More

    ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

    ಭೋಪಾಲ್​: ದೇಶಾದ್ಯಂತ ಭಾರಿ ಸದ್ದು ಮಾಡಿದ ಮಧ್ಯಪ್ರದೇಶದ ಹೈಪ್ರೊಫೈಲ್​ ಹನಿಟ್ರ್ಯಾಪ್​ ಪ್ರಕರಣದ ಸ್ಫೋಟಕ ವರದಿಯೊಂದು ಹೊರಬಿದ್ದಿದೆ. ಪೊಲೀಸ್​ ಬಲೆಗೆ ಬಿದ್ದಿರುವ ಯುವತಿಯರ ಮೊಬೈಲ್​ ಮತ್ತು ಲ್ಯಾಪ್​ಟಾಪ್​ಗಳಲ್ಲಿ ಸಾಕಷ್ಟು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಎಲ್ಲವು ಸಹ ಅಸಲಿ ವಿಡಿಯೋಗಳು ಎಂಬುದಾಗಿ ಹೈದರಾಬಾದ್​ನ ಎಫ್​ಎಸ್​ಎಲ್​ ಲ್ಯಾಬ್​ ವರದಿ ನೀಡಿದೆ.

    ಅನೇಕ ವಿಡಿಯೋಗಳಲ್ಲಿ ಯುವತಿಯರ ಜತೆ ವಿಐಪಿಗಳು ಇರುವುದರಿಂದ ಮಧ್ಯಪ್ರದೇಶದ ರಾಜಕೀಯದಲ್ಲಿ ಭಾರಿ ತಲ್ಲಣ ಸೃಷ್ಟಿಯಾಗಿದೆ. ಬ್ಲ್ಯಾಕ್​ಮೇಲ್​ ಮತ್ತು ವಂಚನೆ ಅಡಿಯಲ್ಲಿ 2019, ಸೆಪ್ಟೆಂಬರ್​ 19ರಲ್ಲೇ ಇಂದೋರ್​ನ ಪಲಾಸಿಯಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದೋರ್​ ಮುನ್ಸಿಪಲ್​ ಕಾರ್ಪೊರೇಷನ್​ ಇಂಜಿನಿಯರ್​ ಹರ್ಭಜನ್​ ಸಿಂಗ್​ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.

    ಇದನ್ನೂ ಓದಿ: ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!

    ಈ ಜಾಲದಲ್ಲಿ ಒಳಗೊಂಡಿದ್ದ ಐವರು ಯುವತಿಯರು ಮತ್ತು ಅವರ ಚಾಲಕರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಬಳಿಕ ಪ್ರಕರಣದಲ್ಲಿ ಪ್ರಮುಖ ನಾಯಕರು ಮತ್ತು ಅಧಿಕಾರಿಗಳ ಹೆಸರು ಸಹ ಕೇಳಿಬಂದಿತ್ತು. ಇದಾದ ಬಳಿಕ ತನಿಖೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರ ನಡುವೆ ಅನೇಕ ಆರೋಪಿಗಳು ಜಾಮೀನಿಗಾಗಿ ಕೋರ್ಟ್​ ಮೊರೆ ಹೋಗಿದ್ದರು. ಆದರೆ, ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯ ಯಾರಿಗೂ ಜಾಮೀನು ನೀಡಿರಲಿಲ್ಲ.

    ಯುವತಿಯರನ್ನು ಬಂಧಿಸಿದ ಬಳಿಕ ವಿಚಾರಣೆ ನಡೆಸಿದಾಗ ಮಧ್ಯಪ್ರದೇಶದ ಅನೇಕ ಹೈಪ್ರೊಫೈಲ್​ ಅಧಿಕಾರಿಗಳು, ಉದ್ಯಮಿಗಳು ಮತ್ತು ನಾಯಕರು (ಸಚಿವರು ಸೇರಿದಂತೆ) ಯುವತಿಯರ ಹನಿಟ್ರ್ಯಾಪ್​ ಬಲೆಯಲ್ಲಿ ಬಿದ್ದಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಯುವತಿಯರ ಬ್ಲ್ಯಾಕ್​ಮೇಲ್​ನಿಂದ ಸರ್ಕಾರದ ವಿರುದ್ಧ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.

    ಇದನ್ನೂ ಓದಿರಿ: ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​

    ಅಲ್ಲದೆ, ತಮಗೆ ಬೇಕಾದ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಇದೀಗ ವಿಡಿಯೋಗಳು ಅಸಲಿ ಎಂಬುದು ಎಫ್​ಎಸ್​ಎಲ್​ ವರದಿ ನೀಡುರುವುದು ರಾಜಕೀಯದ ತಲ್ಲಣಕ್ಕೆ ಕಾರಣವಾಗುವ ಸಾದ್ಯತೆ ಇದೆ. (ಏಜೆನ್ಸೀಸ್​)

    ಶಕುಂತಲೆಯಾದ ಸಮಂತಾ ಅಕ್ಕಿನೇನಿ

    ಕೆಜಿಎಫ್ 2 ಟೀಸರ್ ಸರಣಿ ದಾಖಲೆ!

    ಸನ್ನಿ ಲಿಯೋನ್​ ಸಾಹಸಗಳ ಹಿಂದಿರುವ ಆ ಟ್ಯಾಲೆಂಟೆಡ್​ ಯಂಗ್​ಮ್ಯಾನ್​ ಇವರೇ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts