಸ್ ಜಗದೀಶ್, ಪಿ.ಮಹದೇವ್, ರಾಜಯ್ಯ, ಸೋಮಶೇಖರ್, ಈರಾಜ್, ಹೇಮಂತ್ ಕುಮಾರ್, ಗಿರೀಶ್, ಮಹದೇವ್, ಚೌತಿ ಮಲ್ಲಣ್ಣ, ಪ್ರಕಾಶ್, ಡಿ.ಕೆ ತಮ್ಮಯ್ಯ, ಜಗದೀಶ್, ಶಿವರಾಂ, ಕೆ.ಬಿ ರಾಜು, ಬೆಟ್ಟದತುಂಗ ರಾಜು, ದೇವೇಂದ್ರ, ಶಿವರಾಜ್, ಶಿವಣ್ಣ, ಆರ್.ಡಿ ಮಹದೇವ್, ರಮೇಶ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts