More

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಂಚಲಿವೆ ಮೇಡ್ ಇನ್ ಇಂಡಿಯಾ ಕ್ರೀಡಾ ಸಾಮಗ್ರಿಗಳು!

    ನವದೆಹಲಿ: ಮುಂಬರುವ ಟೋಕಿಯೊ ಒಲಿಂಪಿಕ್ಸ್ ವೇಳೆ ಭಾರತ, ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಮಿಂಚಲಿದೆ! ಹಾಗೆಂದ ಮಾತ್ರಕ್ಕೆ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾರತ ದೊಡ್ಡ ಮಟ್ಟದಲ್ಲಿ ಪದಕ ಬೇಟೆಯಾಡುವ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಬಳಸಲಾಗುವ ಕ್ರೀಡಾ ಪರಿಕರಗಳು ಭಾರತದಲ್ಲೇ ಸಿದ್ಧವಾಗಿರುವ ಕಾರಣ, ‘ಮೇಡ್ ಇನ್ ಇಂಡಿಯಾ’ ಮುದ್ರೆ ಮಿಂಚುವ ನಿರೀಕ್ಷೆ ಇಡಲಾಗಿದೆ.

    ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಒಲಿಂಪಿಕ್ಸ್ ವೇಳೆ ಕ್ರೀಡಾಪರಿಕರಗಳನ್ನು ಪೂರೈಸುವ ಅವಕಾಶವನ್ನು ಭಾರತದ 6 ಕಂಪನಿಗಳಿಗೆ ನೀಡಿದೆ. ಇದರನ್ವಯ ಭಾರತ ಮೂಲದ ಆನಂದ್ ಟ್ರ್ಯಾಕ್ ಆಂಡ್ ಫೀಲ್ಡ್ ಇಕ್ವಿಪ್‌ಮೆಂಟ್ (ಎಟಿಇ), ಭಲ್ಲಾ ಇಂಟರ್‌ನ್ಯಾಷನಲ್ ಮತ್ತು ನೆಲ್ಕೋ ಕಂಪನಿಗಳು ಸಿದ್ಧಪಡಿಸಿರುವ ಶಾಟ್‌ಪುಟ್, ಡಿಸ್ಕಸ್ ಮತ್ತು ಹ್ಯಾಮರ್ ಥ್ರೋ ಪರಿಕರಗಳು ಬಳಕೆಯಾಗಲಿವೆ. ಅಥ್ಲೆಟಿಕ್ಸ್ ಸ್ಪರ್ಧೆಯ ವೇಳೆ ಕ್ರೀಡಾಂಗಣದ ರ‌್ಯಾಕ್‌ನಲ್ಲಿ ಈ ಸಾಮಗ್ರಿಗಳನ್ನು ಇಡಲಾಗಿರುತ್ತದೆ ಮತ್ತು ಕ್ರೀಡಾಪಟುಗಳು ತಮಗೆ ಇಷ್ಟವಾದವುಗಳನ್ನು ಬಳಸಬಹುದಾಗಿದೆ.

    ಇದನ್ನೂ ಓದಿ: ಬಾಲಿವುಡ್ ನಟಿ ಕಿಮ್ ಶರ್ಮ ಜತೆ ಟೆನಿಸ್ ತಾರೆ ಲಿಯಾಂಡರ್ ಪೇಸ್ ಡೇಟಿಂಗ್!

    ಟೋಕಿಯೊಗೆ 7.26 ಕೆಜಿ ತೂಕದ ಶಾಟ್‌ಪುಟ್, 2 ಕೆಜಿ ತೂಕದ ಡಿಸ್ಕಸ್ ಮತ್ತು 7.26 ಕೆಜಿ ತೂಕದ ಹ್ಯಾಮರ್‌ಗಳನ್ನು ನಾವು ಪೂರೈಸಿದ್ದೇವೆ. ನಮ್ಮ ಕಂಪನಿಯ ಒಟ್ಟು 36 ಸಾಮಗ್ರಿಗಳು ಒಲಿಂಪಿಕ್ಸ್ ವೇಳೆ ಬಳಕೆಯಾಗಲಿವೆ ಎಂದು ಎಟಿಇಯ ಆದರ್ಶ್ ಆನಂದ್ ತಿಳಿಸಿದ್ದಾರೆ. ಅಲ್ಲದೆ 1992ರ ಬಾರ್ಸಿಲೋನಾ ಗೇಮ್ಸ್‌ನಿಂದಲೂ ತಮ್ಮ ಕಂಪನಿಯ ವಸ್ತುಗಳನ್ನು ಒಲಿಂಪಿಕ್ಸ್‌ಗೆ ಪೂರೈಸಲಾಗುತ್ತಿದೆ ಎಂದಿದ್ದಾರೆ. ಈ ಕಂಪನಿ ಮೀರಠ್ ಮತ್ತು ನವದೆಹಲಿಯಲ್ಲಿ ಕಾರ್ಖಾನೆಗಳನ್ನು ಹೊಂದಿವೆ. ಕ್ರೀಡಾಪಟುಗಳು ಕ್ರೀಡಾಂಗಣದ ರ‌್ಯಾಕ್‌ನಲ್ಲಿಟ್ಟ ಪರಿಕರಗಳನ್ನೇ ಬಳಸಬೇಕೆಂಬುದು ಕಡ್ಡಾಯವಲ್ಲ. ಕೆಲ ಕ್ರೀಡಾಪಟುಗಳು ತಮ್ಮದೇ ಆದ ಪರಿಕರಗಳನ್ನು ಬಳಸಿದರೆ, ಕೆಲ ಕ್ರೀಡಾಪಟುಗಳಷ್ಟೇ ಕ್ರೀಡಾಂಗಣದ ಪರಿಕರ ಬಳಸುತ್ತಾರೆ.

    ಭಾರತದ ಮೂವರು ಅಥ್ಲೀಟ್‌ಗಳಾದ ಶಾಟ್‌ಪುಟ್ ಪಟು ತೇಜಿಂದರ್ ಪಾಲ್ ಸಿಂಗ್, ಮಹಿಳಾ ಡಿಸ್ಕಸ್ ಥ್ರೋ ಪಟುಗಳಾದ ಕಮಲ್‌ಪ್ರೀತ್ ಕೌರ್ ಮತ್ತು ಸೀಮಾ ಪೂನಿಯಾ ತಮ್ಮದೇ ಪರಿಕರಗಳನ್ನು ಒಲಿಂಪಿಕ್ಸ್‌ನಲ್ಲಿ ಬಳಸಿದರೂ, ಅವು ‘ಮೇಡ್ ಇನ್ ಇಂಡಿಯಾ’ ಬ್ರ್ಯಾಂಡ್‌ಗಳೇ ಆಗಿರುತ್ತವೆ. ಯುರೋಪ್ ಮತ್ತು ಅಮೆರಿಕದ 40ಕ್ಕೂ ಅಧಿಕ ದೇಶಗಳ ಕ್ರೀಡಾಪಟುಗಳು ಬಳಸುವ ವೈಯಕ್ತಿಕ ಕ್ರೀಡಾ ಪರಿಕರಗಳು ಕೂಡ ಭಾರತದಲ್ಲಿ ತಯಾರಾದುದೇ ಆಗಿರುತ್ತವೆ ಎಂದು ಎಂಬುದು ಗಮನಾರ್ಹ. ಶಾಟ್‌ಪುಟ್, ಡಿಸ್ಕಸ್ ಮತ್ತು ಹ್ಯಾಮರ್ ಥ್ರೋ ಪರಿಕರಗಳು 6ರಿಂದ 10 ಸಾವಿರ ರೂ. ಬೆಲೆ ಹೊಂದಿರುತ್ತವೆ.

    ಪ್ರಚಾರ ಅವಕಾಶ
    ಭಾರತದ ಕ್ರೀಡಾ ಪರಿಕರಗಳನ್ನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಳಸಲು ಆತಿಥೇಯ ಸಂಘಟನಾ ಸಮಿತಿ ಯಾವುದೇ ಮೊತ್ತವನ್ನು ನೀಡುವುದಿಲ್ಲ. ಇದೊಂದು ಜಾಹೀರಾತಿನ ರೀತಿಯಲ್ಲಿರುತ್ತದೆ. ಜಾಗತಿಕ ಮಟ್ಟದ ವೇದಿಕೆಯಲ್ಲಿ ಮತ್ತು ಸ್ಟಾರ್ ಕ್ರೀಡಾಪಟುಗಳ ಎದುರು ನಮ್ಮ ಬ್ರ್ಯಾಂಡ್‌ಗಳನ್ನು ಪರಿಚಯಿಸಲು ಇದೊಂದು ಉತ್ತಮ ಅವಕಾಶವಾಗಿರುತ್ತದೆ. ನಮ್ಮ ಪರಿಕರಗಳ ಗುಣಮಟ್ಟ ಇಷ್ಟವಾದರೆ ಅವರು ಭವಿಷ್ಯದಲ್ಲಿ ಅವುಗಳನ್ನೇ ಬಳಸಬಹುದು ಎಂದು ಭಲ್ಲಾ ಇಂಟರ್‌ನ್ಯಾಷನಲ್ ಕಂಪನಿಯ ಅಧಿಕಾರಿ ಆಶುತೋಷ್ ಭಲ್ಲಾ ತಿಳಿಸಿದ್ದಾರೆ.

    VIDEO: ಮಿಚೆಲ್ ಸ್ಟಾರ್ಕ್ – ರಸೆಲ್ ಹಣಾಹಣಿಯಲ್ಲಿ ಗೆದ್ದ ಆಸೀಸ್

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಧಾರಣೆಗೆ ಸ್ವಸಹಾಯ ಪದ್ಧತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts