More

    ಮಹಿಳಾ ಸ್ವಾವಂಬನಾ ಕೇಂದ್ರ ತೆರವಿಗೆ ಹೊಸ ತಿರುವು, ಸೊತ್ತು ಹಿಂದಿರುಗಿಸಲು ನ್ಯಾಯಾಲಯ ಆದೇಶ

    ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯಿತಿ ಮಹಿಳಾ ಸ್ವಾವಲಂಬನಾ ಕೇಂದ್ರದಿಂದ ವಶಕ್ಕೆ ಪಡೆದ ಸೊತ್ತುಗಳ ಹಿಂದಿರುಗಿಸಲು ನ್ಯಾಯಾಲಯ ಗುರುವಾರ ಆದೇಶ ನೀಡಿದೆ.
    ಗ್ರಾಪಂ ಆಡಳಿತಾಧಿಕಾರಿ ಅಂಜನಾದೇವಿ, ಅಭಿವೃದ್ಧಿ ಅಧಿಕಾರಿ ರೂಪಾ ಗೋಪಿ, ಕಾರ್ಯದರ್ಶಿ ಶಂಕರ ಆಚಾರ್ಯ, ಕರ ಸಂಗ್ರಾಹಕ ನಾಗರಾಜ ಮತ್ತು ಸಿಬ್ಬಂದಿ ಅಶ್ವಿನ್, ತಾಪಂ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಅವರು ತಮಗೆ ಸೇರಿದ ಸೊತ್ತುಗಳನ್ನು ದರೋಡೆ ಮಾಡಿರುವುದಾಗಿ ವಂಡ್ಸೆ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಕೇಂದ್ರದ ಅಧೀನದ ಸ್ವಾವಲಂಬನಾ ಮಹಿಳೆಯರ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರದ ಮೇಲ್ವಿಚಾರಕಿ ಮಹಾಲಕ್ಷ್ಮೀ ಅವರು ಕುಂದಾಪುರದ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

    ದೂರನ್ನು ಪರಿಗಣಿಸಿದ ನ್ಯಾಯಾಲಯ ಸಾಮಗ್ರಿಗಳನ್ನು ಶೋಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲು ವಕೀಲ ಶಾನ್ಕಟ್ಟು ಉಮೇಶ ಶೆಟ್ಟಿ ಅವರನ್ನು ಕಮಿಷನರ್ ಆಗಿ ನೇಮಕ ಮಾಡಿತು. ಅವರು ವಂಡ್ಸೆಯ ಕಟ್ಟಡವೊಂದರಲ್ಲಿ ಇಡಲಾಗಿದ್ದ ಸಾಮಗ್ರಿಗಳನ್ನು ಮತ್ತು ಅವುಗಳನ್ನು ಸಾಗಿಸಲು ಬಳಸಿದ ಲಾರಿಯನ್ನು ಬುಧವಾರ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದರು.

    ಗುರುವಾರ ಮಹಾಲಕ್ಷ್ಮೀ ಸಲ್ಲಿಸಿದ ಇನ್ನೊಂದು ಅರ್ಜಿಯನ್ನು ಮನ್ನಿಸಿದ ನ್ಯಾಯಾಲಯ ಎಲ್ಲ ಸಾಮಗ್ರಿಗಳನ್ನು ಅವರಿಗೆ ಹಿಂತಿರುಗಿಸುವಂತೆ ಮತ್ತು ಕೃತ್ಯದ ಕುರಿತು ತನಿಖೆ ನಡೆಸುವಂತೆ ಕುಂದಾಪುರ ಎಎಸ್‌ಪಿ ಅವರಿಗೆ ಆದೇಶ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts