More

    ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ಗೆ ಬಿಗ್​ ಶಾಕ್​ ನೀಡಿದ ಸುಪ್ರೀಂ ಕೋರ್ಟ್​: ಕಾಂಗ್ರೆಸ್​ ಸರ್ಕಾರ ಏನಾಗಲಿದೆ?

    ನವದೆಹಲಿ: ಮಧ್ಯ ಪ್ರದೇಶ ಸಿಎಂ ಕಮಲ್​ನಾಥ್​ ನಾಳೆ ಸಂಜೆ 5 ಗಂಟೆಯೊಳಗೆ (ಮಾ.20) ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ಸುಪ್ರೀಂಕೋರ್ಟ್​ ಆದೇಶಿಸಿದೆ.

    ಕಾಂಗ್ರೆಸ್​ ಶಾಸಕರ ರಾಜೀನಾಮೆಯಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು ಕೂಡಲೇ ವಿಶ್ವಾಸಮತ ಯಾಚನೆಗೆ ಆದೇಶ ನೀಡಬೇಕು ಎಂದು ಬಿಜೆಪಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ತೀರ್ಪು ನೀಡಿದೆ. ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾ.ಹೇಮಂತ್ ಗುಪ್ತಾ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತು.

    ಕಾಂಗ್ರೆಸ್​ನ 16 ಮಂದಿ ಬಂಡಾಯ ಶಾಸಕರು ಬೆಂಗಳೂರಿನ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದಾರೆ. ಅವರು ವಿಶ್ವಾಸಮತ ಯಾಚನೆಯಲ್ಲಿ ಪಾಲ್ಗೊಂಡರೆ ಅವರು ಭೋಪಾಲ್​​ಗೆ ಮರಳಲು ಅವಕಾಶ ಕಲ್ಪಿಸಬೇಕು. ಈ ಶಾಸಕರ ಭದ್ರತೆಯನ್ನು ಕರ್ನಾಟಕ ಡಿಜಿಪಿ ಹಾಗೂ ಮಧ್ಯ ಪ್ರದೇಶದ ಡಿಜಿಪಿ ವಹಿಸಿಕೊಳ್ಳಬೇಕು ಎಂದು ಕೋರ್ಟ್​ ಆದೇಶ ನೀಡಿದೆ.

    ಕಾಂಗ್ರೆಸ್ ಪರ ಹಿರಿಯ ವಕೀಲ ದುಷ್ಯಂತ ದವೆ, ಬಿಜೆಪಿ ಪರ ವಕೀಲ ಮುಕುಲ್ ರೋಹಟಗಿ, ಬಂಡಾಯ ಶಾಸಕರ ಪರ ಮಣಿಂದರ್ ಸಿಂಗ್ ವಾದ ಮಂಡಿಸಿದರು. (ಏಜೆನ್ಸೀಸ್​)

    ಇಂದು ವಿಶ್ವಾಸಮತಕ್ಕೆ ಸುಪ್ರೀಂ ಆದೇಶ?: ಕರ್ನಾಟಕ, ಮಹಾರಾಷ್ಟ್ರ ಬಳಿಕ ಸುಪ್ರೀಂನಲ್ಲಿ ಮತ್ತೊಂದು ಪ್ರಕರಣದ ವಿಚಾರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts