More

    ಪಾರ್ಟಿ ತ್ಯಜಿಸಿ, ಬಿಜೆಪಿ ಸೇರಿದ್ದ ನಾಯಕನನ್ನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ಕಾಂಗ್ರೆಸ್​!

    ಭೋಪಾಲ್​: ಪಕ್ಷದಲ್ಲಿ ಸಕ್ರಿಯವಾಗಿದ್ದು, ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದವರನ್ನು ಪಕ್ಷದ ಉನ್ನತ ಜವಾಬ್ದಾರಿಗಳಿಗೆ ಆಯ್ಕೆ ಮಾಡುವುದು ಸಹಜ. ಆದರೆ ಮಧ್ಯಪ್ರದೇಶದ ಕಾಂಗ್ರೆಸ್​ ಪಕ್ಷ ತನ್ನ ಯುವ ಘಟಕಕ್ಕೆ ತನ್ನ ಪಕ್ಷದ ಕಾರ್ಯಕರ್ತರನ್ನು ಆಯ್ಕೆ ಮಾಡುವ ಬದಲು ಬಿಜೆಪಿಯ ನಾಯಕನನ್ನು ಆಯ್ಕೆ ಮಾಡಿದೆ. ಈ ಮೂಲಕ ಪಕ್ಷ ನಗೆಪಾಟಲಿಗೆ ಗುರಿಯಾಗಿದೆ.

    ಇದನ್ನೂ ಓದಿ: ಬಸ್ ಒಳಗೆ ಆಡುತ್ತಿದ್ದ ಬಾಲಕಿಯ ರೇಪ್​ ಮಾಡಿ ಗೋಣಿ ಚೀಲದಲ್ಲಿ ತುಂಬಿಟ್ಟ ಚಾಲಕ!

    ಮಧ್ಯಪ್ರದೇಶದ ರಾಜಕೀಯ ನಾಯಕ ಜ್ಯೋತಿರಾದಿತ್ಯಾ ಸಿಂಧ್ಯಾ ಕಾಂಗ್ರೆಸ್​ ತ್ಯಜಿಸಿ, ಬಿಜೆಪಿ ಸೇರ್ಪಡೆಗೊಂಡು ಹಲವು ತಿಂಗಳುಗಳೇ ಕಳೆದಿದೆ. ಜ್ಯೋತಿರಾದಿತ್ಯಾ ಅವರ ಬೆನ್ನಲ್ಲೇ ಹಲವು ನಾಯಕರು ಕಾಂಗ್ರೆಸ್​ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಅದರಲ್ಲಿ ಎನ್​ಎಸ್​ಯುಐ ನಾಯಕ ಹರ್ಷಿತ್​ ಸಿಂಘೈ ಕೂಡ ಒಬ್ಬರು. ಅವರು ಪಾರ್ಟಿ ತ್ಯಜಿಸಿ ಸರಿ ಸುಮಾರು 9 ತಿಂಗಳು ಕಳೆದಿದೆ. ಇದೀಗ ಮಧ್ಯಪ್ರದೇಶ ಯುವ ಕಾಂಗ್ರೆಸ್​ ಘಟಕವು ಹರ್ಷಿತ್​ ಅವರನ್ನು ಜಬಲ್ಪುರದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದೆ. ಆಯ್ಕೆ ಮಾಡಿ, ಹಲವು ಗಂಟೆಗಳ ನಂತರ ಎಚ್ಚೆತ್ತುಕೊಂಡ ಪಕ್ಷ ನೇಮಕಾತಿಯನ್ನು ರದ್ದು ಮಾಡಿದೆ.

    ಹರ್ಷಿತ್​ ಅವರು ಪ್ರಧಾನ ಕಾರ್ಯದರ್ಶಿ ಚುನಾವಣೆಗೆ 2018ರಲ್ಲಿಯೇ ನಾಮಪತ್ರ ಸಲ್ಲಿಸಿದ್ದರಂತೆ. ಆದರೆ ಅದಾದ ಮೇಲೆ ಚುನಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಅವರು ಕಾಂಗ್ರೆಸ್​ ತ್ಯಜಿಸಿ ಬಿಜೆಪಿ ಸೇರಿದ್ದು, ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದರ ಜತೆ ನಾಮಪತ್ರವೂ ರದ್ದಾಗಿತ್ತು. ನವೆಂಬರ್​ನಲ್ಲಿ ನಾಮಪತ್ರ ಹಿಂಪಡೆದಿರುವುದಾಗಿಯೂ ಕಾಂಗ್ರೆಸ್​ನ ಕಚೇರಿಗೆ ಇ ಮೇಲ್​ ಮಾಡಿದ್ದರಂತೆ. ಆದರೂ ಅದನ್ನು ಗಮನಿಸದ ಪಕ್ಷ, ಅವರನ್ನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದೆ. ಚುನಾವಣಾ ಫಲಿತಾಂಶ ಹೊರಬಿದ್ದಂತೆ ಸಾಕಷ್ಟು ಜನರು ಹರ್ಷಿತ್​ ಅವರಿಗೆ ಅಭಿನಂದನೆಗಳನ್ನೂ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ರಾಜನ ಪ್ರೇಯಸಿಯ ನಗ್ನ ಚಿತ್ರಗಳು ಸೋರಿಕೆ! ಈ ಕುತಂತ್ರದ ಹಿಂದಿದೆ ದೊಡ್ಡದೊಂದು ಉದ್ದೇಶ

    ಕಾಂಗ್ರೆಸ್​ನ ಈ ತಪ್ಪಿನ ಬಗ್ಗೆ ಮಾತನಾಡಿರುವ ರಾಜ್ಯ ಯುವ ಘಟಕದ ವಕ್ತಾರ ಮಸೂದ್ ಮಿರ್ಜಾ, “ಹರ್ಷಿತ್​ ಈ ವಿಚಾರವನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ತಪ್ಪು ನಮ್ಮ ಗಮನಕ್ಕೆ ಬಂದಾಕ್ಷಣ ನೇಮಕಾತಿಯನ್ನು ರದ್ದು ಮಾಡಿದ್ದೇವೆ” ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಎಸ್​ಐ ಲವ್ವಿಡವ್ವಿ: ಏನೇ ಮಾಡಿದ್ರೂ ಸಂಬಂಧ ಮಾತ್ರ ಬಿಡ್ತಿಲ್ಲ!

    ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts