More

    ಕೇಂದ್ರ ಸರ್ಕಾರ ಅನ್​ಲಾಕ್​ ಮಾಡುತ್ತಿರುವ ಸಮಯದಲ್ಲೂ ಆಗಸ್ಟ್​ 31ರವರೆಗೆ ಲಾಕ್​ಡೌನ್​ ವಿಸ್ತರಣೆ!

    ಮುಂಬೈ: ಮಹಾಮಾರಿ ಕರೊನಾ ವೈರಸ್​ ಅಟ್ಟಹಾಸ ದಿನೇದಿನೆ ಹೆಚ್ಚುತ್ತಿದೆ. ಇದನ್ನು ತಡೆಯಲು ಈಗಾಗಲೇ ಲಾಕ್​ಡೌನ್​ನಂತಹ ಕ್ರಮಗಳನ್ನು ತೆಗೆದುಕೊಂಡಿದ್ದರೂ ದೇಶದ ಆರ್ಥಿಕ ಸ್ಥಿತಿಗಾಗಿ ಸಡಿಲಗೊಳಿಸಲಾಗುತ್ತಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಲಾಕ್​ಡೌನ್​ ತೆಗೆದಿದ್ದರೆ, ಮಹಾರಾಷ್ಟ್ರ ಆಗಸ್ಟ್​ 31ರವರೆಗೂ ಲಾಕ್​ಡೌನ್​ ವಿಸ್ತರಿಸಿದೆ.

    ಮಹಾರಾಷ್ಟ್ರದಲ್ಲಿ ಈಗಾಗಲೇ 4 ಲಕ್ಷ ಕರೊನಾ ಪ್ರಕರಣಗಳು ದಾಟಿವೆ. ಹೀಗಾಗಿ ಕರೊನಾಗೆ ಕಡಿವಾಣ ಹಾಕಲು ಲಾಕ್​ಡೌನ್​ ಮುಂದುವರಿಸಿದೆ. ಕಳೆದ ತಿಂಗಳು ಜುಲೈ 31ರವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಲಾಗಿತ್ತು. ಮತ್ತೆ ವಿಸ್ತರಣೆ ಮಾಡಿದ್ದು, ಆಗಸ್ಟ್​ 5ರಿಂದ ಜಾರಿಗೆ ಬರಲಿದೆ.

    ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋಗಳನ್ನು ಅಪ್​ಲೋಡ್​ ಮಾಡ್ತಿದ್ದ ಟೆಕ್ಕಿಗಳಿಬ್ಬರ ಬಂಧನ

    ನೋಟಿಫಿಕೇಶನ್​ ಪ್ರಕಾರ ಶಾಪಿಂಗ್​ ಹಾಗೂ ವಾಯುವಿಹಾರ ಸೇರಿದಂತೆ ಅಗತ್ಯವಲ್ಲದ ಚಟುವಟಿಕೆಗಳಿಗೆ ಯಾರು ಸಹ ಮನೆಯಿಂದ ಹೊರಬರಬಾರದು ಎಂದು ನಿರ್ಬಂಧಿಸಲಾಗಿದೆ. ಅಲ್ಲದೆ, ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಕಡ್ಡಾಯ ಎಂದಿರುವ ಸರ್ಕಾರ ನಿರ್ಲಕ್ಷಿದರೆ ಬೆಲೆತೆರಬೇಕಾದೀತು ಎಂದು ಎಚ್ಚರಿಸಿದೆ.

    ವೈದ್ಯಕೀಯ ಕಾರಣ ಹಾಗೂ ಉದ್ಯೋಗ ಚಟುವಟಿಕೆಗೆ ಮಾತ್ರ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಜನಸಮೂಹ ಸೇರುವುದು ಮತ್ತು ಸಭೆಗಳನ್ನ ಮುಂದಿನ ಆದೇಶದವರೆಗೆ ಸಂಪೂರ್ಣ ಬ್ಯಾನ್​ ಮಾಡಲಾಗಿದೆ. ಇನ್ನು ಮದುವೆ ಸಮಾರಂಭಗಳಲ್ಲಿ 50 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂತ್ಯಕ್ರಿಯೆಯಲ್ಲಿ 20 ಮಂದಿ ಮಾತ್ರ ಭಾಗವಹಿಸಬಹುದಾಗಿದೆ.

    ಮಾಲ್​ಗಳಲ್ಲಿನ ಆಹಾರ ಮಳಿಗೆ ಮತ್ತು ರೆಸ್ಟೋರೆಂಟ್​ಗಳನ್ನು ತೆರಯಲು ಅನುಮತಿ ನೀಡಲಾಗಿದ್ದು, ಪಾರ್ಸಲ್​ ಮತ್ತು ಡಿಲಿವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ತಂಡವಲ್ಲದ ಆಟಗಳಾದ ಟೆನ್ನಿಸ್​, ಗಾಲ್ಫ್​, ಜಿಮ್ನಾಸ್ಟಿಕ್ಸ್​ ಹಾಗೂ ಬ್ಯಾಡ್ಮಿಂಟನ್​ಗೆ ಅನುಮತಿ ನೀಡಲಾಗಿದ್ದು, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಈಜುಕೊಳಗಳನ್ನು ತೆರೆಯುವಂತಿಲ್ಲ. ಪ್ರಯಾಣ ಮಾಡುವಾಗ ಮಾಸ್ಕ್​ ಕಡ್ಡಾಯ ಎಂದು ಸರ್ಕಾರ ಹೇಳಿದೆ. ಇನ್ನು ಚಿತ್ರಮಂದಿರಗಳಿಗೆ ಇನ್ನು ಅನುಮತಿಯನ್ನು ನೀಡಿಲ್ಲ. (ಏಜೆನ್ಸೀಸ್​)

    ಇದನ್ನೂ ಓದಿ: ಯಾರು ಹೇಳಿದ್ದು ಕರೊನಾದಿಂದ ವೃದ್ಧರು ಪಾರಾಗೋದಿಲ್ಲ ಅಂತ? 105 ವರ್ಷದ ಅಜ್ಜಿಯ ಆತ್ಮಸ್ಥೈರ್ಯ ಸೋಂಕನ್ನೇ ಹೆದರಿಸಿದೆ !

    ದೈಹಿಕವಾಗಿ ಬಳಸಿಕೊಂಡು ಬೇರೆ ಮದುವೆಯಾಗುತ್ತಿದ್ದಾನೆ: ಬದುಕಿದ್ದೂ ಸತ್ತಂತಾಗಿದ್ದೇನೆ- ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts