More

    ಭಗವಂತನ ಪ್ರಾರ್ಥನೆಯಿಂದ ಒಳಿತು: ಕಾಳಹಸ್ತೇಂದ್ರ ಸರಸ್ವತೀ

    ಪಡುಬಿದ್ರಿ: ಕರೊನಾದಿಂದ ರಕ್ಷಿಸುವಲ್ಲಿ ಸರ್ಕಾರಗಳು ಜಾರಿಗೊಳಿಸುವ ಕಾನೂನು ನಮಗೆ ಕಷ್ಟವೆನಿಸಿದರೂ ಪಾಲನೆ ಅನಿವಾರ್ಯ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
    ಕರೊನಾ ನಿರ್ಮೂಲನೆ ಮತ್ತು ಲೋಕಲ್ಯಾಣಾರ್ಥವಾಗಿ ಕಾಪು ಬಳಿಯ ಪಡುಕುತ್ಯಾರು ಆನೆಗುಂದಿ ಮಠದಲ್ಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾಮೃತ್ಯುಂಜಯ, ಧನ್ವಂತರಿ ಮತ್ತು ನವಗ್ರಹ ಯಜ್ಞದ ಬಳಿಕ ಶಿಷ್ಯವೃಂದದವರಿಗೆ ಆಶೀರ್ವಚನ ನೀಡಿ, ಭಗವಂತನ ಕೃಪೆ ಎಲ್ಲದಕ್ಕೂ ಅನಿವಾರ್ಯ. ಕಳೆದೊಂದು ವರ್ಷದಿಂದ ಕರೊನಾ ಬಾಧೆಯಿಂದ ಜನ ಜೀವನ ನಲುಗಿ ಹೋಗಿದೆ. ಎಲ್ಲರೂ ನಂಬಿಕೆಯಿಟ್ಟು ಭಗವಂತನಿಗೆ ಶರಣಾಗಿ ಪ್ರಾರ್ಥಿಸುವುದರಿಂದ ಒಳಿತಾಗಬಹುದು ಎಂದರು.
    ಜಗದ್ಗುರುಗಳ ಪಟ್ಟಾಭಿಷೇಕ ಮಹೋತ್ಸವ 11ನೇ ವರ್ಧಂತಿ ಮಹೋತ್ಸವದ ವೈದಿಕ ಕಾರ್ಯಕ್ರಮ, ಗುರುಪಾದುಕಾ ಪೂಜೆ, ಸ್ವರ್ಣಕಿರೀಟಧಾರಣೆ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಮಹಾಸಂಸ್ಥಾನದ ವತಿಯಿಂದ ಆನ್‌ಲೈನ್‌ನಲ್ಲಿ ನಡೆಸಲಾದ ದಶದಿನ ಸಂಸ್ಕೃತಿ ಶಿಬಿರ 2021ರ ಸಮಾರೋಪ ಸಮಾರಂಭವೂ ನಡೆಯಿತು. ಆನೆಗುಂದಿ ಪ್ರತಿಷ್ಠಾನ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ ಬಾರ್ಕೂರು ಅಧ್ಯಕ್ಷತೆ ವಹಿಸಿದ್ದರು.
    ಪಡುಕುತ್ಯಾರಿನ ಮಹಾಸಂಸ್ಥಾನದ ಶ್ರೀ ಸರಸ್ವತಿ ಯಾಗ ಶಾಲೆಯಲ್ಲಿ ನಡೆದ ಯಜ್ಞಕಾರ್ಯಕ್ರಮಗಳ ಕರ್ತೃಗಳಾಗಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ, ಉಪಾಧ್ಯಕ್ಷರಾದ ಕಳಿ ಚಂದ್ರಯ್ಯ ಆಚಾರ್ಯ, ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ಕಾರ್ಕಳ, ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ ಪ್ರತಿಷ್ಠಾನದ ಪ್ರಥಮ ವಿಶ್ವಸ್ಥ ಜಯಕರ ಪುರೋಹಿತ್ ದಂಪತಿ ಮೂಡುಬಿದಿರೆ ಪಾಲ್ಗೊಂಡಿದ್ದರು.
    ಪಟ್ಟಾಭಿಷೇಕ ವರ್ಧಂತಿ ಅಂಗವಾಗಿ ಶ್ರೀ ಗುರುಯಜ್ಞ, ಶ್ರೀ ವಿಶ್ವಕರ್ಮ ಯಜ್ಞ ಮತ್ತು ಶ್ರೀ ಸರಸ್ವತೀ ಯಜ್ಞಗಳನ್ನೂ ನೆರವೇರಿಸಲಾಯಿತು. ಋತ್ವಿಜರಾಗಿ ಶ್ರೀಧರ ಶರ್ಮ ಕಟಪಾಡಿ, ಲಕ್ಷ್ಮೀಕಾಂತ ಶರ್ಮ ತಂತ್ರಿ ಸಾಲಿಗ್ರಾಮ, ಅಕ್ಷಯ ಶರ್ಮ ತಂತ್ರಿ ಕಟಪಾಡಿ, ಪ್ರಕಾಶ ಶರ್ಮ ಬಾರ್ಕೂರು, ಗಿರೀಶ ಶರ್ಮಾ ನಾಕೂರು, ಪ್ರಶಾಂತ ಶರ್ಮ ಆಲೂರು, ಕೇಶವ ಶರ್ಮ ಹಾಗೂ ವೇದ ಸಂಜೀವಿನೀ ಪಾಠಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
    ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಕೋಶಾಧಿಕಾರಿ ದಿನೇಶ್ ಆಚಾರ್ಯ ಪಡುಬಿದ್ರಿ, ಆನೆಗುಂದಿ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ಸಂಚಾಲಕ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಗುರುಸೇವಾ ಪರಿಷತ್ ಅಧ್ಯಕ್ಷ ರೂಪೇಶ್ ಆಚಾರ್ಯ ಶಿರ್ವ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಎಂ. ಗಂಗಾಧರ ಕೊಂಡೆವೂರು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts