ಬೆಂಗಳೂರು: ಕಿರುತೆರೆ-ಹಿರಿತೆರೆಗಳಲ್ಲಿ ಅಭಿನಯಿಸಿರುವ ನಟಿ ರಾಧಿಕಾ ರಾವ್ ಗುರುವಾರ ಆಕರ್ಷ್ ಭಟ್ ಜತೆ ವಿವಾಹ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡಿದ್ದಾರೆ. ಇಬ್ಬರೂ ಕರಾವಳಿಯವರೇ ಆಗಿರುವುದರಿಂದ ಇವರ ಮದುವೆ ಮೂಡಬಿದ್ರೆಯಲ್ಲಿ ಉಭಯ ಕುಟುಂಬಸ್ಥರು ಹಾಗೂ ಬಂಧು-ಬಳಗದ ಸಮ್ಮುಖದಲ್ಲಿ ನೆರವೇರಿದೆ.
‘ಹುಬ್ಬಳ್ಳಿ ಹುಡ್ಗ ಮಂಗ್ಳೂರು ಹುಡ್ಗಿ’, ‘ರಾಧಾ ಕಲ್ಯಾಣ’ ಖ್ಯಾತಿಯ ರಾಧಿಕಾ ರಾವ್, ‘ಲುಂಗಿ’ ಹಾಗೂ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆಕರ್ಷ್ ಭಟ್ ಜನಪ್ರಿಯ ಜಾದೂಗಾರರಷ್ಟೇ ಅಲ್ಲ, ಮೈಂಡ್ ರೀಡರ್ ಸಹ ಹೌದು.
2019ರ ಮಾರ್ಚ್ನಲ್ಲಿ ಇವರಿಬ್ಬರ ಪರಿಚಯವಾಗಿದ್ದು, ಕ್ರಮೇಣ ಪ್ರೇಮಾಂಕುರವಾಗಿತ್ತು. ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಆಕರ್ಷ್ ಮತ್ತು ರಾಧಿಕಾ ಮದುವೆಯಾಗಿದ್ದಾರೆ.
ಕಾಜೋಲ್ ಮಗಳ ಈ ಫೋಟೋಕ್ಕೆ ಮಾರು ಹೋಗದವರೇ ಇಲ್ಲ: ಅಂದು ಟ್ರೋಲ್ ಆಗಿದ್ದವಳೀಗ ಎಲ್ಲರ ಫೇವರೆಟ್