More

    ಮೂವರು ಕಳ್ಳರ ಬಂಧನ

    ಮದ್ದೂರು: ರಾತ್ರಿ ಮನೆಗೆ ಹೊಂಚುಹಾಕಿ ಮಹಿಳೆಯರ ಮಾಂಗಲ್ಯ ಸರ ಹಾಗೂ ಆಭರಣಗಳನ್ನು ದೋಚುತ್ತಿದ್ದ ಮೂವರನ್ನು ಬಂಧಿಸಿ ಅವರಿಂದ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪಟ್ಟಣದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.


    ಮೈಸೂರಿನ ವಿದ್ಯಾರಣ್ಯಂಪುರಂನ ಸ್ಟರ್ಲಿಂಗ್ ಟಾಕೀಸ್ ಹತ್ತಿರದ ನಿವಾಸಿ ಕೂಲಿ ಕೆಲಸ ಮಾಡುವ ಅನಂತ ಆಲಿಯಾಸ್ ಗುರುವಾ, ಚನ್ನಪಟ್ಟಣ ತಾಲೂಕು ಬೈರಾಪಟ್ಟಣದ ನಿವಾಸಿಗಳಾದ ಹಂದಿ ಸಾಗಣೆ ಕೆಲಸ ಮಾಡುವ ಕೃಷ್ಣ ಹಾಗೂ ವೆಂಕಟೇಶ್ ಅಲಿಯಾಸ್ ಸುಮ ಅವರನ್ನು ಬಂಧಿಸಿ, ಅವರಿಂದ ವಿವಿಧ ಪ್ರಕರಣಗಳಲ್ಲಿ ಕಳ್ಳತವಾಗಿದ್ದ 435 ಗ್ರಾಂ ತೂಕದ ವಿವಿಧ ಚಿನ್ನದ ಒಡವೆಗಳು ಹಾಗೂ ಒಂದೂವರೆ ಕೆಜಿ ತೂಕದ ಬೆಳ್ಳಿ ಪದಾರ್ಥಗಳು, ಕಳ್ಳತನಕ್ಕೆ ಬಳಸಿದ್ದ ಟಾಟಾ ಏಸ್, ಬೈಕ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ್ದ ಆಯುಧಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.


    ತಾಲೂಕಿನ ಆಲಂಶೆಟ್ಟಿ ಗ್ರಾಮದಲ್ಲಿ ಏ.4 ರಂದು ರಾತ್ರಿ 11 ಗಂಟೆಯಲ್ಲಿ ಶಿವಮಾದು ಅವರ ಮನೆ ಹಿಂಭಾಗದ ಬಾಗಿಲನ್ನು ಆಯುಧದಿಂದ ಮೀಟಿ ಒಳಗೆ ನುಗ್ಗಿ ಹಾಲ್‌ನಲ್ಲಿದ್ದ ಬೀರುವಿನ ಬಾಗಿಲು ತೆರೆದು ಸೇಫ್ಟಿ ಲಾಕರ್‌ಗಳನ್ನು ಮೀಟಿ ತೆಗೆದು ಲಾಕರ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳನತ ಮಾಡಿ, ಮನೆಯಲ್ಲಿ ಮಲಗಿದ್ದ ಸರೋಜಮ್ಮ ಅವರು ದಿಂಬಿನ ಕೆಳಗಿದ್ದ ಚಿನ್ನದ ಮಾಂಗಲ್ಯ ಸರ, ರೇಖಾ ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡಾಗ ರೇಖಾ ಅವರಿಗೆ ಎಚ್ಚರವಾಗಿ ಕಿರುಚಿಕೊಂಡಾಗ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


    ಮಳ್ಳವಳ್ಳಿ ತಾಲೂಕು, ರಾಮನಗರ, ಕನಕಪುರ, ಹುಲಿಯೂರು ಹಾಗೂ ಮೈಸೂರು ಸೇರಿದಂತೆ 15 ಕಡೆಗಳಲ್ಲಿ ಕಳ್ಳತನ ಮಾಡಿರುವ ಬಗೆ ತನಿಖೆಯಿಂದ ತಿಳಿದು ಬಂದಿದೆ.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಅಪರ ಪೊಲೀಸ್ ಪರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಡಿವೈಎಸ್ಪಿ ಎಂ.ಜೆ.ಪೃಥ್ವಿ, ಪಿಎಸ್‌ಐಗಳಾದ ಮಂಜೇಗೌಡ, ಮೋಹನ್ ಡಿ.ಪಟೇಲ್, ಪ್ರಭಾ ಇತರರು ಇದ್ದರು.

    ಪೊಲೀಸರಿಗೆ ನಗದು ಬಹುಮಾನ: ಕರೊನಾ ಸಂದರ್ಭದಲ್ಲಿ ಪಟ್ಟಣದ ಪೊಲೀಸರು ಚಿನ್ನಾಭರಣಗಳನ್ನು ಹಾಗೂ ಆರೋಪಿಗಳನ್ನು ಪತ್ತೆ ಮಾಡಿರುವ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಪೊಲೀಸರಿಗೆ ನಗದು ಬಹುಮಾನ ನೀಡಿದರು.
    ಮೂವರು ಕಳ್ಳತನ ಮಾಡುವಾಗ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಕಳ್ಳತನ ಮಾಡಿದ ನಂತರ ಮನೆಯಲ್ಲಿ ಮಲಗಿರುವ ಹೆಂಗಸರ ಕತ್ತಿನಲ್ಲಿರುವ ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗುವ ಪ್ರವೃತ್ತಿ ಹೊಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts