ಕಾಯಕ ಪೂಜೆಗಿಂತ ಶ್ರೇಷ್ಠ

blank

ಮಹಾಲಿಂಗಪುರ: ಕಾಯಕದಲ್ಲಿ ತನ್ಮಯತೆ ಹೊಂದಿರುವಾಗ ಭಗವಂತನ ಮರೆಯಬೇಕು, ಲೋಕವನ್ನೇ ಮರೆಯಬೇಕು, ಕಾಯಕ ಮಾಡುವುದು ಪೂಜೆಗಿಂತ ಶ್ರೇಷ್ಠ ಎಂದು ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಹೇಳಿದರು.

ಸ್ಥಳೀಯ ಶ್ರೀ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಮುಧೋಳ ಹಾಗೂ ರಬಕವಿ-ಬನಹಟ್ಟಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕಗಳು ಮತ್ತು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕಗಳ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ ಸಮಾರಂಭದಲ್ಲಿ ದಾಕ್ಷಾಯಣಿ ಹುಣಶ್ಯಾಳ (ಮಂಡಿ) ಅವರ ‘ಸ್ಫೂರ್ತಿಯ ಸುಮಗಳು’ ಹಾಗೂ ‘ವಚನ ಸ್ಫೂರ್ತಿ’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಚಿಂತನೆ ಹಾಗೂ ಶಾಸಗಳ ಅಧ್ಯಯನದಿಂದ ಒಂದು ಕಾವ್ಯ ಹುಟ್ಟುತ್ತದೆ. ಅದುವೇ ಅನುಭಾವದ ಅಡುಗೆ, ಅದುವೇ ಕೃತಿ. ವಿವೇಕಿಗಳು, ಸಮಾಜ ಚಿಂತಕರು ಕಾಯಕದ ಜತೆಗೆ ಕಾವ್ಯ, ಶಾಸಗಳ ಅಧ್ಯಯನ, ಚಿಂತನೆ ಮಾಡಿ ತಮ್ಮದೇಯಾದ ಸ್ವತಂತ್ರ ವಿಚಾರಗಳನ್ನು ಪ್ರಕಟಿಸುತ್ತಾರೆ ಎಂದು ಹೇಳಿದರು.

ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ವಿಜಯವಾಣಿ ದಿನಪತ್ರಿಕೆಯಲ್ಲಿ ಮುಂಜಾನೆಯ ಮಾತು ಅಂಕಣದಲ್ಲಿ ಪ್ರಕಟಗೊಂಡಿರುವ ಡಾಂಬರ್ ರೋಡ್ ಮೇಲೆ ಗಾಡಿ ಓಡಿಸುವವ ಉತ್ತಮ ಚಾಲಕನಲ್ಲ. ಬದಲಾಗಿ ಗುಡ್ಡಗಾಡು ಪ್ರದೇಶದಲ್ಲಿಯೂ ಸರಾಗವಾಗಿ ಗಾಡಿ ಓಡಿಸುವವ ಉತ್ತಮ ಚಾಲಕ ಆಗುತ್ತಾನೆ. ತಿಳಿದುಕೊಳ್ಳಬೇಕೆಂಬ ಕುತೂಹಲ ಇರುವವನಿಗೆ ಹೆಣ ಕೂಡ ಉಪದೇಶ ಮಾಡುತ್ತದೆ. ಕುತೂಹಲವಿಲ್ಲದವನಿಗೆ ಜೀವಂತ ಗುರುವೂ ಏನು ಕಲಿಸಲಾರ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪುರ, ಕಸಾಪ ಬೆಂಗಳೂರು ಸದಸ್ಯ ಶೇಖರಗೌಡ ಮಾಲಿಪಾಟೀಲ, ಸಾಹಿತಿ ಡಾ.ಅಶೊಕ ನರೋಡೆ, ಡಾ.ಬಿ.ಡಿ. ಸೋರಗಾಂವಿ ಹಾಗೂ ಕೃತಿಗಳ ಕರ್ತೃ ದಾಕ್ಷಾಯಣಿ ಮಂಡಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಬಸನಗೌಡ ಪಾಟೀಲ, ಶಿವಾನಂದ ಶೆಲ್ಲಿಕೇರಿ, ಯಲ್ಲನಗೌಡ ಪಾಟೀಲ, ಕಾನಿಪ ಅಧ್ಯಕ್ಷ ಎಸ್.ಎಸ್. ಈಶ್ವರಪ್ಪಗೋಳ, ಡಾ.ಪದ್ಮಜೀತ ನಾಡಗೌಡಪಾಟೀಲ, ಶಂಕರ ಸೋರಗಾಂವಿ, ಚಂದ್ರಶೇಖರ ದೇಸಾಯಿ, ಬಿ.ಎನ್. ಪರಡ್ಡಿ, ಕಸಾಪ ಅಧ್ಯಕ್ಷ ವೀರೇಶ ಆಸಂಗಿ, ಕಜಾಪ ಅಧ್ಯಕ್ಷ ಮ.ಕೃ. ಮೇಗಾಡಿ, ಆನಂದ ಪೂಜಾರಿ ಭಾಗವಹಿಸಿದ್ದರು.

ಚಂದ್ರು ಕದ್ದಿಮನಿ ಪ್ರಾರ್ಥಿಸಿದರು. ರಮೇಶ ಅರಕೇರಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹುಲಸೂರ, ಹನುಮಂತ ಮಲಾವಡಿ ನಿರೂಪಿಸಿದರು. ಮಲ್ಲಿಕಾರ್ಜುನ ಅರಬಿ ವಂದಿಸಿದರು.

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…