More

    ‘ಮಹಾ’ ಸರ್ಕಾರಕ್ಕೆ ಸಂಕಷ್ಟ: ಸಿಬಿಐ ತನಿಖೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್​

    ಮುಂಬೈ: ತಮ್ಮ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿರುವ ಬಾಂಬೆ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ಮಂಗಳವಾರ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ದೇಶಮುಖ್ ಅವರ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಈ ಗಂಭೀರ ಪ್ರಕರಣದಲ್ಲಿ ಸ್ವತಂತ್ರ ತನಿಖೆಯ ಅಗತ್ಯವಿದೆ ಎಂದು ಹೇಳಿದೆ.

    ಅಲ್ಲದೇ ಬಾಂಬೆ ಹೈಕೋರ್ಟ್​ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್​ ನಿರಾಕರಿಸಿದೆ. ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು 100 ಕೋಟಿ ರೂಪಾಯಿ ಲಂಚ ವಸೂಲಿ ಆರೋಪವನ್ನು ಅನಿಲ್ ದೇಶಮುಖ್ ಅವರ ಮೇಲೆ ಮಾಡಿದ್ದರು. ಇದರಿಂದ ತೀವ್ರ ಮುಜಗರಕ್ಕೆ ಒಳಗಾಗಿದ್ದ ಅನಿಲ್ ದೇಶಮುಖ್ ಅವರ ರಾಜೀನಾಮೆಗೆ ಪ್ರತಿ ಪಕ್ಷಗಳು ಆಗ್ರಹಿಸಿದ್ದವು. ಅಲ್ಲದೇ ಪರಮ್ ಬೀರ್ ಸಿಂಗ್ ಲಂಚದ ಆರೋಪದ ಕುರಿತಂತೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

    ಇದನ್ನೂ ಓದಿ: ಮುಕೇಶ್​ ಅಂಬಾನಿ ಕುಟುಂಬಸ್ಥರಿಗೆ ಶಾಕ್​ ನೀಡಿದ ಸೆಬಿ: 25 ಕೋಟಿ ರೂಪಾಯಿ ದಂಡ

    ಸಿಂಗ್ ಅವರ ಅರ್ಜಿ ಪರಿಗಣಿಸಿದ್ದ ಬಾಂಬೆ ಹೈಕೋರ್ಟ್​ ಸಿಬಿಐ ತನಿಖೆಗೆ ಅಸ್ತು ಎಂದಿತ್ತು. ಇದರಿಂದ ಅನಿವಾರ್ಯವಾಗಿ ದೇಶಮುಖ್ ಸೋಮವಾರ ರಾಜೀನಾಮೆ ನೀಡಿದ್ದರು. ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.

    ಇದೇ ವೇಳೆ ಬಾಂಬೆ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವೂ ಸುಪ್ರೀಂಕೋರ್ಟ್​ ಕದ ತಟ್ಟಿತ್ತು. ಅಲ್ಲದೇ ಆರು ಅಧಿಕಾರಿಗಳನ್ನೊಳಗೊಂಡ ಸಿಬಿಐ ತಂಡ ಈ ಪ್ರಕರಣದ ಪ್ರಾಥಮಿಕ ತನಿಖೆ ಮಾಡಲು ಮುಂಬೈಗೆ ಆಗಮಿಸಿತ್ತು.

    ಬಿಗ್​ ಬಾಸ್​ ಖ್ಯಾತಿಯ ಚೈತ್ರಾ ಕೋಟೂರ್​ ಆತ್ಮಹತ್ಯೆ ಯತ್ನ! ಆಕೆಯ ತಂದೆ ಬಿಚ್ಚಿಟ್ಟ ಕಾರಣ ಇಲ್ಲಿದೆ

    ಸಿಬಿಐ ತನಿಖೆ ಪ್ರಶ್ನಿಸಿ ಸುಪ್ರೀಂಕೋರ್ಟ್​ ಕದ ತಟ್ಟಿದ ಅನಿಲ್ ದೇಶಮುಖ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts