More

    VIDEO| ಯುವಕರ ಜತೆ ಮಾತನಾಡಿದ್ದಕ್ಕೆ ಹಾಸ್ಟೆಲ್​ಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಥಳಿಸಿದ ಬ್ಯಾಂಕ್​ ಮ್ಯಾನೇಜರ್​ ಬಂಧನ

    ಇಂದೋರ್​: ಯುವಕರ ಜತೆ ಮಾತನಾಡುತ್ತಿದ್ದಕ್ಕೆ ಆಕ್ರೋಶಗೊಂಡು ವಿದ್ಯಾರ್ಥಿನಿಯರ ಹಾಸ್ಟೆಲ್​ಗೆ ನುಗ್ಗಿ ಯುವತಿಯರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮೌಖಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಮಧ್ಯ ಪ್ರದೇಶದ ಇಂದೋರ್​ನ ಬ್ಯಾಂಕ್​ ಮ್ಯಾನೇಜರ್​ ಒಬ್ಬರ ವಿರುದ್ಧ ಹಿಂಸೆ ಮತ್ತು ಅಸಭ್ಯ ವರ್ತನೆ ಪ್ರಕರಣದಡಿಯಲ್ಲಿ ಭಾನುವಾರ ಬಂಧಿಸಲಾಗಿದೆ.

    ಬಂಧಿತ ಆರೋಪಿಯನ್ನು ಅಮರ್ಜಿತ್​ ಸಿಂಗ್​(45) ಎಂದು ಗುರುತಿಸಲಾಗಿದೆ. ಈತ ಖಾಸಗಿ ಬ್ಯಾಂಕ್​ ಒಂದರ ಉದ್ಯೋಗಿ. ಕಳೆದ ಶುಕ್ರವಾರ ರಾತ್ರಿ ಇಂದೋರ್​ನ ಭನ್ವಾರ ಕೌನ್​ ಏರಿಯಾದಲ್ಲಿರುವ ಎಂಬಿಯ ವಿದ್ಯಾರ್ಥಿನಿಯರ ಹಾಸ್ಟೆಲ್​ಗೆ ನುಗ್ಗಿ ಮನಬಂದಂತೆ ವರ್ತಿಸಿ, ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

    ಶುಕ್ರವಾರ ಸಂಜೆ ನಮ್ಮ ಕೆಲ ಸ್ನೇಹಿತರು ನಮ್ಮನ್ನು ಭೇಟಿ ಮಾಡಲು ಹಾಸ್ಟೆಲ್​ ಹೊರಭಾಗಕ್ಕೆ ಬಂದಿದ್ದರು. ನಾವು ಹಾಸ್ಟೆಲ್​ ಗೇಟ್​ ಹೊರಗಡೆ ಮಾತನಾಡುತ್ತಾ ನಿಂತಿದ್ದೆವು. ಅಮರ್ಜಿತ್​ ಸಿಂಗ್​ ನಮ್ಮತ್ತ ಬಂದು ಸ್ನೇಹಿತರ ಮೇಲೆ ದಾಳಿ ಮಾಡಿದರು. ಬಳಿಕ ನಮ್ಮನ್ನೇ ಹಿಂಬಾಲಿಸಿಕೊಂಡು ಹಾಸ್ಟೆಲ್​ ಒಳಗಡೆ ಬಂದರು ಎಂದು ಓರ್ವ ಹಾಸ್ಟೆಲ್ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾರೆ.

    ಇದೇ ಮೊದಲೇನಲ್ಲಾ. ಸಾಕಷ್ಟು ಬಾರಿ ನಡೆದಿದೆ. ಆತ ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದ ಹಾಗೂ ಕಿರುಚಾಡುತ್ತಿದ್ದ. ಆದರೆ, ಈ ಬಾರಿ ನಮ್ಮ ಸ್ನೇಹಿತರು ಅವನ ವಿರುದ್ಧ ಹೋರಾಡಲು ಯತ್ನಿಸಿದೆವು. ಆದರೆ ಆತನ ತಕ್ಷಣ ಕೋಪಗೊಂಡ ಆದರೆ, ನಾವು ಅವನಿಗೆ ಥಳಿಸಿದೆವು. ಅವನು ಕೂಡ ನಮ್ಮ ಮೇಲೆ ಹಲ್ಲೆ ಮಾಡಿದ ಎಂದು ದೂರಿದ್ದಾರೆ.

    ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್​ ಆಗಿದ್ದು, ಅದರಲ್ಲಿ ನೀಲಿ ಬಣ್ಣದ ಟೀಶರ್ಟ್​ ಧರಿಸಿರುವ ಆರೋಪಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

    ಇನ್ನು ದಾಳಿ ಬಗ್ಗೆ ಮಾತನಾಡುತ್ತಾ ತಮ್ಮ ಮಗ ಅಮರ್ಜಿತ್​ ಸಿಂಗ್​ನನ್ನು ಸಮರ್ಥಿಸಿಕೊಂಡ ಆತನ 67 ವರ್ಷದ ತಾಯಿ, ಹಾಸ್ಟೆಲ್​ ಗೇಟ್​ ಮುಂಭಾಗ ಸ್ನೇಹಿತರೊಂದಿಗೆ ಯುವತಿಯರು ಮಾತನಾಡುವುದನ್ನು ವಿರೋಧಿಸಿದರು. ಅಲ್ಲದೆ, ಸ್ಥಳೀಯರು ಕೂಡ ಈ ಏರಿಯಾದಲ್ಲಿ ಸಾಕಷ್ಟು ಅನಿಯಂತ್ರಿತ ಹಾಸ್ಟೆಲ್‌ಗಳು ಇವೆ ಎಂದು ಆರೋಪಿಸಿದ್ದು, ಯುವತಿಯರು ಸದಾ ಯುವಕರ ಜತೆ ಮಾತನಾಡುತ್ತಾ ನಿಂತಿರುತ್ತಾರೆ ಎಂದು ದೂರಿದ್ದಾರೆ.

    ಆರೋಪಿ ಅಮರ್ಜಿತ್​ ಸಿಂಗ್​ ಹಾಸ್ಟೆಲ್​ ಪಕ್ಕದ ನಿವಾಸಿಯಾಗಿದ್ದಾರೆ. ಹಾಸ್ಟೆಲ್​ ಹೊರಭಾಗದಲ್ಲಿ ಯುವತಿಯರು ಮತ್ತು ಯುವಕರು ಇರುವುದನ್ನು ವಿರೋಧಿಸಿದ್ದಾರೆ. ಇದು ಮಾತಿನ ಚಕಮಕಿಗೆ ಎಡೆಮಾಡಿಕೊಟ್ಟಿದೆ. ಮಾತಿಗೆ ಮಾತು ಬೆಳೆದು ಸ್ಥಳದಲ್ಲೇ ಗಲಾಟೆ ನಡೆದಿದೆ. ಬಳಿಕ ಹಾಸ್ಟೆಲ್​ ಒಳಗೆ ತೆರಳಿ ಯುವತಿಯರ ಮೇಲೆಯೂ ಆರೋಪಿ ಹಲ್ಲೆ ಮಾಡಿದ್ದಾನೆ ಎಂದು ಸ್ಟೇಷನ್​ ಹೌಸ್​ ಆಫೀಸರ್​ ಸಂಜಯ್​ ಶುಕ್ಲಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts