More

    ಶಾಸಕ ಸಿದ್ದು ಸವದಿ ರಾಜೀನಾಮೆ ನೀಡಲಿ

    ಮಹಾಲಿಂಗಪುರ: ಪಟ್ಟಣದ ಪುರಸಭೆ ಅಧ್ಯಕ್ಷೀಯ ಚುನಾವಣೆ ವೇಳೆ ನಡೆದ ಪ್ರಹಸನಕ್ಕೆ ಸಬಂಧಿಸಿದಂತೆ ಶಾಸಕ ಸಿದ್ದು ಸವದಿ ಅವರಿಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಿ ಕ್ಷಮೆಯಾಚಿಸಲೇಬೇಕು ಎಂದು ಡಿಎಸ್‌ಎಸ್ ಭೀಮವಾದ ಸಂಘಟನೆ ಸಂಚಾಲಕ ಯಮನಪ್ಪ ಗುಣದಾಳ ಹೇಳಿದರು.

    ಪಟ್ಟಣದಲ್ಲಿ ಡಿಎಸ್‌ಎಸ್, ಟಿಪ್ಪು ಸುಲ್ತಾನ್ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ನ.9 ರಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಮಹಿಳಾ ಸದಸ್ಯರಿಗೆ ಚುನಾವಣೆಗೆ ಮತ ಹಾಕಲು ಅಡ್ಡಿಪಡಿಸಿ ಎಳೆದಾಡಿರುವುದು ಕಾನೂನು ಬಾಹಿರ ಚಟುವಟಿಕೆಯಾಗಿದೆ. ಇದರಿಂದ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತೆ ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ದಬ್ಬಾಳಿಕೆ ಮಾಡಿರುವುದು ಸಲ್ಲದು. ಈ ಘಟನೆ ತಡೆಯಲು ವಿಲವಾದ ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರು ಸೂಕ್ತ ಕಾನೂನು ಕ್ರಮ ತಕ್ಷಣ ಜರುಗಿಸಬೇಕು. ಇದು ನಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಬೇಜವ್ದಾರಿ ಹೇಳಿಕೆ ನೀಡಿರುವ ಚುನಾವಣಾಧಿಕಾರಿ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

    ಕಾಂಗ್ರೆಸ್ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ಮಾತನಾಡಿ, ನೀವು ಎಳೆದಾಡಿದ ಮಹಿಳೆಯರಲ್ಲಿ ಒಬ್ಬರು ತುಂಬು ಗರ್ಭಿಣಿ. ಇದನ್ನೇ ನೀವು ಮುಂದುವರಿಸಿದರೆ ನಮ್ಮ ಸಂಘಟನೆಗಳು ನಿಮಗೆ ತಕ್ಕ ಪಾಠ ಕಲಿಸುತ್ತವೆ ಎಂದು ಹೇಳಿದರು.

    ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಮಾತನಾಡಿ, ಘಟನೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವ ಪ್ರಯೋಜನವಾಗಿಲ್ಲ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದರು.

    ದಲಿತ ಸಂಘರ್ಷ ಸಮಿತಿ ಮಹಾಲಿಂಗಪುರ ಘಟಕದ ಅಧ್ಯಕ್ಷ ಲಕ್ಷ್ಮಣ ಮಾಂಗ ಮಾತನಾಡಿದರು. ಇದಕ್ಕೂ ವಿವಿಧ ಸಂಘಟನೆಗಳ ಸದಸ್ಯರು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತ, ಡಬಲ್ ರಸ್ತೆ, ನಡುಚೌಕಿ, ಜವಳಿ ಬಜಾರ್, ಗಾಂಧಿ ವೃತ್ತ, ರಾಣಿ ಚನ್ನಮ್ಮ ವೃತ್ತದ ಮೂಲಕ ಸಾಗಿ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಿದರು.

    ವಿವಿಧ ಸಂಘಟನೆಗಳ ಮುಖಂಡರಾದ ಅರ್ಜುನ ದೊಡಮನಿ, ಜಗದೀಶ ಒಂಟಗೋಡಿ, ಅರುಣ ಮೇತ್ರಿ, ರಘುವೀರ ಆನೇಪ್ಪನವರ, ಸಂಗಪ್ಪ ಮಾದರ, ಆನಂದ ಮುಖ್ಯನ್ನವರ, ರಾಜು ಗೌಡಪ್ಪಗೋಳ, ಮಹಾಲಿಂಗ ಬುದ್ನಿ, ಪುಂಡಲೀಕ ಮಿಲ್ಟ್ರಿ, ದುರ್ಗಪ್ಪ ಕಿರಿಕಿರಿ, ಸಂದೀಪ ದೊಡಮನಿ, ಪರಸು ಮೇತ್ರಿ, ಚನ್ನಪ್ಪ ಮೇತ್ರಿ, ಭೀಮಸಿ ಮಾವಿನಹಿಂಡಿ, ಅರ್ಜುನ ನಾಯಕ, ಲಕ್ಕಪ್ಪ ಭಜಂತ್ರಿ, ಹಾಸಿಂಪೀರ ಮಕಾಂದಾರ, ಬಾಷಾಸಾಬ ಬಿಸ್ತಿ, ಗಿರಿಜಾ ದೊಡಮನಿ, ರೂಪಾ ದೊಡಮನಿ, ಶಾಂತವ್ವ ಲಮಾಣಿ, ಸರೋಜಾ ಚವಾಣ್, ರುಕ್ಮವ್ವ ಚನ್ನಾಳ, ಸುಮಿತ್ರಾ ಆನೇಪ್ಪಗೋಳ, ಜ್ಯೋತಿ ದೊಡಮನಿ, ಯಲ್ಲವ್ವ ಸಂಗಾನಟ್ಟಿ ಸೇರಿ ಹಲವರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts