More

    ಯುವಕರು ರಂಗಭೂಮಿಗೆ ಬರಲಿ

    ಮಹಾಲಿಂಗಪುರ: ಹೌದ್ದ ಹುಲಿಯಾ ನಾಟಕವನ್ನು ಅಚ್ಚುಕಟ್ಟಾಗಿ ಪ್ರದರ್ಶನ ಮಾಡುತ್ತಿರುವ ನಾಟಕ ಕಲಾವಿದರು ಸಿನಿಮಾ ರಂಗದೆಡೆ ಆಕರ್ಷಣೆಗೊಳ್ಳುತ್ತಿರುವ ಯುವಕರನ್ನು ರಂಗಭೂಮಿಯೆಡೆ ಆಕರ್ಷಣೆಗೊಳ್ಳುವಂತೆ ಮಾಡಬೇಕಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

    ಸ್ಥಳೀಯ ಕೆಎಲ್‌ಇ ಕಾಲೇಜು ಎದುರಿನ ಅಂಗಡಿ ಎಂಬುವವರ ಜಾಗದಲ್ಲಿ ಶ್ರೀ ಗುರು ಹುಚ್ಚೇಶ್ವರ ನಾಟ್ಯ ಸಂಘ ಕಮತಗಿ ಅವರಿಂದ ಕಲಾ ಕೇಸರಿ ಮಹೇಶ ಕಲ್ಲೋಳ ವಿರಚಿತ ‘ಹೌದ್ದ ಹುಲಿಯಾ’ ಸಂಪೂರ್ಣ ನಾಟಕವನ್ನು ಪ್ರೇಕ್ಷಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜತೆ ವೀಕ್ಷಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ರಂಗಭೂಮಿ ಕಲಾವಿದರು ದುಶ್ಚಟದಿಂದ ದೂರವಿದ್ದು, ಮಾನಸಿಕ ಹಾಗೂ ದೈಹಿಕವಾಗಿ ಸದೃಢವಿದ್ದರೆ ಮಾತ್ರ ಈ ರಂಗದಲ್ಲಿ ನಿಮ್ಮ ಪ್ರತಿಭೆ ಹೊರಹೊಮ್ಮಲು ಸಾಧ್ಯವಿದೆ. ಬಹಳ ವರ್ಷಗಳಿಂದ ಕಲಾಸೇವೆ ಮಾಡುತ್ತ ಬಂದಿರುವ ಹುಚ್ಚೇಶ್ವರ ಕಂಪನಿಯ ಈ ಕಲಾವಿದರ ಅದ್ಭುತ ಕಲೆಯನ್ನು ನೋಡಿ ನಾನು ಕೂಡ ಈ ಕಲಾವಿದರೊಂದಿಗೆ ಪಾತ್ರ ಮಾಡಬೇಕು ಎನಿಸುತ್ತಿದೆ. ಹೊಗಳಿಕೆಗೂ ಮೀರಿದ ಪ್ರತಿಭೆಗಳು ಈ ನಾಟ್ಯ ಸಂಘದಲ್ಲಿವೆ ಎಂದರು.

    ಸಂಘದ ವ್ಯವಸ್ಥಾಪಕ ಯಾಜ ಕರ್ಜಗಿ ಮಾತನಾಡಿ, ಉಮಾಶ್ರೀ ಸಚಿವರಾಗಿದ್ದಾಗ ಕಲಾವಿದರಿಗಾಗಿದ್ದ ಅನುದಾನವನ್ನು 1 ಕೋಟಿ ರೂ. ಗಳಿಂದ 2 ಕೋಟಿ ರೂ.ಗೆ ಹೆಚ್ಚಿಸಿದರು ಎಂದು ಸ್ಮರಿಸಿದರು.

    ಸಂಘದ ಸಂಚಾಲಕ ದಾವಲ ತಾಳಿಕೋಟಿ ಮಾತನಾಡಿ, ಕಲಾವಿದರ ತವರೂರಾದ ಮಹಾಲಿಂಗಪುರ ಪಟ್ಟಣದಲ್ಲಿ ನಿಜವಾದ ಕಲೆಗೆ ಬೆಲೆ ಇದೆ ಎನ್ನುವುದು ನಿಜವಾಗಿದೆ. ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಿಂದ ಕಲಾಭಿಮಾನಿಗಳು ನಾಟಕ ನೋಡಲು ಉತ್ಸಾಹದಿಂದ ಬರುತ್ತಿರುವುದರಿಂದ ಈ ನಾಟಕ 100ನೇ ಪ್ರಯೋಗದ ಬಾಗಿಲಲ್ಲಿ ಬಂದಿದೆ ಎಂದರು.

    ಸಂಘದ ವ್ಯವಸ್ಥಾಪಕ ಯಾಜ ಕರ್ಜಗಿ, ಕಲಾವಿದರಾದ ಹರೀಶ ಹಿರಿಯೂರ, ಶರಣು ಕಲ್ಲೂರ, ಲಿಂಗರಾಜ ಕಲ್ಲೂರ, ಪವನ ಹಿರೇಮಠ, ಚಿಕ್ಕೇಶ ಕಲ್ಲೂರ, ಭಾರತಿ ದಾವಣಗೆರೆ, ಪ್ರಿಯಾ ಹಿರಿಯೂರ, ಶಬನಾ ಇಳಕಲ್ಲ, ಸಂಗೀತ ಕಲಾವಿದರಾದ ಅಮರೇಶ ಮೇಲಾಪುರ, ಶಿವು ಕುಷ್ಟಗಿ, ನಾಗರಾಜ ಕಲ್ಲೂರ, ಕಾಂಗ್ರೆಸ್ ಮುಖಂಡರಾದ ಮಲ್ಲಪ್ಪ ಸಿಂಗಾಡಿ, ಜಾವೇದ ಭಾಗವಾನ, ಬಸವರಾಜ ರಾಯರ, ದುಂಡಪ್ಪ ಜಾಧವ, ಜಗದೀಶ ಘಟ್ನಟ್ಟಿ, ಲಕ್ಷ್ಮಣ ದೇಸಾರಟ್ಟಿ, ರಾಜು ಭದ್ರನ್ನವರ, ಭೀಮಸಿ ಸಸಾಲಟ್ಟಿ, ಅರವಿಂದ ಮಾಲಬಸರಿ, ಎಸ್.ಎಂ. ಉಳ್ಳೆಗಡ್ಡಿ, ಶಂಕರ ಸೊನ್ನದ, ಅರ್ಜುನ ದೊಡಮನಿ, ರಾಹುಲ್ ಕಲಾಲ, ಶೇಖರ ಪೀಸೆ, ಸೈಯದ್ ಯಾದವಾಡ ಸೇರಿ ಹಲವರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts