More

    ಕೆಆರ್​ಎಸ್​ನಿಂದ ಮಹೇಶ್​ ನಾಮಪತ್ರ ಸಲ್ಲಿಕೆ

    ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್​ಎಸ್​) ಅಭ್ಯರ್ಥಿ ಎ.ವಿ.ಮಹೇಶ್​ ಗುರುವಾರ ಜಿಲ್ಲಾ ಚುನಾವಣಾಧಿಕಾರಿ ಅಕ್ರಂಪಾಷಾಗೆ ನಾಮಪತ್ರ ಸಲ್ಲಿಸಿದ್ದು, ಒಟ್ಟು 32,76,545.00 ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

    50 ಸಾವಿರ ರೂ. ನಗದು ಹಾಗೂ ಎಸ್​ಬಿಐ ಬ್ಯಾಂಕಿನಲ್ಲಿ 63,465 ರೂ., ಎಚ್​ಡಿಎ್​ಸಿ ಬ್ಯಾಂಕ್​ನಲ್ಲಿ 1,06,534, ಯೂನಿಯನ್​ ಬ್ಯಾಂಕಿನಲ್ಲಿ 1,84,349 ರೂ. ಹಾಗೂ ಐಸಿಐಸಿ ಬ್ಯಾಂಕಿನಲ್ಲಿ 20,229 ಹಾಗೂ ಉಜ್ಜೀವನ್​ ಬ್ಯಾಂಕಿನಲ್ಲಿ 5,200 ರೂ. ಹೊಂದಿರುವುದಾಗಿ ಅಫಿಡವಿಟ್​ ಸಲ್ಲಿಸಿದ್ದಾರೆ.
    ಮುರ್, ಕಂಪನಿ ನ್ಯಾಸ ಸೇರಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ನೀಡಿದ ವೈಯಕ್ತಿಕ ಸಾಲಗಾರರಿಂದ ಬರಬೇಕಾದ ಇತರ ಸ್ವೀಕೃತಿ ಮತ್ತು ಅವುಗಳ ಮೊತ್ತ 15 ಲಕ್ಷ ರೂ.ಬರಬೇಕಾಗಿದೆ. 1,58,000 ರೂ. ಮೌಲ್ಯದ ರಾಯಲ್​ ಎನ್​ಫೀಲ್ಡ್​, 2,15,000 ರೂ.ಮೌಲ್ಯದ ಇಂಡಿಕಾ ವಿಸ್ತಾ, 7 ಲಕ್ಷ ರೂ.ಮೌಲ್ಯದ ಮಾರುತಿ, 2,49,400 ರೂ. ಮೌಲ್ಯದ 43 ಗ್ರಾಂ ಚಿನ್ನ ಹಾಗೂ ಪತ್ನಿ ಹೆಸರಿನಲ್ಲಿ 3,77,000 ರೂ. ಮೌಲ್ಯದ 65 ಗ್ರಾಂ. ಚಿನ್ನ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts