More

    ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: 16 ಶಾಸಕರ ರಾಜೀನಾಮೆ ಅಂಗೀಕಾರದಿಂದ ಸಿಎಂ ಕಮಲ್​ನಾಥ್​ಗೆ ಮತ್ತಷ್ಟು ಸಂಕಷ್ಟ

    ಭೋಪಾಲ್​: ಮಧ್ಯಪ್ರದೇಶ ರಾಜಕೀಯ ಹೈಡ್ರಾಮಕ್ಕೆ ಇಂದು ತೆರೆಬೀಳಲಿದೆ. ಶಾಸಕರ ರಾಜೀನಾಮೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಿಎಂ ಕಮಲ್​ನಾಥ್​ ಸುಪ್ರೀಂಕೋರ್ಟ್​ ಆದೇಶದಂತೆ ಇಂದು ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಮಾಡಬೇಕಿದೆ. ಹೀಗಿರುವಾಗ ಸ್ಪೀಕರ್​ ಎನ್​.ಪಿ. ಪ್ರಜಾಪತಿ ಅವರು ಗುರುವಾರ ಮಧ್ಯರಾತ್ರಿ ಜೋತಿರಾಧಿತ್ಯ ಸಿಂದಿಯಾ ಬಣದ 16 ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿರುವುದು ಕಮಲ್​ ಸರ್ಕಾರವನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ.

    ಶಾಸಕರ ರಾಜೀನಾಮೆಯಿಂದಾಗಿ 24 ವಿಧಾನಸಭಾ ಕ್ಷೇತ್ರಗಳಲ್ಲಿ 6 ತಿಂಗಳ ಒಳಗೆ ಉಪಚುನಾವಣೆ ಎದುರಾಗಲಿದೆ. ಆದರೆ, ಈಗ ಎದುರಾಗಿರುವ ಪ್ರಶ್ನೆಯೆಂದರೆ ಕಮಲ್​ ನಾಥ್​ ಹೇಗೆ ಬಹುಮತ ಸಾಬೀತುಪಡಿಸಲಿದ್ದಾರೆ ಎಂಬುದು. ಶಾಸಕರ ರಾಜೀನಾಮೆಯಿಂದ ಕಾಂಗ್ರೆಸ್​ ಸಂಖ್ಯೆ 92ಕ್ಕೆ ಕುಸಿದಿದೆ. ಬಿಜೆಪಿ 107 ಶಾಸಕರ ಬೆಂಬಲ ಹೊಂದಿದೆ.

    ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳು ಶುಕ್ರವಾರ ತಮ್ಮ ಶಾಸಕರಿಗೆ ವಿಪ್​ ಜಾರಿ ಮಾಡಿವೆ. ಶಾಸಕರಿಬ್ಬರ ಸಾವು ಹಾಗೂ 22 ಬಂಡಾಯ ಶಾಸಕರ ರಾಜೀನಾಮೆಯಿಂದ ಸದನ ಬಲ 206ಕ್ಕೆ ಕುಸಿದ್ದು, ಬಹುಮತ ಸಾಬೀತಿಗೆ 104 ಸ್ಥಾನಗಳ ಅವಶ್ಯಕತೆ ಇದೆ. ಕಾಂಗ್ರೆಸ್​ನೊಂದಿಗೆ ಕೈಜೋಡಿಸಿದ್ದ ಬಿಎಸ್​ಪಿ(2), ಎಸ್​ಪಿ(1) ಮತ್ತು ಪಕ್ಷೇತರ(4) ಶಾಸಕರು ಈಗಲೂ ಕಾಂಗ್ರೆಸ್​ಗೆ ಬೆಂಬಲ ನೀಡಿದರೂ ಸಹ ಬಹುಮತ ಸಾಬೀತುಪಡಿಸವಲ್ಲಿ ಕಾಂಗ್ರೆಸ್​ಗೆ ಕಷ್ಟವಾಗಲಿದೆ. ಇತ್ತ 107 ಸ್ಥಾನವನ್ನು ಹೊಂದಿರುವ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

    ಮಾರ್ಚ್​ 10ರಂದು ಸಿಂದಿಯಾ ಬಣದ 22 ಶಾಸಕರು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದರಿಂದ ಮಧ್ಯಪ್ರದೇಶ ರಾಜಕೀಯದಲ್ಲಿ ಬಿಕ್ಕಟ್ಟು ಉಂಟಾಗಿದೆ. ಈಗಾಗಲೇ ಸಿಂಧಿಯಾ ಬಿಜೆಪಿಗೆ ಸೇರಿದ್ದಾರೆ. ಸಿಎಂ ಕಮಲ್​ ನಾಥ್​ ಮನವಿಯಂತೆ 6 ಶಾಸಕರನ್ನು ವಜಾಗೊಳಿಸಲಾಗಿದೆ. ಉಳಿದ 16 ಶಾಸಕರ ರಾಜೀನಾಮೆಯನ್ನು ಸ್ಪೀಕರ್​ ಅಂಗೀಕರಿಸಿರುವುದರಿಂದ ಇಂದು ನಡೆಯುವ ವಿಶ್ವಾಸಮತ ಯಾಚನೆ ನಂತರ ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟಿಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts