More

    ದೌರ್ಜನ್ಯ ಘಟನೆ ವಿರೋಧಿಸಿ ಹೋರಾಟ

    ಮಹಾಲಿಂಗಪುರ: ದಲಿತ ಹಾಗೂ ಅಸಹಾಯಕ ಹೆಣ್ಣುಮಕ್ಕಳ ಮೇಲೆ ಜನಪ್ರತಿನಿಧಿಗಳೇ ದೌರ್ಜನ್ಯ ನಡೆಸಿ, ಸೀ ಜನಾಂಗಕ್ಕೆ ಗೌರವ ಕೊಡದಿದ್ದರೆ ಹೇಗೆ? ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಆರ್.ತಿಮ್ಮಾಪುರ ಪ್ರಶ್ನಿಸಿದರು.

    ಮಂಗಳವಾರ ಸಂಜೆ ಸ್ಥಳೀಯ ಪುರಸಭೆ ಸದಸ್ಯೆ ಚಾಂದನಿ ನಾಯಕ ಅವರ ನಿವಾಸಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಸಂಸ್ಕೃತಿ, ಸಂಸ್ಕಾರ, ಸುಸಂಸ್ಕೃತ ಹಿಂದು ನಾರಿಯರು ಅಂತ ಬಿಜೆಪಿಯವರು ಭಾಷಣ ಮಾಡ್ತಾರೆ. ಜನಮನ್ನಣೆ ಗಳಿಸಲು ನಾಟಕ ಮಾಡ್ತಾರೆ. ಆದರೆ, ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸ. ಪ್ರಜಾಪ್ರಭುತ್ವಕ್ಕೆ ಅಗೌರವ ತಂದಿದ್ದಾರೆ. ಯಾವ ಶಾಸಕರೂ ಮಾಡಬಾರದು ಅಂತಹ ಕೆಟ್ಟ ಕಾರ್ಯ ಮಾಡಿದ್ದಾರೆ. ಆದ್ದರಿಂದ ಶಾಸಕರು ರಾಜೀನಾಮೆ ಕೊಡಬೇಕು, ಇಲ್ಲವೇ ಸಂಬಂಧಪಟ್ಟವರು ಅವರ ರಾಜೀನಾಮೆ ಕೊಡಿಸಬೇಕು ಎಂದು ಒತ್ತಾಯಿಸಿದರು.

    ಕಾಂಗ್ರೆಸ್ ಪಕ್ಷ ವಿಧಾನಸೌಧದಲ್ಲಿ, ವಿಧಾನ ಪರಿಷತ್‌ನಲ್ಲಿ ಹಾಗೂ ಹೊರಗೆ ಹೆಣ್ಣುಮಕ್ಕಳಿಗೆ ಅನ್ಯಾಯವಾಗಲು ಬಿಡಲ್ಲ. ನಮ್ಮ ಪಕ್ಷ ಅದನ್ನು ಖಂಡಿಸುತ್ತದೆ. ಈ ಕೃತ್ಯವನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ನಡೆಯುತ್ತದೆ ಎಂದರು.

    ಮಾಜಿ ಸಚಿವೆ ಉಮಾಶ್ರೀ, ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಡಾ.ಎ.ಆರ್.ಬೆಳಗಲಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಉಪಾಧ್ಯಕ್ಷ ಚನಬಸು ಹುರಕಡ್ಲಿ, ಸದಸ್ಯರಾದ ಯಲ್ಲನಗೌಡ ಪಾಟೀಲ, ಬಲವಂತಗೌಡ ಪಾಟೀಲ, ಮುಖಂಡರಾದ ಕೃಷ್ಣಗೌಡ ಪಾಟೀಲ, ವಿಜುಗೌಡ ಪಾಟೀಲ, ಅರ್ಜುನ ದೊಡಮನಿ, ಎಚ್.ಎಸ್.ಭಜಂತ್ರಿ, ವಿನೋದ ಶಿಂಪಿ, ವಿರೂಪಾಕ್ಷ ಭಾಟ, ಅನೀಲ ದೇಸಾಯಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts