More

    ಜೀವನಕ್ಕೆ ಎಜುಕೇಷನ್, ಮೆಡಿಟೇಷನ್ ಅತ್ಯಗತ್ಯ

    ಮುಧೋಳ: ಮೆಡಿಟೇಷನ್ ನಮ್ಮ ದೇಹ ಆರೋಗ್ಯವಾಗಿಡುತ್ತದೆ. ಎಜುಕೇಷನ್ ಬದುಕನ್ನು ಆರೋಗ್ಯವಾಗಿಡುತ್ತದೆ. ಅದಕ್ಕಾಗಿ ಮಾನವನ ಬದುಕಿಗೆ ಇವು ಎರಡೂ ಅತ್ಯಗತ್ಯವಾಗಿವೆ ಎಂದು ನಟ ವಿಜಯ ರಾಘವೇಂದ್ರ ಹೇಳಿದರು.

    ನಗರದ ಇಂಗಳಗಿ ರಸ್ತೆಯಲ್ಲಿ ಅರಳಿಕಟ್ಟಿ ಫೌಂಡೇಷನ್‌ನ ದಿ. ರಾಯಲ್ ಸ್ಕೂಲ್ ಆವರಣದಲ್ಲಿ ಸೋಮವಾರ ರಾತ್ರಿ ಮಕ್ಕಳಿಗಾಗಿ ಅರಳಿಕಟ್ಟಿ ವಾಟರ್ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು.

    ಮಕ್ಕಳಿಗೆ ಬೇಕಾದ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಮುಧೋಳದ ಅರಳಿಕಟ್ಟಿ ಫೌಂಡೇಷನ್ ನಮಗೆ ನೀಡುತ್ತಿದ್ದು, ಇದು ಕೇವಲ ಉತ್ತರ ಕರ್ನಾಟಕವಷ್ಟೇ ಅಲ್ಲ, ಕರ್ನಾಟಕದ ಅತ್ಯುತ್ತಮ ಶಾಲೆಯಾಗಿದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ರೈತರ ಮಕ್ಕಳಿಗೆ ಅತ್ಯಾಧುನಿಕ ಹಾಗೂ ಅತ್ಯುತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಫೌಂಡೇಷನ್‌ಗಿರುವ ರೈತರ ಆರೋಗ್ಯದ ಕಾಳಜಿ, ಶಿಕ್ಷಣಕ್ಕೆ ಸಹಕಾರ, ಕರೋನಾ ಸಮಯದಲ್ಲಿ ಆಮ್ಲಜನಕ, ಆಹಾರ ವಿತರಣೆಯ ಕಾರ್ಯ ಸಾಮಾಜಿಕ ಕಳಕಳಿ ಬಿಂಬಿಸುತ್ತದೆ ಎಂದರು.

    ಉತ್ತರ ಕರ್ನಾಟಕದ ಜನತೆ ಕಲೆ ಹಾಗೂ ಕಲಾವಿದರನ್ನು ಗೌರವಿಸುವ ಗುಣ ಹೊಂದಿದ್ದು, ಎಲ್ಲ ಕಲಾವಿದರನ್ನು ಎತ್ತರಕ್ಕೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನನ್ನನ್ನು ಬಾಲ ನಟನಾಗಿ ಕರ್ನಾಟಕದ ಜನತೆ ಸ್ವೀಕಾರ ಮಾಡಿ ಪ್ರಶಸ್ತಿ ಬರುವಂತೆ ಮಾಡಿದ್ದು, ಅಂದಾಜು 60 ಚಲನಚಿತ್ರದಲ್ಲಿ ನಟಿಸಲು ಸಹಾಯವಾಗಿದೆ ಎಂದು ತಿಳಿಸಿದರು.

    ವಿಶ್ರಾಂತ ಡಿಡಿಪಿಐ ಎಂ.ಜಿ. ದಾಸರ ಮಾತನಾಡಿ, ಅನ್ನ, ಅಕ್ಷರ, ಆರೋಗ್ಯದ ಭಾಗ್ಯವನ್ನು ರೈತರು, ರೈತರ ಮಕ್ಕಳು, ಬಡವರಿಗೆ ಕೊಡುವ ಡಾ. ತಿಮ್ಮಣ್ಣ ಅರಳಿಕಟ್ಟಿ ಕಾರ್ಯ ಶ್ಲಾಘನೀಯ ಎಂದರು.

    ಬೀಳಗಿಯ ಎಂ.ಎನ್. ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಅತ್ಯುತ್ತಮ ಶಾಲೆಯನ್ನು ಕೇವಲ ಐದು ವರ್ಷದಲ್ಲಿ ಮಾಡಿದ ಅವರ ಆಸಕ್ತಿಯ ಹಿಂದೆ ನಮ್ಮೆಲ್ಲರ ಸಹಕಾರ ಇರುತ್ತದೆ. ವೈದ್ಯಕೀಯ ಕಾಲೇಜುವರೆಗೆ ಅವರ ಬೆಳವಣಿಗೆ ಮುಂದುವರಿಯಲಿ ಎಂದರು. ಅರಳಿಕಟ್ಟಿ ಫೌಂಡೇಷನ್‌ನ ಪ್ರಧಾನ ಕಾರ್ಯದರ್ಶಿ ವಿನಾಯಕ ಅರಳಿಕಟ್ಟಿ, ರಾಜೇಶ್ವರಿ ಕೋಮಾರ, ವರ್ಷಾ ಗಾರಗೆ, ಗಿರೀಶಗೌಡ ಪಾಟೀಲ್, ಅನಂತರಾವ್ ಘೋರ್ಪಡೆ, ಸವಿತಾ ಅರಳಿಕಟ್ಟಿ ಸದುಗೌಡ ಪಾಟೀಲ ಪ್ರಾಚಾರ್ಯ ಚಂದ್ರಶೇಖರ, ನಟರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts