More

    ಎಕರೆಗೆ ₹1.30 ಕೋಟಿ ಬೆಲೆ : ರೈತರು ಒಪ್ಪಿದರಷ್ಟೇ ಕೈಗಾರಿಕೆಗೆ ಭೂಸ್ವಾಧೀನ

    ವಿಜಯವಾಣಿ ಸುದ್ದಿಜಾಲ ಮಾಗಡಿ


    ತಾಲೂಕಿಗೆ ಕೈಗಾರಿಕೆ ಪ್ರದೇಶ ತರಬೇಕೆಂದು ಹೋರಾಟ ಮಾಡಿರುವುದು ಸತ್ಯ. ಹಾಗೂ ಕಯಗಾರಿಕೆ ಸ್ಥಾಪನೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ರೈತರಿಗೆ ಅನ್ಯಾಯವಾಗದಂತೆ ಸೂಕ್ತ ಬೆಲೆ ಕೊಡಿಸುತ್ತೇನೆ ಎಂದಿರುವುದು ನಿಜ. ಅದರಂತೆ ಈಗ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಉತ್ತಮ ಬೆಲೆ ನಿಗದಿಯಾಗಿದ್ದು, ರೈತರು ಒಪ್ಪಿದರೆ ಸರ್ಕಾರದಿಂದ ಕೊಡಿಸಲಾಗುವುದು ಎಂದು ಶಾಸಕ ಎ. ಮಂಜುನಾಥ್ ತಿಳಿಸಿದರು.


    ಪಟ್ಟಣದ ಜೆಡಿಎಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 40 ರೈತರನ್ನು ಬೆಂಗಳೂರಿನ ಶಾಸಕರ ಭವನಕ್ಕೆ ಕರೆಸಿಕೊಂಡು ಕೆಐಎಡಿಬಿ ಅಧಿಕಾರಿಗಳ ಸಮ್ಮುಖದಲ್ಲಿ ಬೆಲೆ ನಿಗದಿ ಮಾಡಲಾಗಿದೆ. ಶಿವನಸಂದ್ರ ಸರ್ವೇ ನಂಬರ್‌ಗೆ ಎಕರೆಗೆ 1.30 ಕೋಟಿ ರೂ ನಿಗದಿ ಮಾಡಿದ್ದು, ಇದಕ್ಕೆ ರೈತರು ಒಪ್ಪಿ ಭೂಮಿ ನೀಡಲು ಮುಂದೆ ಬರಬಹುದು. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಾತ್ರ ಈ ಬೆಲೆ ನೀಡುತ್ತಿದ್ದು, ಅಲ್ಲಿನ ಪ್ರದೇಶ ಸಂಪೂರ್ಣ ಅಭಿವೃದ್ಧಿಯಾಗಿದೆ. ಮಾಗಡಿಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಹಾಗೂ ಕೇವಲ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಆದರೂ ರೈತರ ಜಮೀನಿಗೆ ಸೂಕ್ತ ಬೆಲೆ ನಿಗದಿ ಮಾಡಲಾಗಿದೆ. ರೈತರು ಇದನ್ನು ಒಪ್ಪಿ ಭೂಮಿ ನೀಡಲು ಮುಂದಾದರೆ ನಾನೂ ಕೂಡ ರೈತರಿಗೆ ಹಣ ಕೊಡಿಸಲು ಜತೆಯಲ್ಲಿರುತ್ತೇನೆ. ಇದಕ್ಕೆ ರೈತರು ಒಪ್ಪದಿದ್ದರೂ ನನ್ನ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.


    ಅನರ್ಹರಿದ್ದರೆ ಪ್ರಶ್ನಿಸಲಿ

    ಬಾಲಕೃಷ್ಣ ಅವರು ಆಯ್ಕೆ ಮಾಡಿರುವ ಲಾನುಭವಿಗಳು ಯಾರು ಎಂದು ತಿಳಿದಿದೆ. ಒಬ್ಬರಿಗೆ 25 ಎಕರೆವರೆಗೂ ಜಮೀನು ಕೊಡಲು ಮುಂದಾಗಿದ್ದರು. ಇದನ್ನೆಲ್ಲ ತಡೆದಿದ್ದೇವೆ. ಉಪವಿಭಾಗಾಧಿಕಾರಿಗಳಿಗೆ ಲಾನುಭವಿಗಳ ಪಟ್ಟಿ ಕಳಿಸಲಾಗಿದ್ದು, ಲಾನುಭವಿಗಳನ್ನು ಆಯ್ಕೆ ಮಾಡುವಂತೆ ತಿಳಿಸಿದ್ದಾರೆ. ಈಗ ಸ್ಥಳ ಪರಿಶೀಲನೆ ವಾಡಿ ಡಿಸೆಂಬರ್ ಒಳಗೆ ಹಕ್ಕುಪತ್ರ ವಿತರಿಸಲಾಗುವುದು. ಅನರ್ಹ ಲಾನುಭವಿಗಳಿದ್ದರೆ ಪ್ರಶ್ನಿಸಲಿ ಎಂದು ಮಾಜಿ ಶಾಸಕರ ವಿರುದ್ಧ ಮಂಜುನಾಥ್ ಕಿಡಿಕಾರಿದರು.
    ಜೆಡಿಎಸ್ ಯುವ ಟಕದ ಅಧ್ಯಕ್ಷ ವಿಜಯ್‌ಕುವಾರ್, ತಾಪಂ ವಾಜಿ ಅಧ್ಯಕ್ಷೆ ಅರುಂಧತಿ, ಚಿಕ್ಕಣ್ಣ, ಬೆಳಗುಂಬ ಗ್ರಾಪಂ ಅಧ್ಯಕ್ಷ ಕೋಟಪ್ಪ, ಪುರಸಭೆ ಉಪಾಧ್ಯಕ್ಷ ರೆಹಮತ್, ಎಂ.ಎನ್. ಮಂಜುನಾಥ್, ತಿಪ್ಪಸಂದ್ರ ಮುಂತಾದವರು ಹಾಜರಿದ್ದರು.

    ಜೆಡಿಎಸ್ ಸೇರ್ಪಡೆ
    ತಾಲೂಕಿನ ತಗ್ಗಿಕುಪ್ಪೆ ಗ್ರಾಪಂ ವ್ಯಾಪ್ತಿಯ ನಾಗಶೆಟ್ಟಿಹಳ್ಳಿಯ ಗ್ರಾಪಂ ಸದಸ್ಯರಾದ ಶಿವಶಂಕರ್, ವಾಜಿ ಸದಸ್ಯರಾದ ಹನುಮಕ್ಕ, ಲಕ್ಷ್ಮಯ್ಯ, ವೆಂಕಟೇಶಪ್ಪ, ಸುರೇಶ್, ಶ್ರೀನಿವಾಸ್, ಗೋಪಾಲಯ್ಯ, ಮುನಿಯಪ್ಪ, ಆಲೇಗೌಡ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷ ಸೇರಿದರು.

    ಅಧಿಕಾರ ಇದ್ದಾಗ ಏನೂ ವಾಡಲಿಲ್ಲ
    ನಾಲ್ಕು ಅವಧಿಗೆ ಶಾಸಕರಾಗಿದ್ದ ಎಚ್.ಸಿ. ಬಾಲಕೃಷ್ಣ ಅವರು ಏನು ಮಾಡದೆ, ಈಗ ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆಲ್ಲ ಹೆದರುವುದಿಲ್ಲ. ಅವರು ಶಾಸಕರಾಗಿದ್ದಾಗಲೇ ಬಗರ್‌ಹುಕುಂನಲ್ಲಿ ಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ಬಗರ್‌ಹುಕುಂ ಸಮಿತಿಯವರು ಸಹಿ ಹಾಕಿರಲಿಲ್ಲ. ಅದು ಬಾಲಕೃಷ್ಣ ಅವರಿಗೂ ತಿಳಿದಿದೆ. ಈಗಿರುವ ಸಮಿತಿ ಸದಸ್ಯರ ಜತೆ ಚರ್ಚಿಸಿ ಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯ ಹಂತಕ್ಕೆ ಬಂದಿದೆ. ಇನ್ನೇನು ಹಕ್ಕುಪತ್ರ ನೀಡುವ ಸಮಯದಲ್ಲಿ ನಾವು ಪ್ರತಿಭಟನೆ ಮಾಡಿದ್ದರಿಂದ ಹಕ್ಕುಪತ್ರ ವಿತರಿಸಲಾಯಿತು ಎಂಬ ಸಂದೇಶ ನೀಡಲು ಮಾಜಿ ಶಾಸಕರು ಮುಂದಾಗಿದ್ದಾರೆ ಶಾಸಕ ಮಂಜುನಾಥ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts