More

    ಮೂರನೇ ವರ್ಷದ ದನಗಳ ಜಾತ್ರೆಗೆ ಅದ್ದೂರಿ ಚಾಲನೆ

    ಮದ್ದೂರು: ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ 39ನೇ ವರ್ಷದ ಮಹದೇಶ್ವರಸ್ವಾಮಿ ಉತ್ಸವ ಮತ್ತು 3ನೇ ವರ್ಷದ ದನಗಳ ಜಾತ್ರೆಗೆ ಅದ್ದೂರಿ ಚಾಲನೆ ದೊರೆತಿದೆ.


    ದೇಗುಲದ ಆವರಣ ತಳಿರು ತೋರಣಗಳು ಮತ್ತು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ದನಗಳ ಜಾತ್ರೆ ಭಕ್ತರ ಕಣ್ಮನ ಸೆಳೆಯುತ್ತಿವೆ. ಜಾತ್ರೆಯಲ್ಲಿ 30 ಸಾವಿರದಿಂದ 3.50 ಲಕ್ಷ ಬೆಳೆ ಬಾಳುವ ಹಳ್ಳಿಕಾರ್ ಸೇರಿದಂತೆ ಇತರ ರಾಸುಗಳು ಮಾರಾಟಕ್ಕೆ ಪ್ರದರ್ಶಿಸಲಾಯಿತು.


    ಮಾ.24ರವರೆಗೆ ಜಾತ್ರೆ ನಡೆಯಲಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರೆಯಲ್ಲಿ ಮೈಸೂರು ರಾಜ ಮನೆತನದ ಸದಸ್ಯರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ ಎಂದು ದೇಗುಲದ ಪ್ರಧಾನ ಅರ್ಚಕ ಬಿ.ಸಿ.ದೇವರಾಜು ತಿಳಿಸಿದ್ದಾರೆ.


    ಸಂಕ್ರಾಂತಿ ಸಮಯದಲ್ಲಿ ಮದ್ದೂರು ತಾಲೂಕಿನ ಚಿಕ್ಕಂಕನಹಳ್ಳಿ ನಂದಿ ಬಸವೇಶ್ವರ ಸ್ವಾಮಿ ದನಗಳ ಜಾತ್ರೆ ಬಿಟ್ಟರೆ ಬೇರೆ ಕಡೆ ದನಗಳ ಜಾತ್ರೆ ನಡೆಯುವುದಿಲ್ಲ. ಚೊಟ್ಟನಹಳ್ಳಿ ಗ್ರಾಮದ ಮಲೆ ಮಹದೇಶ್ವರಸ್ವಾಮಿ ಸನ್ನಿಧಾನದಲ್ಲಿ ದನಗಳ ಜಾತ್ರೆ ಸಂಘಟಿಸಿರುವುದರಿಂದ ಈ ಭಾಗದ ರೈತರಿಗೆ ರಾಸುಗಳನ್ನು ಮಾರಾಟ ಮತ್ತು ಕೊಂಡುಕೊಳ್ಳಲು ಸಹಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts