More

    ಎನ್​ಸಿಬಿ ಅಧಿಕಾರಿಯ ‘ನಿಕಾಹ್’​ ಫೋಟೋ ಹಾಕಿದ ಮಹಾ ಸಚಿವ; ಸಿಕ್ಕಿತು ಖಡಕ್ ಉತ್ತರ!

    ಮುಂಬೈ: ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಬಂಧಿಸಲ್ಪಟ್ಟಿರುವ ಮುಂಬೈ ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನ ತನಿಖಾಧಿಕಾರಿ ಎನ್​ಸಿಬಿ ವಲಯ ನಿರ್ದೇಶಕ ಸಮೀರ್​ ವಾಂಖೇಡೆ ಮೇಲೆ ಮತ್ತಷ್ಟು ವೈಯಕ್ತಿಕ ಆರೋಪಗಳು ಮೂಡಿಬಂದಿವೆ. ಈ ಕೇಸು ದುರುದ್ದೇಶಪೂರಿತ ಎಂದು ಆರೋಪಿಸುತ್ತಾ ಬಂದಿರುವ ಎನ್​ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​, ವಾಂಖೇಡೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಾರೆ, ಹಣ ವಸೂಲಿ ಮಾಡುತ್ತಾರೆ ಎಂದು ಆರೋಪಿಸುತ್ತಿದ್ದಾರೆ. ಜೊತೆಗೆ, ವಾಂಖೇಡೆ ಕೆಲಸಕ್ಕೆ ಸೇರಲು ಸುಳ್ಳು ದಾಖಲಾತಿಗಳನ್ನು ಬಳಸಿದ್ದಾರೆ ಎಂದು ಆಪಾದಿಸಿದ್ದಾರೆ.

    ಇಂದು ಸಮೀರ್​ ವಾಂಖೇಡೆ ಅವರ ಮೊದಲ ಮದುವೆಯ ಚಿತ್ರವನ್ನು ಮತ್ತು ‘ನಿಕಾಹ್​ ನಾಮ’ವನ್ನು ಟ್ವಿಟರ್​ ಮೂಲಕ ಜಾಹೀರು ಮಾಡಿರುವ ಮಲಿಕ್​, ವಾಂಖೇಡೆ ಮುಸಲ್ಮಾನರಾಗಿದ್ದರೂ, ಪರಿಶಿಷ್ಟ ಜಾತಿಯ ಮೀಸಲಾತಿ ಆಧಾರದ ಮೇಲೆ ಐಆರ್​ಎಸ್​ ಸೇರಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಆರ್ಯನ್​ ಖಾನ್​ ಕೇಸಲ್ಲಿ 25 ಕೋಟಿ ರೂ. ವಸೂಲಿ ಆರೋಪ; ಎನ್​ಸಿಬಿ ಅಧಿಕಾರಿ ವಿರುದ್ಧ ತನಿಖೆ ಆರಂಭ

    ಖಡಕ್​ ಉತ್ತರ: ಇದಕ್ಕೆ ಪ್ರತಿಕ್ರಿಯಿಸಿರುವ ವಾಂಖೇಡೆ, ನಾನು ನನ್ನ ಮೊದಲನೇ ಪತ್ನಿ ಶಬಾನಾ ಖುರೈಶಿಯನ್ನು ಇಸ್ಲಾಮಿಕ್​ ಸಂಪ್ರದಾಯದಂತೆ ಮದುವೆಯಾಗಿದ್ದೆ. ನನ್ನ ತಾಯಿ ಮುಸಲ್ಮಾನರಾಗಿದ್ದರಿಂದ ಅವರ ಆಸೆಯನ್ನು ಪೂರೈಸಿದ್ದೆ. ಇದು ಅಪರಾಧವಲ್ಲ ಎಂದು ಖಡಕ್​ ಆಗಿ ಉತ್ತರ ನೀಡಿದ್ದಾರೆ. ನಿಕಾಹ್​ ನಡೆದ ಕೆಲವೇ ದಿನಗಳಲ್ಲಿ ನಾವು ಸ್ಪೆಷಲ್ ಮ್ಯಾರೇಜಸ್​ ಆ್ಯಕ್ಟ್​ನ ಕೆಳಗೆ ನಮ್ಮ ಅಂತರಧರ್ಮೀಯ ಮದುವೆಯನ್ನು ರಿಜಿಸ್ಟರ್ ಮಾಡಿದ್ದೆವು ಅಂದಿದ್ದಾರೆ.

    ಸಮೀರ್​ ವಾಂಖೇಡೆ ತಂದೆ ಧ್ಯಾನ್​ದೇವ್ ವಾಂಖೇಡೆ, ‘ನಾನೊಬ್ಬ ದಲಿತ. ನನ್ನ ಮಗ ಮುಸಲ್ಮಾನನಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ. ಸಮೀರ್ ಎರಡನೇ ಪತ್ನಿ ಕ್ರಾಂತಿ ರೆಡ್​ಕರ್​ ವಾಂಖೇಡೆ, ತಮ್ಮ ಪತಿಯ ಮೇಲೆ ವೈಯಕ್ತಿಕ ಆರೋಪಗಳನ್ನು ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನವಾಬ್​ ಮಲಿಕ್​ ತಮ್ಮ ಅಳಿಯನನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಸಮೀರ್​ರನ್ನು ತಮ್ಮ ಹುದ್ದೆಯಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಅಷ್ಟೆ’ ಎಂದಿದ್ದಾರೆ. ಈ ವಿಚಾರದಲ್ಲಿ ತಾವು ಎಫ್​ಐಆರ್​ ದಾಖಲಿಸಿದ್ದು, ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

    ಇದನ್ನೂ ಓದಿ: ಇಂದು ಹೈಕೋರ್ಟಲ್ಲಿ ಶಾರುಖ್​ ಪುತ್ರನ ಜಾಮೀನು ಪ್ರಕರಣ; ಮಾಜಿ ಅಟೋರ್ನಿ ಜನರಲ್​ ವಕಾಲತ್ತು

    ಸಚಿವ ನವಾಬ್​ ಮಲಿಕ್​ ಅಳಿಯ ಸಮೀರ್​ ಖಾನ್​ರನ್ನು ಮತ್ತೊಂದು ಡ್ರಗ್ಸ್ ಪ್ರಕರಣದಲ್ಲಿ ಎನ್​ಸಿಬಿ ಅಧಿಕಾರಿಗಳು ಕಳೆದ ಜನವರಿಯಲ್ಲಿ ಬಂಧಿಸಿದ್ದರು ಎನ್ನಲಾಗಿದೆ. ಕ್ರೂಸ್​ ಶಿಪ್​ ಡ್ರಗ್ಸ್​ ಪ್ರಕರಣದ ನೈಜ ಚಿತ್ರಣವೇನು, ಅದರಲ್ಲಿ ಶಾರುಖ್​ ಪುತ್ರ ಆರ್ಯನ್​ರ ಪಾತ್ರ ಏನು ಎಂಬುದರ ತನಿಖೆಯಾಗುತ್ತಿರುವ ಸಂದರ್ಭದಲ್ಲಿ, ಎನ್​ಸಿಬಿ ತನಿಖಾಧಿಕಾರಿ ಸಮೀರ್​ ವಾಂಖೇಡೆ ಮೇಲೆ ವಿವಿಧ ಆರೋಪಗಳು ಕೇಳಿಬರುತ್ತಿರುವುದು ವಿಪರ್ಯಾಸ. (ಏಜೆನ್ಸೀಸ್)

    10 ವರ್ಷದ ಹಿಂದೆ ಶಾರುಖ್​ನ ತಡೆಹಿಡಿದಿದ್ದರು, ಎನ್​ಸಿಬಿ ನಿರ್ದೇಶಕ ಸಮೀರ್​ ವಾಂಖೇಡೆ!

    ಹೈಕೋರ್ಟ್​ ಮುಂದೆ ಬಿಬಿಎಂಪಿ ಕಮಿಷನರ್​! ಅಕ್ರಮ ಕಟ್ಟಡ ತೆರವಿಗೆ ಡೆಡ್​ಲೈನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts