More

    ರೈತರು, ನೇಕಾರರ ಅಭಿವೃದ್ಧಿ ಆಗಲಿ

    ಮಹಾಲಿಂಗಪುರ: ಹಾನಿಯಲ್ಲಿದ್ದ ಮಹಾಲಿಂಗಪುರ ಅರ್ಬನ್ ಬ್ಯಾಂಕ್‌ನ್ನು ಸುಸ್ಥಿತಿಗೆ ತಂದ ಅದರ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಹಾಗೂ ಕೇವಲ 17 ವರ್ಷಗಳಲ್ಲಿ 220 ಕೋಟಿ ರೂ. ಬಂಡವಾಳದಿಂದ 2500 ಕೋಟಿ ರೂ.ಗೆ ತಲುಪಿಸಿರುವ ಬಿಡಿಸಿಸಿ ಬ್ಯಾಂಕ್ ರುವಾರಿ ಅಜಯಕುಮಾರ ಸರನಾಯಕ ನಮಗೆಲ್ಲ ಮಾದರಿ ಎಂದು ಕೆಎಚ್‌ಡಿಸಿ ಅಧ್ಯಕ್ಷ, ಶಾಸಕ ಸಿದ್ದು ಸವದಿ ಹೇಳಿದರು.

    ಸ್ಥಳೀಯ ಶ್ರೀ ಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ಮಹಾಲಿಂಗಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಬಿಡಿಸಿಸಿ ಬ್ಯಾಂಕ್‌ನ ನೂತನ ಪದಾಧಿಕಾರಿಗಳು ಮತ್ತು ವಿವಿಧ ರಂಗದ ಸಾಧಕರಿಗಾಗಿ ಆಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ಸಹಕಾರಿ ರಂಗಕ್ಕೆ ನಾನು ಈಗ ಅಂಬೆಗಾಲಿಟ್ಟಿದ್ದೇನೆ. ಸರನಾಯಕ ಅವರ ಮಾರ್ಗದರ್ಶನದಲ್ಲಿ ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಕೂಡ ಇನ್ನೂ ಹೆಚ್ಚು ಪ್ರಗತಿಹೊಂದಿ ರೈತರು, ನೇಕಾರರು, ವ್ಯಾಪಾರಸ್ಥರ ಅಭಿವೃದ್ಧಿಗಾಗಿ ಶ್ರಮಿಸಲಿ ಎಂದರು.

    ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಆರ್ಥಿಕ ಕ್ಷೇತ್ರದಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವದ್ದು. ಯಾವುದೇ ಬ್ಯಾಂಕ್‌ನ ಸದೃಢತೆಯಲ್ಲಿ ಆ ಬ್ಯಾಂಕ್‌ನ ನಿಷ್ಕ್ರಿಯ ಸಾಲ (ಎನ್‌ಪಿಎ) ಗಣನೆಗೆ ಬರುತ್ತದೆ. ಆ ನಿಟ್ಟಿನಲ್ಲಿ ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಕೇವಲ ಶೇ.2.5 ನಿಷ್ಕ್ರಿಯ ಸಾಲ ಹೊಂದಿರುವುದು ಇದರ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪ್ರಾಮಾಣಿಕತೆ ಹಾಗೂ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ ಎಂದರು.

    ವಿಧಾನ ಪರಿಷತ್ ಸದಸ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಂತ ನಿರಾಣಿ ಮಾತನಾಡಿ, ಹಿಂದೊಮ್ಮೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಸಂಕಷ್ಟಗಳನ್ನು ಮೆಟ್ಟಿ ನಿಂತು ಪ್ರಸಕ್ತ ಕರೊನಾ ಸಂದರ್ಭದಲ್ಲಿಯೂ 28 ಲಕ್ಷಕ್ಕಿಂತ ಅಧಿಕ ಲಾಭ ಗಳಿಸಿರುವುದು ಹಾಗೂ ಬಿಡಿಸಿಸಿ ಬ್ಯಾಂಕ್ ಕೊಡಮಾಡುವ ಜಿಲ್ಲಾಮಟ್ಟದ ಅತ್ಯುತ್ತಮ ಸಹಕಾರಿ ಬ್ಯಾಂಕ್ ಅಂತಾ ಸತತ ಮೂರು ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿರುವುದು ಸಮಾನ್ಯ ಸಂಗತಿಯಲ್ಲ ಎಂದು ಬಣ್ಣಿಸಿದರು. ಬ್ಯಾಂಕ್‌ನ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್‌ನ ಅಭಿವೃದ್ಧಿಯೇ ನನ್ನ ಗುರಿ ಎಂದರು.

    ಕೆಎಚ್‌ಡಿಸಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಸದಸ್ಯರಾದ ರಾಮಣ್ಣ ತಳೇವಾಡ, ನಂದಕುಮಾರ ಪಾಟೀಲ, ಬಸನಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ, ಸಹಕಾರಿ ಧುರೀಣ ಸುರೇಶ ಚಿಂಡಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುರಾಜ ಹೊಸಕೋಟಿ ಅವರನ್ನು ಸನ್ಮಾನಿಸಲಾಯಿತು.

    ಸಂಘದ ಉಪಾಧ್ಯಕ್ಷ ಶ್ರೀಶೈಲ ಹಿಪ್ಪರಗಿ, ವ್ಯವಸ್ಥಾಪಕ ಎಸ್.ಎಂ. ಗುಣದಾಳ, ನಿರ್ದೇಶಕರಾದ ಡಾ.ಬಸವರಾಜ ಅಂಬಿ, ಮಹಾದೇವಪ್ಪ ಶಿರೋಳ, ಗುರುಲಿಂಗಯ್ಯ ಮಠಪತಿ, ಬಸವರಾಜ ಬಟಕುರ್ಕಿ, ಮಹಾಲಿಂಗಪ್ಪ ಬಂಡಿಗಣಿ, ಹೊಳೆಪ್ಪ ಬಾಡಗಿ, ಗಿರಿಮಲ್ಲಪ್ಪ ಕಬಾಡಿ, ಎಚ್.ಎ್. ಕುಂಟೋಜಿ, ಶಶಿರೇಖಾ ಹುದ್ದಾರ, ಪ್ರಭು ಬೆಳಗಲಿ, ವೀರಣ್ಣ ಹಲಗತ್ತಿ ಮುಂತಾದವರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts